ರಾಜ್ಯದಲ್ಲಿಂದು ಮತ್ತೆ 18 ಕೊರೊನಾ ಪ್ರಕರಣಗಳು ಪತ್ತೆ : ಸೋಂಕಿತರ ಸಂಖ್ಯೆ 408ಕ್ಕೇರಿಕೆ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19ಗೆ ಒಳಗಾಗುವವರ ಸಂಖ್ಯೆ ಅಧಿಕವಾಗಿದೆ. ಇಂದು ಒಂದೇ ದಿನಕ್ಕೆ ರಾಜ್ಯದಲ್ಲಿ 18 ಜನರಿಗೆ ಕೊರೊನಾ ಸೋಂಕು ತಗಲಿದ್ದು ಜನರಲ್ಲಿ ಆತಂಕ ಹೆಚ್ಚಿದೆ.

ಹೌದು.. ರಾಜ್ಯದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು 18 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಂದು 408ಕ್ಕೆ ಏರಿಕೆಯಾಗಿದೆ. ಇದುವರೆಗೂ ಕೊರೊನಾದಿಂದ ಗುಣಮುಖರಾಗಿ 112 ಜನ ಡಿಸ್ಚಾರ್ಜ್ ಆಗಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ.

ವಿಜಯಪುರದಲ್ಲಿ 11 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಕುಟುಂಬದವರ ಜೊತೆ ಸಂಪರ್ಕ ಹೊಂದಿದ್ದರಿಂದ ಕೊರೊನಾ ಸೋಂಕು ಬಂದಿದೆ. ಕಲಬುರಗಿಯಲ್ಲಿ 5, ಗದಗ ಮತ್ತು ಬೀದರ್ ತಲಾ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಒಂದೇ ದಿನ ಐದು ಕೊರೋನಾ ಪಾಸಿಟಿವ್ ಬಂದಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ 55 ವರ್ಷದ ಬಟ್ಟೆ ವ್ಯಾಪಾರಿಯಿಂದ ಮತ್ತೆ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

13 ವರ್ಷದ ಬಾಲಕ, 19 ವರ್ಷದ ಯುವಕ ಮತ್ತು 30 ವರ್ಷದ ಮಹಿಳೆಗೆ ಪೇಷಂಟ್ 205ರ ಸಂಪರ್ಕ ಬಂದಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ 65 ವರ್ಷದ ಹಣ್ಣಿನ ವ್ಯಾಪಾರಿ ಪೇಷಂಟ್ 177 ರಿಂದ ಅದೇ ಕುಟುಂಬದ 50 ವರ್ಷದ ವ್ಯಕ್ತಿಗೆ ಸೋಂಕು ಹರಡಿದೆ. ಹಾರ್ಡ್ ವೇರ್ ಅಂಗಡಿ ಮಾಲೀಕ ಪೇಷಂಟ್ 175 ರ ಸಂಪರ್ಕದಿಂದ 17 ವರ್ಷದ ಬಾಲಕನಿಗೆ ಸೋಂಕು ಹರಡಿರೋದು ದೃಢಪಟ್ಟಿದೆ. ಇಂದು ಸ್ಟೇಟ್ ಮೀಡಿಯಾ ಬುಲೆಟಿನ್ ನಲ್ಲಿ ಬಂದ ಎಲ್ಲ ಐದು ಪ್ರಕರಣಗಳೂ ಕಲಬುರ್ಗಿಗೆ ಸೇರಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 27ಕ್ಕೆ ಏರಿದೆ. ಜನರ ಆತಂಕ ದಿನೇ ದಿನೇ ಹೆಚ್ಚಾಗುತ್ತಿದ್ದು, ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.

https://twitter.com/CMofKarnataka/status/1252210776468643841

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights