67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ಕನ್ನಡ ಚಿತ್ರ ಅಕ್ಷಿ‌; ಅತ್ಯುತ್ತಮ ನಟ ಧನುಷ್!‌

ಕೊರೊನಾ ವೈರಸ್‌ ಹಾವಳಿಯಿಂದಾಗಿ ಎದುರಾದ ಧೀರ್ಘಾವಧಿಯ ಲಾಕ್‌ಡೌನ್‌ ನಂತರ, 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸೋಮವಾರ ಘೋಷಿಸಲಾಗಿದೆ.

ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆಯುತ್ತಿರುವ ಈ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 2019 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದ ಅಥವಾ ಕೊಡುಗೆ ನೀಡಿದವರನ್ನು ಪರಿಗಣಿಸಲಾಗಿದೆ.

ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ, ಮಲಯಾಳಂ ಚಿತ್ರ ‘ಬಿರಿಯಾನಿ’ ವಿಶೇಷ ಉಲ್ಲೇಖವನ್ನು ಪಡೆದುಕೊಂಡಿದೆ. ಧನುಷ್ ಅಭಿನಯದ ವೆಟ್ರಿಮಾರನ್ ಅವರ ‘ಅಸುರನ್’ ಅತ್ಯುತ್ತಮ ತಮಿಳು ಚಲನಚಿತ್ರ ಪ್ರಶಸ್ತಿ ಗೆದ್ದಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ‘ಚಿಚೋರ್’ ಹಿಂದಿಯಲ್ಲಿ ಅತ್ಯುತ್ತಮ ಚಲನಚಿತ್ರವೆಂದು ಪ್ರಶಸ್ತಿ ಗೆದ್ದಿದೆ.

ಇತರ ಭಾಷೆಗಳಲ್ಲಿ ಅತ್ಯುತ್ತಮ ಚಲನಚಿತ್ರಗಳ ಪಟ್ಟಿ ಹೀಗಿದೆ:

ವಿಶೇಷ ಉಲ್ಲೇಖ: ಬಿರಿಯಾನಿ (ಮಲಯಾಳಂ), ಜೊನಕಿ ಪೊರುವಾ (ಅಸ್ಸಾಮೀಸ್), ಲತಾ ಭಗವಾನ್ ಕರೇ (ಮರಾಠಿ), ಪಿಕಾಸೊ (ಮರಾಠಿ)

ಅತ್ಯುತ್ತಮ ತುಳು ಚಿತ್ರ: ಪಿಂಗರಾ
ಅತ್ಯುತ್ತಮ ತೆಲುಗು ಚಲನಚಿತ್ರ: ಜರ್ಸಿ
ಅತ್ಯುತ್ತಮ ತಮಿಳು ಚಿತ್ರ: ಅಸುರನ್
ಅತ್ಯುತ್ತಮ ಮಲಯಾಳಂ ಚಿತ್ರ: ಕಲ್ಲಾ ನೋಟಂ
ಅತ್ಯುತ್ತಮ ಕನ್ನಡ ಚಿತ್ರ: ಅಕ್ಷಿ
ಅತ್ಯುತ್ತಮ ಹಿಂದಿ ಚಲನಚಿತ್ರ: ಚಿಚೋರ್
ಅತ್ಯುತ್ತಮ ಬಂಗಾಳಿ ಚಲನಚಿತ್ರ: ಗುಮ್ನಾಮಿ
ಅತ್ಯುತ್ತಮ ತುಳು ಚಿತ್ರ: ಪಿಂಗರಾ
ಅತ್ಯುತ್ತಮ ಪಾನಿಯಾ ಚಿತ್ರ: ಕೆಂಜೀರಾ
ಅತ್ಯುತ್ತಮ ಮಿಶಿಂಗ್ ಚಿತ್ರ: ಅನು ರುವಾಡ್
ಅತ್ಯುತ್ತಮ ಖಾಸಿ ಚಲನಚಿತ್ರ: ಲೆವ್ದುಹ್
ಅತ್ಯುತ್ತಮ ಹರ್ಯಾನ್ವಿ ಚಿತ್ರ: ಚೋರಿಯನ್ ಚೋರೊನ್ ಸೆ ಕಾಮ್ ನಹಿ ಹೋತಿ
ಅತ್ಯುತ್ತಮ ಛತ್ತೀಸ್‌ಘರಿ ಚಲನಚಿತ್ರ: ಭೂಲನ್ ದಿ ಮೇಜ್
ಅತ್ಯುತ್ತಮ ಪಂಜಾಬಿ ಚಲನಚಿತ್ರ: ರಬ್ ಡಾ ರೇಡಿಯೋ 2
ಅತ್ಯುತ್ತಮ ಒಡಿಯಾ ಚಿತ್ರ: ಸಲಾ ಬುಧರ್ ಬದ್ಲಾ ಮತ್ತು ಕಲಿರಾ ಅತಿಟಾ
ಅತ್ಯುತ್ತಮ ಮಣಿಪುರಿ ಚಿತ್ರ: ಈಗಿ ಕೋನಾ
ಅತ್ಯುತ್ತಮ ಮರಾಠಿ ಚಿತ್ರ: ಬಾರ್ಡೋ
ಅತ್ಯುತ್ತಮ ಕೊಂಕಣಿ ಚಲನಚಿತ್ರ: ಕಾಜ್ರೊ
ಅತ್ಯುತ್ತಮ ಬಂಗಾಳಿ ಚಲನಚಿತ್ರ: ಗುಮ್ನಾಮಿ
ಅತ್ಯುತ್ತಮ ಅಸ್ಸಾಮೀಸ್ ಚಲನಚಿತ್ರ: ರೋನುವಾ- ಹೂ ನೆವರ್‌ ಸರೆಂಡರ್‌

‘ದಿ ತಾಷ್ಕೆಂಟ್ ಫೈಲ್ಸ್’ ಚಿತ್ರಕ್ಕಾಗಿ ಪಲ್ಲವಿ ಜೋಶಿ ಅತ್ಯುತ್ತಮ ಪೋಷಕ ನಟಿ ಮತ್ತು ‘ಸೂಪರ್ ಡಿಲಕ್ಸ್’ ಚಿತ್ರಕ್ಕೆ ವಿಜಯ್ ಸೇತುಪತಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.

ಏತನ್ಮಧ್ಯೆ, ಅತ್ಯುತ್ತಮ ನಟ ಪ್ರಶಸ್ತಿಯನ್ನು ಭೋನ್ಸ್ಲೇ ಸಿನಿಮಾದಾಗಿ ಮನೋಜ್ ಬಾಜಪೇಯಿ ಮತ್ತು ಅಸುರನ್ ಚಿತ್ರಕ್ಕಾಗಿ ಧನುಷ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಯುವರತ್ನ’ ಸಿನಿಮಾ ಪ್ರಚಾರಕ್ಕಾಗಿ ಬಳ್ಳಾರಿಗೆ ಭೇಟಿ ನೀಡಿದ ಪವರ್ ಸ್ಟಾರ್…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights