ಮಹಾತ್ಮಾ ಗಾಂಧಿಜಿಯಂತೆ ಉಡುಪು ಧರಿಸಿ ಕೊರೊನಾ ಪರೀಕ್ಷೆಗೆ ಬಂದ 10ರ ಬಾಲಕ!

ಇತ್ತೀಚೆಗೆ ತನ್ನ ಕೋವಿಡ್ -19 ಪರೀಕ್ಷೆ ಮಾಡಿಸಲು ಬಂದ ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ 10 ವರ್ಷದ ಬಾಲಕನಿಂದ ಜನಜಾಗೃತಿ ಮೂಡಿಸಲು ಮಾಡಿದ ಯೋಜನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾತ್ಮಾ ಗಾಂದೀಜೀಯಂತೆ ಉಡುಪು ಧರಿಸಿ ಬಾಲಕ ಕೊರೊನಾ ಪರೀಕ್ಷೆಗೆ ಆಗಮಿಸಿದ್ದಾನೆ. ಅಕ್ಟೋಬರ್ 2 ರಂದು ಆಚರಿಸಲಾಗುವ ಗಾಂಧಿ ಜಯಂತಿ ಹುಡುಗನನ್ನು ನೋಡಗರ ಕಣ್ಣ ಮುಂದೆ ಬಂದಿದೆ. ಪುಟ್ಟ ಹುಡುಗನ ಈ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ಪಡೆಯಲಾಗುತ್ತಿದೆ. ಜೊತೆಗೆ ಬಾಲಕನ ಚಿತ್ರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಬಿಳಿ ಬಟ್ಟೆಗಳನ್ನು ಧರಿಸಿ ಧೋತಿ ಸುತ್ತಿಕೊಂಡು ಶಾಲು ಹಾಕಿ ಮಹಾತ್ಮ ಗಾಂಧಿಯವರಂತೆ ಕನ್ನಡಕದೊಂದಿಗೆ ಹುಡುಗ ಪರೀಕ್ಷಾ ಕೇಂದ್ರಕ್ಕೆ ಬಂದನು. ಎಎನ್‌ಐ ಪ್ರಕಾರ, ಬಾಲಕನು ಈ ಕ್ರಮದಿಂದ ಪರೀಕ್ಷೆಗೆ ಒಳಗಾಗುವ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಯಸಿದ್ದನೆಂದು ಬಹಿರಂಗಪಡಿಸಲಾಗಿದೆ.

“ರಾಜ್‌ಕೋಟ್‌ನ 10 ವರ್ಷದ ಬಾಲಕ ಮಹಾತ್ಮ ಗಾಂಧಿಯಂತೆ ಉಡುಗೆ ತೊಟ್ಟು ಕೊರೊನಾ ಪರೀಕ್ಷೆಗೆ  ಹೋದನು” ಎಂಬ ಶೀರ್ಷಿಕೆಯೊಂದಿಗೆ ANI ಬಾಲಕನ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಈ ಬಗ್ಗೆ ಮಾತನಾಡಿದ ಬಾಲಕ, “ನನ್ನ ಸ್ವ್ಯಾಬ್ ಮಾದರಿಗಳನ್ನು ಕೊರೊನಾವೈರಸ್ ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಜನರು ಪರೀಕ್ಷೆಯ ಬಗ್ಗೆ ಭಯಪಡಬಾರದು. ನಾವು ಸಹಕರಿಸಿದರೆ ಮಾತ್ರ ನಮ್ಮ ದೇಶ ಆರೋಗ್ಯಕರವಾಗಿರುತ್ತದೆ” ಎಂದು ಹೇಳಿದರು.

ಟ್ವೀಟ್ ನೋಡಿ:

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights