ಅರಿಯದೆ ರೈಲು ಹಳಿಗೆ ಬಿದ್ದ ಬಾಲಕ : ಸಿನಿಮಾ ಸ್ಟೈಲ್ ನಲ್ಲಿ ಬಾಲಕನ್ನನ್ನು ಕಾಪಾಡಿದ ಭೂಪ…!

ರೈಲು ಹಳಿಯ ಮೇಲೆ ಬಿದ್ದ ಮುಗುವನ್ನು ಸಿನಿಮಾ ಸ್ಟೈಲ್ ನಲ್ಲಿ ವ್ಯಕ್ತಿಯೋರ್ವ ರಕ್ಷಣೆ ಮಾಡಿದ ಘಟನೆ ಮುಂಬೈನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಹೌದು.. ಮುಂಬೈನ ವಂಗಾನಿ ರೈಲ್ವೇ ನಿಲ್ದಾಣದಲ್ಲಿ ಮಯೂರ ಶೆಲ್ಕೆ ತಮ್ಮ ಜೀವ ಪಣಕ್ಕಿಟ್ಟು ಬಾಲಕನನ್ನು ಕಾಪಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಜನ ಮೆಚ್ಚುಗೆ ಪಡೆದುಕೊಂಡಿದೆ. ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬಳು ಪುಟ್ಟ ಬಾಲಕನೊಂದಿಗೆ ರೈಲ್ವೆ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಾಲಕ ರೈಲ್ವೆ ಹಳಿ ಬಳಿ ಮಹಿಳೆಯ ಕೈ ಹಿಡುದುಕೊಂಡೇ ಹೋಗುತ್ತಾನೆ. ಆದರೆ ಮಹಿಳೆ ಕೈ ಬಿಡಿಸಿಕೊಂಡ ಬಾಲಕ ಆಯ ತಪ್ಪಿ ರೈಲು ಹಳಿ ಮೇಲೆ ಬೀಳುತ್ತಾನೆ. ಬಾಲಕ ಹಳಿ ಮೇಲೆ ಬೀಳುತ್ತಿದ್ದಂತೆ ರೈಲು ಕೆಲವೇ ಅಡಿ ಅಂತರದಲ್ಲಿ ಆಗಮಿಸುತ್ತಿರುವುದನ್ನು ಕಂಡ ಮಯೂರ ಬಾಲಕನ ರಕ್ಷಣೆಗೆ ದಾವಿಸುತ್ತಾರೆ.

ಬಾಲಕನನ್ನು ಕೂಡಲೆ ಎತ್ತಿ ಹಳಿ ಬದಿ ಹಾಕುತ್ತಾ ತಾನೂ ಕೂಡ ಹಳಿ ಮೇಲಿನಿಂದ ಹೊರಬರುತ್ತಿದ್ದಂತೆ ರೈಲು ಪಾಸಾಗುವ ದೃಶ್ಯ ನಿಜಕ್ಕೂ ಎಂಥವರ ಎದೆ ಝಲ್ ಎನಿಸುತ್ತೆ. ಮಕ್ಕಳ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಕಡಿಮೆ ಅನ್ನೋದಕ್ಕೆ ಇದೊಂದು ನಿದರ್ಶನ. ಬಾಲಕನ ಕೈ ಹಿಡಿದುಕೊಂಡು ಮಹಿಳೆ ಹೋಗುತ್ತಿದ್ದರೂ ಈ ಘಟನೆ ಸಂಭವಿಸಿದೆ. ಆದರೆ ಬಾಲಕನ ಅದೃಷ್ಟ ಚನ್ನಾಗಿತ್ತು. ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ಭಾರಿ ವೈರಲ್ ಆದಾಗಿನಿಂದಲೂ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights