ಸಲಿಂಗಕಾಮವನ್ನು ಸಮಾಜ ಒಪ್ಪಿಕೊಳ್ಳುತ್ತಾ? ಭಾರತೀಯರ ಅಭಿಪ್ರಾಯವೇನು?

ಇತ್ತೀಚೆಗಿನ ವರ್ಷದಲ್ಲಿ ಅಮೆರಿಕಾ ಸೇರಿದಂತೆ ಇತರ ದೇಶಗಳಲ್ಲಿ ಎಲ್ಜಿಬಿಟಿಕ್ಯು ಸಮುದಾಯಕ್ಕೆ ಬಂಬಲ ಹೆಚ್ಚಾಗುತ್ತಿದೆ ಎಂದು ಪ್ಯೂ ರಿಸರ್ಚ್ ಸೆಂಟರ್ ಬಿಡುಗಡೆ ಮಾಡಿದ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಮೀಕ್ಷೆಯೂ 2019 ರಲ್ಲಿ 34 ದೇಶಗಳಲ್ಲಿ 38,000 ಕ್ಕೂ ಹೆಚ್ಚು ಜನರನ್ನು ಸಲಿಂಗಕಾಮವನ್ನು ಸಮಾಜವು ಒಪ್ಪಿಕೊಳ್ಳಬೇಕು ಎಂದು ಭಾವಿಸಿದ್ದೀರಾ ಎಂದು ಕೇಳಿದೆ. ಅಮೆರಿಕಾದಲ್ಲಿ ಸಲಿಂಗಕಾಮವನ್ನು ಬೆಂಬಲಿಸುವವರ   ಶೇಕಡಾವಾರು ಪ್ರಮಾಣವು 2013 ರಲ್ಲಿ ನಡೆದ ಸಮೀಕ್ಷೆಯಲ್ಲಿ ಅದು 60% ರಷ್ಟಿತ್ತು. ಅದು 2019 ರಲ್ಲಿ 72% ಕ್ಕೆ ಏರಿಕೆಯಾಗಿದೆ.

ಭಾರತ ಮತ್ತು ಟರ್ಕಿಯಲ್ಲಿ ಈ ದರಗಳು ಕ್ರಮವಾಗಿ 20 ಮತ್ತು 16 ಕ್ಕಿಂತಲೂ ಹೆಚ್ಚಾಗಿವೆ. ಆದರೆ ಇತರ ದೇಶಗಳಿಗೆ ಹೋಲಿಸಿದರೆ ಈ ಬೆಂಬಲ ಕಡಿಮೆಯಾಗಿಯೇ ಇದೆ. ಇದು ಕ್ರಮವಾಗಿ 37% ಮತ್ತು 25 % ರಷ್ಟು ಇದೆ. 2018 ರಲ್ಲಿ ಭಾರತದ ಹೈಕೋರ್ಟ್ ಸಲಿಂಗಕಾಮವನ್ನು ಕಾನೂನು ಬದ್ದಗೊಳಿಸಿತ್ತು.

ಮಧ್ಯಪ್ರಾಚ್ಯ, ಪೂರ್ವ ಯುರೋಪ್ ಮತ್ತು ಆಗ್ನೇಯ ಏಷ್ಯಾದ ಕೆಲವು ದೇಶಗಳಿಗಿಂತ ಅಮೆರಿಕ ಮತ್ತು ಪಶ್ಚಿಮ ಯುರೋಪಿನ ದೇಶಗಳು ಸಲಿಂಗಕಾಮವನ್ನು ಹೆಚ್ಚು ಒಪ್ಪಿಕೊಳ್ಳುತ್ತಿವೆ ಎಂದು “ಸಲಿಂಗಕಾಮ ನಿರಂತರತೆಯ ಜಾಗತಿಕ ವಿಭಜನೆ” ಎಂಬ ಶೀರ್ಷಿಕೆಯ ಈ ವರದಿ ಹೇಳುತ್ತದೆ.

ಉದಾಹರಣೆಗೆ, ಲೆಬನಾನ್‌ನಲ್ಲಿ 85% ರಷ್ಟು ಜನರು ಸಲಿಂಗಕಾಮವನ್ನು ಒಪ್ಪಿಕೊಳ್ಳಬಾರದು ಎಂದು ಹೇಳಿದರೆ, ಟುನೀಶಿಯಾದಲ್ಲಿ 72% ಜನರು ಇದನ್ನು ಹೇಳಿದ್ದಾರೆ. ಮಧ್ಯ ಮತ್ತು ಪೂರ್ವ ಯುರೋಪಿನಲ್ಲಿ ಸಲಿಂಗಕಾಮವನ್ನು ಸ್ವೀಕರಿಸುವ ಸರಾಸರಿ ದರ 46% ಆಗಿತ್ತು.

“ಆರ್ಥಿಕ ಅಭಿವೃದ್ಧಿಯ ಸೂಚಕವಾಗಿರಬಹುದಾದ ಪ್ರದೇಶಗಳಲ್ಲಿನ ವ್ಯತ್ಯಾಸಗಳು ನಿಜವಾಗಿಯೂ ಆಸಕ್ತಿದಾಯಕ ಆವಿಷ್ಕಾರಗಳಾಗಿವೆ, ಒಟ್ಟಾರೆ ಸ್ವೀಕಾರದ ಮಟ್ಟದಲ್ಲಿ ಬದಲಾವಣೆಗಳಾಗಿದ್ದರೂ ಸಹ, ಸ್ಥಿರವಾಗಿ ಉಳಿದಿವೆ” ಎಂದು ವರದಿಯ ಲೇಖಕ ಹಾಗೂ ಪ್ಯೂ ರಿಸರ್ಚ್ ಸೆಂಟರ್ನ ಜಾಗತಿಕ ವರ್ತನೆಗಳ ಸಂಶೋಧನೆಯ ಸಹಾಯಕ ನಿರ್ದೇಶಕರಾದ ಜಾಕೋಬ್ ಪೌಶ್ಟರ್ ಹೇಳಿದ್ದಾರೆ.

ಸಲಿಂಗಕಾಮದ ಬಗೆಗಿನ ವರ್ತನೆಗಳು ದೇಶದ ಸಂಪತ್ತಿನೊಂದಿಗೆ ಸಂಬಂಧ ಹೊಂದಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಬಡ, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಜನರಿಗಿಂತ ಶ್ರೀಮಂತ ದೇಶಗಳಲ್ಲಿನ ಜನರು ಸಾಮಾನ್ಯವಾಗಿ ಸಲಿಂಗಕಾಮವನ್ನು ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ.

ರಾಜಕೀಯ ಸಿದ್ಧಾಂತ ಮತ್ತು ಶಿಕ್ಷಣವು ಸಲಿಂಗಕಾಮವನ್ನು ಅಂಗೀಕರಿಸುವುದರೊಂದಿಗೆ ಪರಸ್ಪರ ಸಂಬಂಧ ಹೊಂದಿದೆ, ಎಡ-ಒಲವು ಮತ್ತು ಹೆಚ್ಚು ವಿದ್ಯಾವಂತ ಜನರು ಸಾಮಾಜಿಕ ಸ್ವೀಕಾರಕ್ಕೆ ಹೆಚ್ಚು ಬೆಂಬಲ ನೀಡುತ್ತಾರೆ.

ಕೇವಲ 29 ದೇಶಗಳಲ್ಲಿ ಸಲಿಂಗ ಮದುವೆ ಕಾನೂನುಬದ್ಧವಾಗಿದೆ ಎಂದು ಮಾನವ ಹಕ್ಕುಗಳ ಅಭಿಯಾನ ಉಲ್ಲೇಖಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಸಲಿಂಗಕಾಮವನ್ನು ಸಮಾಜ ಒಪ್ಪಿಕೊಳ್ಳುತ್ತಾ? ಭಾರತೀಯರ ಅಭಿಪ್ರಾಯವೇನು?

  • September 23, 2020 at 1:08 am
    Permalink

    Thanks a bunch for sharing this with all folks you actually
    know what you are talking approximately! Bookmarked.
    Kindly also consult with my website =). We will have a link change arrangement among us

    Reply

Leave a Reply

Your email address will not be published.

Verified by MonsterInsights