12ನೇ ಮಹಡಿಯಿಂದ ಬಿದ್ದ 2 ವರ್ಷದ ಮಗುವನ್ನು ಕ್ಯಾಚ್ ಹಿಡಿದ ಡೆಲಿವರಿ ಮ್ಯಾನ್!

ವಿಯೆಟ್ನಾಂನ ಹನ್ನೆರಡನೇ ಮಹಡಿಯಲ್ಲಿರುವ ತನ್ನ ನಿವಾಸದ ಬಾಲ್ಕನಿಯಿಂದ ಬಿದ್ದ ಎರಡು ವರ್ಷದ ಬಾಲಕಿಯ ಜೀವ ಉಳಿಸಿದ್ದಕ್ಕಾಗಿ ಅಡೆಲಿವರಿ ಬಾಯ್ ಸಾಮಾಜಿಕ ಮಾಧ್ಯಮದಿಂದ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾನೆ. ಯುನಿಕಾನಲ್ ಟ್ವೀಟ್ ಮಾಡಿದ ಕಿರು ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಂತರ್ಜಾಲ ವ್ಯಕ್ತಿಯನ್ನು ಶ್ಲಾಘಿಸಿದೆ.

ಭಾನುವಾರ ನ್ಗುಯೆನ್ ನ್ಗೋಕ್ ಮಾನ್ಹ್ ಎಂಬ ಡೆಲಿವರಿ ಮ್ಯಾಣ್ ತನ್ನ ಟ್ರಕ್ನಲ್ಲಿ ಕುಳಿತಿದ್ದ. ಹನೋಯಿಯಲ್ಲಿ ಪ್ಯಾಕೇಜ್ ತಲುಪಿಸಲು ಕಾಯುತ್ತಿದ್ದ. ಸ್ವಲ್ಪ ಸಮಯದ ನಂತರ ಮಗು ಕಟ್ಟಡದಿಂದ ನೇತಾಡುತ್ತಿರುವುದನ್ನು ಮತ್ತು ಒಂದು ಕೈಯಿಂದ ಬಾಲ್ಕನಿಯಲ್ಲಿ ಅಂಚಿನಲ್ಲಿ ಅಂಟಿಕೊಂಡು ನೇತಾಡುತ್ತಿರುವುದನ್ನು ಅವನು ಗಮನಿಸಿದ್ದಾನೆ.

ಆ ವ್ಯಕ್ತಿ ಸ್ಥಳಕ್ಕೆ ಧಾವಿಸಿ ಮಗುವನ್ನು ಹಿಡಿಯಲು ಕಟ್ಟಡದ ಕೆಳ ಹಂತದಲ್ಲಿರುವ ಟೈಲ್ ಛಾಣಿಯ ಮೇಲೆ ಹತ್ತಿದ್ದಾನೆ. ವೀಡಿಯೊದಲ್ಲಿ ನೋಡಿದಂತೆ ಮಗುವಿನ ತಾಯಿ ಮಗು ತನ್ನ ಹಿಡಿತವನ್ನು ಕಳೆದುಕೊಂಡು ಬಾಲ್ಕನಿಯಿಂದ ಬಿಳುವಾಗ ಗಾಬರಿಯಿಂದ ಕಿರುಚುತ್ತಿರುವುದನ್ನ ಕಾಣಬಹುದು.

ಅದೃಷ್ಟವಶಾತ್, ನ್ಗುಯೇನ್ ಹುಡುಗಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವೀಡಿಯೊವನ್ನು ಇಲ್ಲಿ ನೋಡಿ:

https://twitter.com/Unicanal/status/1366438688557834240?ref_src=twsrc%5Etfw%7Ctwcamp%5Etweetembed%7Ctwterm%5E1366438688557834240%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2F2-year-old-girl-falls-from-12th-storey-delivery-man-catches-her-scary-viral-video-1775521-2021-03-04

ಸ್ಥಳೀಯ ಪತ್ರಿಕೆ ಜೊತೆ ಮಾತನಾಡಿದ ನ್ಗುಯೆನ್, ಮಗುವನ್ನು ಹಿಡಿದ ನಂತರ ಮಗುವಿನ ಬಾಯಿಯಿಂದ ರಕ್ತ ಸೋರಿಕೆಯಾಗುತ್ತಿತ್ತು. ಹೀಗಾಗಿ ಮಗುವನ್ನು ಹತ್ತಿರದ ರಾಷ್ಟ್ರೀಯ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ನನ್ನ ಕೈಯಲ್ಲಿ ಸ್ವಲ್ಪ ಉಳುಕು ಸಹ ಕಾಣಿಸಿಕೊಂಡಿದೆ. ನಾನು ಮಗು ಜೀವವನ್ನು ಉಳಿಸಿದೆ ಎಂದು ನನಗೆ ನಂಬಲಾಗಲಿಲ್ಲ “ಎಂದು ನ್ಗುಯೇನ್ ವಿಎನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights