ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಕಠಿಣ ನೀತಿಗಳು ಬೇಕು: ಫೇಸ್‌ಬುಕ್‌ ಸಿಇಓಗೆ ಸಂಶೋಧಕರ ಪತ್ರ

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು “ಸುಳ್ಳು ಮಾಹಿತಿ ಮತ್ತು ದ್ವೇಷದ ಪೋಸ್ಟ್‌ಗಳನ್ನು ಹರಡಲು” ಡೊನಾಲ್ಡ್‌ ಟ್ರಂಪ್‌ ಅವರಿಗೆ ಫೇಸ್‌ಬುಕ್‌ ಅವಕಾಶ ನೀಡಬಾರದು ಎಂದು ಡಜನ್‌ಗಟ್ಟಲೆ ವಿಜ್ಞಾನಿಗಳು ಹೇಳಿದ್ದಾರೆ.

ಅಮೆರಿಕಾದ ಪ್ರಮುಖ ಸಂಶೋಧನಾ ಸಂಸ್ಥೆಗಳ ಪ್ರಾಧ್ಯಾಪಕರು ಸೇರಿದಂತೆ 60 ಜನ ಸಂಶೋಧಕರು ಶನಿವಾರ ಫೇಸ್‌ಬುಕ್ ಸಿಇಒಗೆ ಪತ್ರ ಬರೆದಿದ್ದಾರೆ. ಜನಾಂಗೀಯ ಅನ್ಯಾಯವನ್ನು ಎದುರಿಸುತ್ತಿರುವ ಇಂತಹ ಗೊಂದಲದ ವಾತಾವರಣದಲ್ಲಿ “ಜನರಿಗೆ ಹಾನಿ ಮಾಡುವ ತಪ್ಪು ಮಾಹಿತಿ ಮತ್ತು ದ್ವೇಷ ಹರಡುವ ಭಾಷೆಯ ಬಗ್ಗೆ ಕಠಿಣ ನೀತಿಗಳನ್ನು ಪರಿಗಣಿಸಿ” ಎಂದು ಜುಕರ್‌ಬರ್ಗ್ ಅವರನ್ನು ಒತ್ತಾಯಿಸಿದ್ದಾರೆ.

ಉದ್ದೇಶ ಪೂರ್ವಕ ಸುಳ್ಳು ಮಾಹಿತಿ ಹಾಗೂ ಸಮಾಜವನ್ನು ಒಡೆಯುವಂತಹ ಭಾಷೆಗಳ ಮೇಲೆ ಕಡಿವಾಣ ಹಾಕಬೇಕು. ಬಾಲ್ಯದ ಶಿಕ್ಷಣವನ್ನು ಉತ್ತೇಜನಗೊಳಿಸಲು ಮತ್ತು ಅಪರಾಧ ನ್ಯಾಯ ವ್ಯವಸ್ಥೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್‌ನನ್ನು ಶ್ವೇತ ವರ್ಣೀಯ ಪೊಲೀಸರು ಹತ್ಯೆ ಎಸಗಿದ್ದರು. ಈ ಹತ್ಯೆಯನ್ನು ವಿರೋಧಿಸಿ ಅಮೆರಿಕಾದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಪೋಸ್ಟ್‌ ಹಾಕಿದ್ದ ಅಧ್ಯಕ್ಷ ಟ್ರಂಪ್‌ ಅವರು “ಲೂಟಿ ಪ್ರಾರಂಭವಾದಾಗ, ಶೂಟ್‌ (ಗುಂಡಿನ ದಾಳಿ) ಗಳು ಆರಂಭವಾಗುತ್ತವೆ” ಎಂದು ಬರೆದಿದ್ದರು. “ಹಿಂಸೆಯನ್ನು ಪ್ರಚೋದಿಸುವ” ಇಂತಹ ಸ್ಪಷ್ಟ ಹೇಳಿಕೆ ವಿರುದ್ಧ ಕನಿಷ್ಟ ಲೇಬಲ್‌ ಕೂಡ ಹಾಕದೇ ಇರುವ ಫೇಸ್‌ಬುಕ್‌ನ ಸಿಇಓ ಜುಕರ್‌ಬರ್ಗ್ ನಿರ್ಧಾರವನ್ನು ಸಂಶೋಧಕರು ವಿರೋಧಿಸಿದ್ದಾರೆ.

ಚಾನ್‌ ಜುಕರ್‌ಬರ್ಗ್‌ ಅವರು ಒಂದು ಸಂದರ್ಶನದಲ್ಲಿ “ನಮ್ಮ ಸಿಬ್ಬಂದಿಗಳು, ಪಾಲುದಾದರು ಹಾಗೂ ಅನುದಾನ ನೀಡುವವರಿಗೆ ಕೃತಜ್ಞರಾಗಿದ್ದೇನೆ. ಅವರು ಫೇಸ್‌ಬುಕ್‌ನ ನೀತಿಗಳನ್ನೂ ಒಳಗೊಂಡತೆ ಅವರ ಅಭೀಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದಾರೆ. ಅವರೆಲ್ಲರ ಅಭಿಪ್ರಾಯವನ್ನು ನಾವು ಗೌರವಿಸುತ್ತೇವೆ” ಎಂದು ಹೇಳಿದ್ದರು.  ಆದರೆ, ಇಂದು ಟ್ರಂಪ್‌ ಹಾಗೂ ಇತರ ಕೆಲವು ರಾಜಕಾರಣಿಗಳು ಜನರನ್ನು ದಾರಿ ತಪ್ಪಿಸುವ ಹಾಗೂ ದ್ವೇಷವನ್ನು ಹರಡುವ ಪೋಸ್ಟ್‌ಗಳನ್ನು ಹಂಚುತ್ತಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಫೇಸ್‌ಬುಕ್‌ನ ಸಿಬ್ಬಂದಿಗಳು ಸಾರ್ವಜನಿಕವಾಗಿ ಪ್ರತಿಭಟನೆ ನಡಿಸಿದ್ದಾರೆ.

ಆದರೂ ಜುಕರ್‌ಬರ್ಗ್‌ ಯಾವುದೇ ಕ್ರಮವನ್ನೂ ಕೈಗೊಳ್ಳಲು ನಿರಾಕಸಿದ್ದಾರೆ. ಕಾರಣ ಫೇಸ್‌ಬುಕ್‌ನ ಬಹುಪಾಲು ಶೇರ್‌ಗಳನ್ನು ಅವರೇ ಹೊಂದಿದ್ದಾರೆ.

ಹಾಗಾಗಿ ಜುಕರ್‌ಬರ್ಗ್ ಅವರ ನಡೆಯನ್ನು ವಿರೋಧಿಸಿ ಸಂಶೋಧಕರು ಬರೆದಿರುವ ಈ ಪತ್ರಕ್ಕೆ 160ಕ್ಕೂ ಹೆಚ್ಚು ಸಂಶೋಧಕರು, ಪ್ರಾಧ್ಯಾಪಕರು ಸಹಿಹಾಕಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights