10 ವರ್ಷ ಭೂಕಂಪನದಿಂದಾಗಿ ನಿಂತು ಪುನ: ಭೂಕಂಪನದಿಂದಲೇ ಪ್ರಾರಂಭಗೊಂಡ 100 ವರ್ಷಗಳ ಗಡಿಯಾರ!

ಜಪಾನಿನ 100 ವರ್ಷಗಳ ಹಳೆಯ ಗಡಿಯಾರವೊಂದು 10 ವರ್ಷ ಭೂಕಂಪನದಿಂದ ನಿಂತು ಹೋಗಿ ಪುನ: ಭೂಕಂಪನದಿಂದಲೇ ಆರಂಭಗೊಂಡ ಅಪರೂಪದ ಘಟನೆ ನಡೆದಿದೆ.

ಹೌದು…  2011 ರಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ನಿಂತು ಹೋಗಿದ್ದ ಜಪಾನಿನ 100 ವರ್ಷಗಳ ಹಳೆಯ ಗಡಿಯಾರವೊಂದು ಪುನ: 2021ರಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಪ್ರಾರಂಭಗೊಂಡಿದೆ. ಮಾರ್ಚ್ 2011 ರಲ್ಲಿ, ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ಭೀಕರ ಭೂಕಂಪನದಿಂದಾಗಿ ಸುನಾಮಿ ಸಂಭವಿಸಿತ್ತು.

ಆ ಸಮಯದಲ್ಲಿ ಗಡಿಯಾರವನ್ನು ಯಮಮೊಟೊದ ಬೌದ್ಧ ಫುಮೊಂಜಿ ದೇವಾಲಯವೊಂದರಲ್ಲಿ ಸಂಗ್ರಹಿಸಲಾಗಿತ್ತು. ಈ ಪ್ರದೇಶದ ಮೇಲೆ ಸುನಾಮಿ ಅಲೆಗಳು ಅಪ್ಪಳಿಸಿದಾಗ ಆ ಪ್ರದೇಶ ಸಂಪೂರ್ಣವಾಗಿ ಮುಳುಗಿತ್ತು. ದೇವಾಲಯದ ಕಂಬಗಳು ಮತ್ತು ಮೇಲ್ ಛಾವಣಿ ಮಾತ್ರ ವಿಪತ್ತಿನಿಂದ ಉಳಿದಿತ್ತು. ಗಡಿಯಾರವೂ ಹಾನಿಗೊಳಗಾಗಿತ್ತು. ದುರಂತದ ನಂತರ ದೇವಾಲಯದ ಮುಖ್ಯ ಅರ್ಚಕ ಮತ್ತು ಗಡಿಯಾರದ ಮಾಲೀಕರಾದ ಬನ್ಸುನ್ ಸಕಾನೊ ಗಡಿಯಾರವನ್ನು ಅವಶೇಷಗಳಿಂದ ರಕ್ಷಿಸಿದರು. ಮಾಲೀಕ ಬನ್ಸುನ್ ಸಕಾನೊ ಮುರಿದ ಗಡಿಯಾರವನ್ನು ಸರಿಪಡಿಸಲು ಪ್ರಯತ್ನಿಸಿದರಾದರೂ ಯಾವುದೇ ಯಶಸ್ಸು ಕಾಣಲಿಲ್ಲ.

ಹತ್ತು ವರ್ಷಗಳ ನಂತರ ಫೆಬ್ರವರಿ 2021 ರ 13 ರಂದು, ಜಪಾನ್ ನ ಇದೇ ಪ್ರದೇಶ ಮತ್ತೊಂದು ಭೂಕಂಪಕ್ಕೆ ಸಾಕ್ಷಿಯಾಗಿತ್ತು. ಮರುದಿನ ಬೆಳಿಗ್ಗೆ, ಸಕಾನೊ ತನ್ನ ದಿನಚರಿಯೊಂದಿಗೆ ಮುಂದುವರಿಯುತ್ತಿದ್ದಾಗ, ಅವನಿಗೆ ಒಂದು ಶಬ್ದ ಕೇಳಿಸಿದೆ. ಅದು ಗಡಿಯಾರದ ಶಬ್ದವಾಗಿತ್ತು. ಮತ್ತೆ ತನ್ನದೇ ಆದ ಕೆಲಸ ಮಾಡಲು ಪ್ರಾರಂಭಿಸಿತ್ತು. ಬರೊಬ್ಬರಿ 10 ವರ್ಷಗಳ ನಂತರ ತಾನೇ ಮರುಪ್ರಾರಂಭಗೊಂಡಿದೆ. ಗಡಿಯಾರದೊಳಗೆ ಧೂಳು ಹೊಕ್ಕು 2021 ರ ಭೂಕಂಪದೊಂದಿಗೆ ಅದು ಸಡಿಲವಾಗಿ ಗಡಿಯಾರ ಪುನ: ಪ್ರಾರಂಭಗೊಂಡಿರಬಹುದು ಎಂದು ಅನುಮಾನಿಸಲಾಗಿದೆ.

2011 ರ ಭೂಕಂಪ ಮತ್ತು ಸುನಾಮಿಯಿಂದ ಮಿಯಾಗಿ ಮತ್ತು ಫುಕುಶಿಮಾ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಸೇರಿವೆ. ಈ ವೇಳೆ 18,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights