ರಫೇಲ್ ಖರೀದಿ ಡೀಲ್ ನಲ್ಲಿ 60 ಕೋಟಿ ಗಿಫ್ಟ್ : ಬಿಜೆಪಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ!

2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಯುದ್ಧ ವಿಮಾನ ಖರೀದಿ ವ್ಯವಹಾರ ಹೊಸ ತಿರುವು ಪಡೆದುಕೊಂಡಿದೆ. ರಫೇಲ್ ಖರೀದಿ ವೇಳೆ ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಭಾರತದ ಓರ್ವ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಗಿಫ್ಟ್ ರೂಪದಲ್ಲಿ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಹೌದು… 2017ರ ಡಸಾಲ್ಟ್ ಸಮೂಹದ ಲೆಕ್ಕ ಪತ್ರಗಳನ್ನು ಪರಿಶೀಲಿಸಿದಾಗ ಮಧ್ಯವರ್ತಿ ಗ್ರಾಹಕರಿಗೆ ಗಿಫ್ಟ್ ರೂಪದಲ್ಲಿ 1.1 ಮಿಲಿಯನ್ ವರ್ಗಾವಣೆ ಆಗಿರೋದು ಬೆಳಕಿಗೆ ಬಂದಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲಾ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ರಫೇಲ್ ವ್ಯವಹಾರದಲ್ಲಿ 60 ಕೋಟಿ ಅವ್ಯವಹಾರದ ಸತ್ಯ ಬಯಲಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ 2021ರಲ್ಲಿ ಫ್ರಾನ್ಸ್ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ (ಎಂಎಂಆರ್ ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯ 18 ರಫೇಲ್ ಜೆಟ್ ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್ಎಎಲ್ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು.

ಏಪ್ರಿಲ್ 10, 2015ರಲ್ಲಿ ಪ್ರಧಾನಿ ಮೋದಿ ರಫೆಲ್ ಒಪ್ಪಂದವನ್ನ ಘೋಷಿಸಿದ್ದರು. ಬಳಿಕ ಹೆಚ್ ಎಎಲ್ ಪಾಲಾಗಬೇಕಿದ್ದ ಸಾಲದ ಹೊರೆಯಲ್ಲಿರುವ ಅಂಬಾನಿಗೆ ಮೋದಿಗೆವರದಾನ ನೀಡಿದೆ. ರಫೇಲ್ ವ್ಯವಹಾರ ಘೋಷಿಸುವ ವೇಳೆ ಯಾಔಉದೇ ರಕ್ಷಣಾ ಖರೀದಿ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು.

ಪ್ರಧಾನಿ ಏಕಪಕ್ಷೀಯವಾಗಿಯೇ ವ್ಯವಹಾರ ಘೋಷಿಸಿದ್ದಾರೆ. ರಕ್ಷನಾ ಸಚಿವರೂ, ಸಮಿತಿಗೂ ಮಾಹಿತಿ ಇಲ್ಲ. 36 ವಿಮಾನಗಳ ಖರೀದಿಗೆ ಈ ಹಿಂದೆ ಯುಪಿಎ ಒಪ್ಪಿಕೊಂಡಿದ್ದ ಬೆಲೆಗಿಂತಲೂ ಹೆಚ್ಚು ಹಣ ಸಂದಾಯ ಮಾಡಲಾಗಿದೆ. ರಫೇಲ್ ವ್ಯವಹಾರ ಘೋಷಣೆಯಾದ ಸಂದರ್ಭದಲ್ಲಿ ಅನಿಲ್ ಅಂಬಾನಿ ಕಂಪನೀಯ ಅಸ್ತಿತ್ವದಲ್ಲಿ ಇರಲಿಲ್ಲ. ರಫೇಲ್ ಡೀಲ್ ಸಿಕ್ಕ ಕೆಲ ದಿನಗಳ ಬಳಿಕವಷ್ಟೇ ಅನಿಲ್ ಅಂಬಾನಿ ವಿಮಾನ ುತ್ಪಾದನೆಗಾಗಿ ಪ್ರತ್ಯೇಕ ಕಂಪನಿ ಸ್ಥಾಪಿಸಿದ್ದರು. 126 ವಿಮಾನಗಳಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ 36 ವಿಮಾನಗಳ ಖರೀದಿ ಮಾಡಲಾಗಿದೆ. 108 ವಿಮಾನಗಳಲ್ಲಿ ಭಾರತದಲ್ಲೇ ಉತ್ಪಾದಿಸಿ’ ಸಹಭಾಗಿತ್ವದಲ್ಲಿ ಭಾತದಲ್ಲೇ ಉತ್ಪಾದನೆಗೆ ಒಪ್ಪಿಗೆ ನೀಡಲಾಗಿದೆ ಅಂತ ಕಾಂಗ್ರೆಸ್ ಆರೋಪಿಸಿತ್ತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights