ವಿಕಾಸ್‌ ದುಬೆ ಎನ್‌ಕೌಂಟರ್‌: ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್‌!

ಎಂಟು ಪೊಲೀಸರನ್ನು ಹತ್ಯೆ ಗೈದಿದ್ದ ಹಾಗೂ 60 ಕ್ರಿಮಿನಲ್‌ ಪ್ರಕರಣಗಳ ಆರೋಪಿ ವಿಕಾಸ್‌ ದುಬೆಯನ್ನು ಮಧ್ಯಪ್ರದೇಶದಿಂದ ಉತ್ತರ ಪ್ರದೇಶದಕ್ಕೆ ಕರೆತರುವಾಗ‌ ವಾಹನ ಉರುಳಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ವಿಕಾಸ್‌ ದುಬೆಯನ್ನು ಎನ್‌ಕೌಂಟರ್‌ನಲ್ಲಿ‌ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಈಗ ವಿವಾದಕ್ಕೆ ಸಿಲುಕ್ಕಿದ್ದು, ಕಾಂಗ್ರೆಸ್ ಮತ್ತು ವಿಪಕ್ಷಗಳ‌ ನಾಯಕರು ಯೋಗಿ ಆಧಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಅಪರಾಧಿಯ ಅಂತ್ಯವಾಗಿದೆ. ಹಾಗಾದರೆ ಅಪರಾಧಿಗೆ ಬೆಂಬಲ ನೀಡಿದವರು? ಎಂದು ಪ್ರಶ್ನಾರ್ಥಕವಾಗಿ ದುಬೆಗೆ ನರೆವಾಗಿದ್ದವರು ಯಾರು, ಆತನಿಗೆ ರಾಜಕೀಯವಾಗಿ ಬೆಂಬಸಿದ್ದರು ಯಾರು? ಅವರ ಕತೆ ಏನು? ಎಂಬರ್ಥದಲ್ಲಿ ಯುಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ, ಎನ್‌ಕೌಂಟರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ದುಬೆ ತಪ್ಪಿಸಿಕೊಳ್ಳಬೇಕು ಎಂಬುದಾಗಿದ್ದರೆ ಆತ ಯಾಕೆ ಶರಣಾಗತಿಯಾಗ ಬೇಕಿತ್ತು. ಅಲ್ಲದೆ, ಇದರಲ್ಲಿ ಆತನಿಗೂ ಅಧಿಕಾರ ವರ್ಗದವರೊಂದಿಗೆ ಸಂಬಂಧ ಇರುವ ಯಾವ ರಹಸ್ಯವಿದೆ ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ್ದಾರೆ.

ಸತ್ತವರು ಕಥೆ ಹೇಳುವುದಿಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ನ ಒಮರ್‌ ಅಬ್ಧುಲ್ಲಾ ಕೂಡ ಟ್ವೀಟ್‌ ಮಾಡಿದ್ದಾರೆ.

https://twitter.com/priyankac19/status/1281420332755070976?s=20
https://twitter.com/KartiPC/status/1281422384176590848?s=20
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights