ಬಿಜೆಪಿ ನಾಯಕರ ಮನೆ ಮೇಲೆ ಗ್ರೆನೇಡ್ ದಾಳಿ : 4 ವರ್ಷದ ಮಗು ಸಾವು, 7 ಜನರಿಗೆ ಗಾಯ!

ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಬಿಜೆಪಿ ನಾಯಕರ ಮನೆ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ಮಾಡಿದ್ದು 4 ವರ್ಷದ ಮಗು ಸಾವನ್ನಪ್ಪಿ 7 ಜನರು ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಖಂಡ್ಲಿ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಜಸ್ಬೀರ್ ಸಿಂಗ್ ಅವರ ಮನೆಯ ಮೇಲೆ ಗುರುವಾರ ನಡೆದ ಗ್ರೆನೇಡ್ ದಾಳಿಯಲ್ಲಿ  4 ವರ್ಷದ ಮಗು ಸಾವನ್ನಪ್ಪಿದ್ದು, 7 ಜನರು ಗಾಯಗೊಂಡಿದ್ದಾರೆ. ಮೃತ ಮಗುವನ್ನು ಜಸ್ಬೀರ್ ಸಿಂಗ್ ಅವರ ಸೋದರಳಿಯ ಎಂದು ಗುರುತಿಸಲಾಗಿದೆ.

ಕುಟುಂಬಸ್ಥರು ಟೆರೇಸ್‌ನಲ್ಲಿದ್ದಾಗ ರಾಜೌರಿಯ ಖಾಂಡ್ಲಿ ಪ್ರದೇಶದಲ್ಲಿ ಬಿಜೆಪಿ ನಾಯಕ ಜಸ್ಬೀರ್ ಸಿಂಗ್ ಅವರ ಮನೆಯ ಮೇಲೆ ಅಪರಿಚಿತರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಜಮ್ಮು ಎಡಿಜಿಪಿ ದೃಢಪಡಿಸಿದ್ದಾರೆ.

ಗ್ರೆನೇಡ್ ದಾಳಿಯ ಹೊಣೆಯನ್ನು ಪೀಪಲ್ಸ್ ವಿರೋಧಿ ಫ್ಯಾಸಿಸ್ಟ್ ಫ್ರಂಟ್ (PAFF) ಹೊತ್ತುಕೊಂಡಿದೆ. ಜಸ್ಬೀರ್ ಸಿಂಗ್ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆದ ಹಿನ್ನೆಲೆಯಲ್ಲಿ ರಾಜೌರಿಯಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights