ಬಾಹ್ಯಾಕಾಶಕ್ಕೆ ಹಾರಲು ಸಜ್ಜಾದ ಭಾರತದ ಸಿರಿಶಾ ಬಾಂಡ್ಲಾ ಬಾಲ್ಯದ ಫೋಟೋ ವೈರಲ್..!

ಭಾರತದ ಸಿರಿಶಾ ಬಾಂಡ್ಲಾ ಇಂದು ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದು ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಮೂಲದ ಏರೋನಾಟಿಕಲ್ ಶಿರಿಶಾ ಬಾಂಡ್ಲಾ ಇಂದು ನಾಲ್ಕನೇ ಯಾತ್ರಿಕರಾಗಿ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ಇದಕ್ಕೂ ಮುನ್ನ ಈ ಐತಿಹಾಸಿಕ ಕ್ಷಣದಲ್ಲಿ ಸಿರಿಶಾ ಬಾಂಡ್ಲಾ ಅವರು ತಮ್ಮ ಬಾಲ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಖಾಸಗಿ ಬಾಹ್ಯಾಕಾಶ ನೌಕೆಯೊಂದು ಭಾನುವಾರ ಅಮೆರಿಕದಿಂದ ಅಂತರಿಕ್ಷಕ್ಕೆ ಉಡಾವಣೆಯಾಗಲಿದೆ. ಈ ನೌಕೆಯ ನಾಲ್ಕನೇ ಯಾತ್ರಿಕರಾಗಿ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯಲ್ಲಿ ಜನಿಸಿ, ಈಗ ಅಮೆರಿಕದಲ್ಲಿ ನೆಲೆ ಕಂಡುಕೊಮಡಿರುವ 34 ವರ್ಷದ ಏರೋನಾಟಿಕಲ್ ಶಿರಿಶಾ ಬಾಂಡ್ಲಾ ತೆರಳುತ್ತಿದ್ದಾರೆ. 90 ನಿಮಿಷಗಳ ಈ ಯಾನ ಇಡೀ ವಿಶ್ವದ ಗಮನಸೆಳೆದಿದೆ.

2003ರಲ್ಲಿ ಬಾಹ್ಯಾಕಾಶ ಯಾನ ವೇಳೆ ಸಂಭವಿಸಿದ ಅಪಘಾತದಲ್ಲಿ ಮಡಿದ ಭಾರತದ ಮೂಲದ ಕಲ್ಪನಾ ಚಾವ್ಲಾ ನಂತರ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸುತ್ತಿರುವ ಭಾರತದಲ್ಲಿ ಜನಿಸಿದ 2ನೇ ಮಹಿಳೆ ಎಂಬ ಹಿರಿಮೆ ಶಿರಿಶಾ ಅವರದ್ದಾಗಿದೆ. ಇನ್ನೂ ಭಾರತೀಯ ಮೂಲದ ದಂಪತಿಗೆ ಹುಟ್ಟಿದ ಸುನಿತಾ ವಿಲಿಯಮ್ಸ್ ಲೆಕ್ಕಕ್ಕೆ ತೆಗೆದುಕೊಂಡರೆ ಇವರು ಮೂರನೆಯವರಾಗುತ್ತಾರೆ.

ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಸಂಜೆ 6.30ಕ್ಕೆ ಅಮೆರಿಕದ ನ್ಯೂಮೆಕ್ಸಿಕೋದಿಂದ ‘ ವಿಎಸ್ಎಸ್ ಯುನಿಟಿ’ಎಂಬ ಈ ಬಾಹ್ಯಾಕಾಶ ನೌಕೆಯನ್ನು ‘ವಿಎಂಎಸ್ ಈವ್’ ಎಂಬ ಮಾತೃನೌಕೆ ಹೊತ್ತೊಯ್ಯಲಿದೆ. ಶಿರಿಶಾ ಸೇರಿ 6 ಮಂದಿ ಯಾತ್ರಿಕರು 4 ನಿಮಿಷಗಳ ಕಾಲ ನಿರ್ವಾತದ ಅನುಭವ ಪಡೆಯಲಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights