ಬಂಗಾಳದಲ್ಲಿ ಸ್ಪರ್ಧಿಸಿ ಗೆದ್ದ ಇಬ್ಬರು ಬಿಜೆಪಿ ಸಂಸದರ ರಾಜೀನಾಮೆ…!

ಬಂಗಾಳದಲ್ಲಿ ಸ್ಪರ್ಧಿಸಿ ಗೆದ್ದ ಇಬ್ಬರು ಬಿಜೆಪಿ ಸಂಸದರು ರಾಜೀನಾಮೆ ನೀಡಿದ್ದಾರೆ. ಇದರಿಂದ ಬಂಗಾಳ ವಿಧಾನಸಭೆಯ 77 ಬಿಜೆಪಿ ಶಾಸಕರ ಸಂಖ್ಯೆ 75 ಕ್ಕೆ ಇಳಿದಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನಿಶಿತ್ ಪ್ರಮಣಿಕ್ ಮತ್ತು ಜಗನ್ನಾಥ್ ಸರ್ಕಾರ್ ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಬುಧವಾರ ಮಧ್ಯಾಹ್ನ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ.

“ಬಂಗಾಳದಲ್ಲಿ ಫಲಿತಾಂಶಗಳು ನಿರೀಕ್ಷೆಯಂತೆ ಇರಲಿಲ್ಲ. ಬಿಜೆಪಿ ಸರ್ಕಾರ ರಚನೆಗೆ ನಮ್ಮದು ಪ್ರಮುಖ ಪಾತ್ರವಿದೆ. ಈಗ ಅದನ್ನು ಪರಿಗಣಿಸಲಾಗುತ್ತಿಲ್ಲ, ಆದ್ದರಿಂದ ನಾವು ಸಂಸದರಾಗಿ ಉಳಿದು ಶಾಸಕರಾಗಿ ರಾಜೀನಾಮೆ ನೀಡಬೇಕು ಎಂದು ಪಕ್ಷ ಹೇಳಿದೆ. ಅದಕ್ಕಾಗಿಯೇ ನಾವು ಇದನ್ನು ಮಾಡುತ್ತಿದ್ದೇವೆ “ಎಂದು ರಣಘಾಟ್‌ನ ಬಿಜೆಪಿ ಸಂಸದ ಜಗನ್ನಾಥ ಸರ್ಕಾರ್ ಹೇಳಿದರು. ನಾಡಿಯಾ ಜಿಲ್ಲೆಯ ಸ್ಯಾಂಟಿಪುರ ಅಸೆಂಬ್ಲಿ ಸ್ಥಾನದಿಂದ ಅವರು ಗೆದ್ದಿದ್ದರು.

ಸಂಸದರಾದ ಪ್ರಮಣಿಕ್ ಮತ್ತು ಸರ್ಕಾರ್ ಇಬ್ಬರೂ ಕೇಂದ್ರ ಭದ್ರತೆಯನ್ನು ಹೊಂದಿದ್ದಾರೆ. ಬಿಜೆಪಿಯ ನಂದಿಗ್ರಾಮ್ ಶಾಸಕ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸುವೇಂದು ಅಧಿಕಾರಿಯ ಹಾಗೆ ಇವರಿಗೆ ಝಡ್-ಪ್ಲಸ್ ಭದ್ರತೆ ಇದೆ.

ಎಲ್ಲಾ ಬಿಜೆಪಿ ಶಾಸಕರಿಗೆ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಕೇಂದ್ರ ಭದ್ರತೆಯನ್ನು ಒದಗಿಸಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights