ಮದುವೆಯ ಸುಳ್ಳು ಭರವಸೆ; ಯುವತಿ ಮೇಲೆ 2 ವ‍ರ್ಷಗಳ ಕಾಲ ನಿರಂತರ ಅತ್ಯಾಚಾರ!

ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ 22 ವರ್ಷದ ಯುವತಿ ಮೇಲೆ 2 ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.

ಮಹೋಬಾ ಜಿಲ್ಲೆ ಮೂಲದ ಯುವತಿ ಅತ್ಯಾಚಾರಕ್ಕೆ ಒಳಗಾಗಿದ್ದು, ಆಕೆ ಗುರುವಾರ ಸಂಜೆ ಸಿಟಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾಗುವ ಸುಳ್ಳು ಭರವಸೆಯನ್ನು ನೀಡಿ, ಕಳೆದ ಎರಡು ವರ್ಷಗಳಿಂದ ನೆರೆಹೊರೆಯವನಾದ ಆರೋಪಿ ಉತ್ಕರ್ಶ್ ಸಚನ್ (25) ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಜೈಶ್ಯಾಮ್ ಶುಕ್ಲಾ ಹೇಳಿದ್ದಾರೆ.

ಆಕೆ ತನ್ನು ಮದುವೆಯಾಗುವಂತೆ ಕೇಳಿದಾಗ ಆಕೆಯನ್ನು ಕೊಲ್ಲುವುದಾಗಿ ಆತ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಬರೆದಿರುವುದಾಗಿ ಶುಕ್ಲಾ ಹೇಳಿದ್ದಾರೆ.

ಹಮೀರ್‌ಪುರ ಮೂಲದ ಆರೋಪಿ, ಕಾನ್ಪುರದಲ್ಲಿ ತನಗೆ ಕೆಲಸ ಸಿಕ್ಕ ನಂತರ ಸುಮಾರು ಒಂದು ತಿಂಗಳ ಹಿಂದೆ ಅಲ್ಲಿಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ಬಂಧಿಸಲು ತಂಡಗಳನ್ನು ಹಮೀರ್‌ಪುರ ಮತ್ತು ಕಾನ್ಪುರಕ್ಕೆ ಕಳುಹಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದೆ.

ಇದನ್ನೂ ಓದಿ: TRP ಹಗರಣ: ಮನಿ ಲಾಂಡರಿಂಗ್ ನಡೆಸಿದ್ದ 3 ಚಾನೆಲ್‌ಗಳ 32 ಕೋಟಿ ಮೌಲ್ಯದ ಆಸ್ತಿ ಇ.ಡಿ ವಶಕ್ಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights