ಹತ್ಯೆಯಾದ ಮಾಜಿ ಉಪಕುಲಪತಿ ಅಯ್ಯಣ್ಣ ದೊರೆ ಯಾರು ಗೊತ್ತಾ..?

ಅಲೈನ್ಸ್ ಯುನಿವರ್ಸಿಟಿ ಯ ಮಾಜಿ ಉಪಕುಲಪತಿ ಬೆಂಗಳೂರಿನಲ್ಲಿ ನೆಲೆಸಿದ್ದ ಅಯ್ಯಣ್ಣ ದೊರೆ ಹತ್ಯೆಯಾಗಿದೆ. ಅಷ್ಟಕ್ಕೂ ಇವರು ಯಾರು..? ಕೇವಲ ಕುಲಪತಿಗಳಾಗಿದ್ದವರಾ..? ಇದರ ಹೊರತಾಗಿ ಇವರಿಗೆ ಬೇರೆ ವ್ಯವಹಾರಗಳಿತ್ತಾ.? ಎಲ್ಲಿಯವರು..? ಇಂತೆಲ್ಲಾ ಪ್ರಶ್ನೆಗಳು ಕೊಲೆಯಾದ ಮಾಜಿ ಕುಲಪತಿಗಳ ಮೇಲೆ ಹರಿದಾಡ ತೊಡಗಿವೆ. ಅದಕ್ಕುತ್ತರ ಇಲ್ಲಿದೆ ನೋಡಿ….

ಕೊಲೆಯಾದ ಉದ್ಯಮಿ ಅಯ್ಯಪ್ಪ ದೊರೆ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದವರು. ಬಹಳ ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ 2018ರ ವಿಧಾನ ಸಭೆ ಚುನಾವಣೆಯಲ್ಲಿ ಮುದ್ದೇಬಿಹಾಳದಿಂದ ಸ್ಪರ್ಧಿಸಿದ್ದರು.

ಜನಸಾಮಾನ್ಯರ ಪಕ್ಷ ಸ್ಥಾಪಿಸಿ ಆ ಪಕ್ಷದಿಂದಲೇ ಸ್ಪರ್ಧಿಸಿ ಸೋತಿದ್ದರು. ಸರೂರ ಗ್ರಾಮದಲ್ಲಿ ಇವರ ಹಿರಿಯರ ಆಸ್ತಿ-ಪಾಸ್ತಿಗಳಿವೆ. ಸರೂರ ಬಳಿ ಸುಮಾರು 3 ರಿಂದ 40 ಎಕರೆ ಜಮೀನಿದೆ.

ಗೆದ್ದಲಮರಿ ಬಳಿ ಸುಮಾರು ತಿಂಗಳ ಹಿಂದೆ ಸುಮಾರು 16 ಎಕರೆ ಜಮೀನು,ಮಾಜಿ ಸಚಿವ ದಿ. ಆರ್. ಬಿ. ಚೌಧರಿ ಅವರ ಈಶ್ವರಿ ಫಾರ್ಮ್ಸ್ ಖರೀಸಿದಿದ್ದರು.

ಅತೀ ಕಡಿಮೆ ಅವಧಿಯಲ್ಲಿ ಕೋಟ್ಯಾಧೀಶರಾಗಿದ್ದರು. ಇವರಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಇವರೆಲ್ಲ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಡಾ. ಅಯ್ಯಪ್ಪ ದೊರೆ ಮುದ್ದೇಬಿಹಾಳದೊಂದಿಗೆ ಚುನಾವಣೆ ಹೊರತು ಪಡಿಸಿ ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲ. ರಾಜಕಾರಣಿಗಳ ಜೊತೆ ನಂಟೂ ಇತ್ತು.

ನಾನಾ ಪಕ್ಷಗಳ ರಾಜಕಾರಣಿಗಳ ಜೊತೆಯೂ ಉತ್ತಮ ಸ್ನೇಹ ಹೊಂದಿದ್ದರು. ಕಳೆದ 2018ರ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮದೇ ಆದ ಜನ ಸಾಮಾನ್ಯರ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಹಿಂದೆಯೂ ಒಂದು ಬಾರಿ ಮುದ್ದೇಬಿಹಾಳ ವಿಧಾನ ಸಭೆ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು.

ಇವರ ಸಹೋದರ ಬೀದರ ಜಿಲ್ಲೆಯಲ್ಲಿ ಉಪನ್ಯಾಸಕರಾಗಿದ್ದಾರೆ. ಇವರಿಗೆ ಐದು ಜನ ಸಹೋದರಿಯರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights