ಲೋಕಸಭೆ ಚುನಾವಣೆ : ಬೆಂಗಳೂರು ಸೆಂಟ್ರಲ್ ನಿಂದ ನಟ ಪ್ರಕಾಶ್ ರೈ ಸ್ಪರ್ಧೆ – ಟ್ವಿಟರ್ ನಲ್ಲಿ ಘೋಷಣೆ

ಬೆಂಗಳೂರು : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್  ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ನಟ ಪ್ರಕಾಶ್ ರೈ ತಿಳಿಸಿದ್ದಾರೆ. ತಾವು ಚುನಾವಣಾ ಕಣಕ್ಕಿಳಿಯಲಿರುವ ವಿಷಯವನ್ನು ಬಹುಭಾಷಾ ನಟ ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಘೋಷಣೆ ಮಾಡಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ನಟ ಪ್ರಕಾಶ್ ರೈ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಬೆಜೆಪಿ ಭದ್ರ ಕೋಟೆ ಎನಿಸಿರುವ ಬೆಂಗಳೂರು ಸೆಂಟ್ರಲ್  ಕ್ಷೇತ್ರದಲ್ಲಿ ಪ್ರಕಾಶ್ ರೈ ಸ್ಪರ್ಧಿಸಲಿರುವ ವಿಚಾರ ಕುತೂಹಲ ಮೂಡಿಸಿದೆ.

ಸದ್ಯ ಬಿಜೆಪಿಯ ಪಿ.ಸಿ.ಮೋಹನ್  ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದರಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights