ವಿಮಾನಗಳಲ್ಲಿ ಎಲ್ಲಾ ಸೀಟುಗಳ ಭರ್ತಿಗೆ ಕೇಂದ್ರ ನಿರ್ಧಾರ: ಕಾಂಗ್ರೆಸ್‌ ವಿರೋಧ

ಸೋಮವಾರದಿಂದ ದೇಶದ ಒಳಭಾಗದಲ್ಲಿ ದೇಶೀಯ ನಾಗರಿಕ ವಿಮಾನಯಾನವನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಕೇಂದ್ರವು ವಿಮಾನಯಾನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಪ್ರಕಾರ ವಿಮಾನಗಳಲ್ಲಿ ಮಧ್ಯದ ಸೀಟುಗಳನ್ನು ಖಾಲಿ ಬಿಡುವಂತಿಲ್ಲ, ಎಲ್ಲಾ ಸೀಟುಗಳನ್ನು ಭರ್ತಿ ಮಾಡಿಕೊಂಡು ಹಾರಾಟ ನಡೆಸಬಹುದು ಎಂದು ನಾಗರಿಕ ವಿಮಾನಯಾನ ಸಚಿವರು ತಿಳಿಸಿದ್ದು, ಇದಕ್ಕೆ ವಿರೋಧ ಪಕ್ಷ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಬಸ್‌ಗಳು, ಕ್ಯಾಬ್‌ ಹಾಗೂ ಆಟೋಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರ ವಿಮಾನ ಪ್ರಯಾಣಕ್ಕೆ ಯಾವುದೇ ನಿರ್ಬಂಧವನ್ನು ಹೇರದೇ ಇರುವುದು ಸರಿಯಾದ ನಡೆಯಲ್ಲ. ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ವಿಮಾನ ಕಂಪನಿಗಳಿಗೆ ನಷ್ಟವಾಗುತ್ತದೆ. ಆದ್ದರಿಂದ ಖಾಸಗೀ ವಿಮಾನ ಕಂಪನಿಗಳಿಗೆ ಲಾಭ ತುಂಬುವ ಉದ್ದೇಶದಿಂದ ಸರ್ಕಾರ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ. ಖಾಸಗಿಯವರ ಹಿತಕ್ಕಾಗಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆರೋಗ್ಯವನ್ನು ಕೇಂದ್ರ ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿರುವುದಾಗಿ ಸ್ಕ್ರೋಲ್‌ ನ್ಯೂಸ್‌ ವರದಿ ಮಾಡಿದೆ.

ಅಲ್ಲದೆ, ವಿಮಾನ ಪ್ರಯಾಣದರವನ್ನು ಪ್ರಯಾಣದ ಅವಧಿಗೆ ಅನುಸಾರವಾಗಿ 2,000 ದಿಂದ 18,600 ರೂಗಳ ವರೆಗೆ ಏಳು ವಿಭಾಗಗಳಲ್ಲಿ ನಿಗದಿ ಪಡಿಸಲಾಗಿದೆ.

https://twitter.com/ANI/status/1263478966628859910

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights