ಶ್ರೀಲಂಕಾದಲ್ಲಿ ಅಣ್ಣ ಪ್ರಧಾನಿ, ತಮ್ಮ ರಾಷ್ಟ್ರಪತಿ: 4ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಾಜಪಕ್ಸೆ!

ಶ್ರೀಲಂಕಾದಲ್ಲಿ SLPP (ಶ್ರೀಲಂಕಾ ಪೊಡುನ ಪೆರುಮುನ) ಪಕ್ಷವು ಅಧಿಕಾರಕ್ಕೆ ಬಂದಿದ್ದು, ಪಕ್ಷದ ಅಣ್ಣ ಮಹಿಂದಾ ಪ್ರಧಾನಿಯಾಗಿದ್ದು, ಅವರ ಸಹೋದರ ಗೋಟಬಯ ರಾಜಪಕ್ಸೆ ದೇಶದ ರಾಷ್ಟ್ರಪತಿಯಾಗಿದ್ದಾರೆ.!

ಏಷ್ಯಾ ಖಂಡದಲ್ಲೇ ಅತಿ ದೀರ್ಘಾವಧಿಯ ಆಡಳಿತ ನಡೆಸಿದ ಖ್ಯಾತಿ ಹೊಂದಿರುವ ಮಹಿಂದಾ ರಾಜಪಕ್ಸೆ ಮತ್ತೆ ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ್ದಾರೆ. ಭಾನುವಾರ ಶ್ರೀಲಂಕಾದ ಪ್ರಧಾನಮಂತ್ರಿಯಾಗಿ ಮಹಿಂದಾ ರಾಜಪಕ್ಸೆ ಪ್ರಮಾಣ ವಚನ ಸ್ವೀಕರಿಸಿದ್ದು, ಶ್ರೀಲಂಕಾದ ರಾಷ್ಟ್ರಪತಿಯಾಗಿರುವ ಮಹೀಂದ್ರಾ ಅವರ ಕಿರಿಯ ಸೋದರ ಗೋಟಬಯ ರಾಜಪಕ್ಸೆ ಅವರು ಮಹೀಂದಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ಕೊಲಂಬೋದಾ ಬೌದ್ಧ ದೇಗುಲದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಮಹೀಂದಾ ಪ್ರಮಾಣ ವಚನ ಸ್ವೀಕರಿಸಿದರು. ರಾಜಪಕ್ಸೆ ಕುಟುಂಬದ ಐದು ಮಂದಿ ಸಂಸದರಾಗಿದ್ದಾರೆ. ಪ್ರಧಾನಿ ಮಹೀಂದಾ ಅವರ ಪುತ್ರ ನಮಲ್, ಸೋದರ ಚಮಲ್ ಹಾಗೂ ಅವರ ಮಗ ಸಶೀಂದ್ರ, ಸೋದರ ಸಂಬಂಧಿ ನಿಪುಣ ರಣವಾಕ ಎಲ್ಲರೂ ಸಂಸದರಾಗಿದ್ದಾರೆ.

ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆ ಪಕ್ಷವಾದ ಎಸ್ಎಲ್ಪಿಪಿ ಭಾರಿ ಅಂತರದಲ್ಲಿ ಜಯಭೇರಿ ಬಾರಿಸಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. 225 ಸದಸ್ಯ ಬಲದ ಶ್ರೀಲಂಕಾ ಸಂಸತ್ಗೆ ಆಗಸ್ಟ್ 5 ರಂದು ಚುನಾವಣೆ ನಡೆದಿತ್ತು. ಕೊರೊನಾ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಎರಡು ಬಾರಿ ಚುನಾವಣೆ  ಮುಂದೂಡಲಾಗಿತ್ತು.


ಇದನ್ನೂ ಓದಿ:  ಸ್ವಾವಲಂಬಿ ಹೆಜ್ಜೆಗಳನ್ನಿಡುತ್ತಿರುವ ಭಾರತವನ್ನು 70 ವರ್ಷಗಳಿಂದ ಹಿಂಬಾಲಿಸುತ್ತಿದ್ದೇವೆ: ರಷ್ಯಾ ರಾಯಭಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights