ಮುಂಬೈನಲ್ಲಿ ಕಾಣಿಸುತ್ತಿರುವುದು ಬೀಗ ಹಾಕಿದ ಮನೆಗಳು, ಖಾಲಿ ರಸ್ತೆಗಳಷ್ಟೇ!

ಯಾವಾಗಲೂ ಜನಜಂಗುಳಿಯಿಂದ ಕಾರ್ಯಚಟುವಟಿಕೆಗಳಲ್ಲಿ ನಿರತವಾಗಿದ್ದ ಪ್ರದೇಶವು ಅನೇಕ ವರ್ಷಗಳ ನಂತರ ಎಲ್ಲಾ ರಸ್ತೆಗಳು ಮತ್ತು ಮನೆಗಳು ಖಾಲಿಯಾಗಿರುವ ದೃಶ್ಯ ಕಂಡು ಬಂದಿದ್ದು ಮುಂಬೈನ ಸ್ಲಮ್ ಪ್ರದೇಶದಲ್ಲಿ.
60 ಲಕ್ಷಕ್ಕೂ ಹೆಚ್ಚು ಜನರು  ವ್ಯವಹಾರ ನಡೆಸುತ್ತಿದ್ದ ಮುಂಬೈನ ಸ್ಲಮ್ ಪ್ರದೇಶವು ಕೊರೊನಾ ವೈರಸ್ ನ ಲಾಕ್ ಡೌನ್ ಪರಿಣಾಮವಾಗಿ ಕೇವಲ ಮನೆ ಮತ್ತು ಖಾಲಿ ರಸ್ತೆಗಳು ಕಾಣುತ್ತಿವೆ.
ಮುಂಬೈಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರಲ್ಲಿನ ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ವಲಸೆ ಹೊರಟಿದ್ದು ಕಳೆದ ಒಂದು ತಿಂಗಳಿನಿಂದ ಎಲ್ಲಾ ರಸ್ತೆಗಳು ನಿಶಬ್ಧವಾಗಿವೆ.
ಕೊರೊನಾ ಹೆಚ್ಚಾದ ಹಿನ್ನಲೆಯಲ್ಲಿ ಮುಂಬೈನಲ್ಲಿ ಏಕಾಏಕಿ ಎಲ್ಲಾ ಸೆಲ್ಟರ್ ಗಳು ಖಾಲಿ ಮಾಡಿ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳಿಸಿದ್ದಾರೆ. ಬಸ್ ಗಳು ಮತ್ತು ರೈಲಿನ ವ್ಯವಸ್ಥೆ ಇಲ್ಲದ ಕಾರಣ ಅನೇಕ ಅನೇಕ ವಲಸೆ ಕಾರ್ಮಿಕರು ನಡೆದುಕೊಂಡೇ ತಮ್ಮೂರು ತಲುಪಿದ್ದಾರೆ. ಇನ್ನೂ 6 ರಿಂದ 8 ಲಕ್ಷ ವಲಸೆ ಕಾರ್ಮಿಕರಿಗೆ ವಿಶೇಷ ಶ್ರಮಿಕ್ ರೈಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
60 ಲಕ್ಷ ವಲಸೆ ಕಾರ್ಮಿಕರಿರುವ ಇರುವ ಮುಂಬೈನ ದಾರಾವಿ, ಶಿವಾಜಿ ನಗರ, ಮಂದಾಲ, ಶಾಸ್ತ್ರೀ ನಗರ ಮುಂತಾದ ಸ್ಲಮ್ ಪ್ರದೇಶಗಳು ಕೊರೊನಾ ಭೀತಿಯಿಂದ ಇಂದು ನಿಶಬ್ಧವಾಗಿದ್ದು, ಆರ್ಥಿಕತೆಗೆ ದೊಡ್ಡ ಹೊಡೆದ ನೀಡಿದೆ.
ಗೋವಂಡಿಯ ಒಂದೇ ಪ್ರದೇಶದಲ್ಲಿ 22,000 ಮನೆಗಳಿದ್ದು, ಅದರಲ್ಲಿ ಶೇ 20 ರಷ್ಟು ಮನೆಗಳು ಖಾಲಿಯಾಗಿವೆ. ಹಾಗಾಗಿ ಕೆಲಸ ಮಾಡುತ್ತಿದ್ದ ಜನರು ಈಗ ಕಾರ್ಯನಿರ್ವಹಿಸದೆ ಮೌನ ಪ್ರದೇಶವಾಗಿದೆ.
ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ಭದ್ರತಾ ಸಿಬ್ಬಂದಿ, ಚಪ್ಪಲಿ ಹೊಲೆಯುವವರು ಹೀಗೆ ಅನೇಕ ಕೆಲಸ ಮಾಡುತ್ತಿದ್ದ ಕಾರ್ಮಿಕರ ಜೀವನ ಹೇಳತೀರದ್ದಾಗಿದೆ. ಜೊತೆಗೆ ಕೆಲಸಕ್ಕೆ ಹೋಗದೆ ಅಲ್ಲಿ ಬಾಡಿಗೆ ಕಟ್ಟಲು ಆಗದೆ ಅನೇಕ ಮಂದಿ ಮನೆಗಳನ್ನು ತೊರೆದು ವಲಸೆ ಹೊರಟಿದ್ದಾರೆ.
ಇನ್ನೂ ಚಪ್ಪಲಿ‌ ಹೊಳೆಯುವವರು, ಪ್ಲಾಸ್ಟಿಕ್ ಕೆಲಸ ಮಾಡುವವರ ಜೀವನ ನಿರ್ವಹಣೆ ಕಷ್ಟವಾಗಿದ್ದು, ಅದನ್ನು ನಿಭಾಯಿಸಲು ತಾವು ಹೊಲೆದಿರುವ ಚಪ್ಪಲಿಗಳನ್ನು ರಸ್ತೆಬದಿಯಲ್ಲಿ ಕೂತು ಮಾರಾಟ ಮಾಡುತ್ತಿದ್ದೇವೆ ಎಂದು ಸ್ಲಮ್ ನಿವಾಸಿ ಗುವಾನ್ ಚೌಹಾನ್ ಅವರ ಮಾತಾಗಿದೆ.
ಇನ್ನೂ ಆಟೋ ರಿಕ್ಷಾಗಳನ್ನು ಓಡಿಸುತ್ತಿದ್ದ ಡ್ರೈವರ್ ಗಳು ಲಾಕ್ ಡೌನ್ ನಿಂದ ಯಾವುದೇ ಕೆಲಸ ಸಿಗದೆ ತಮ್ಮ ಹಳ್ಳಿಗಳತ್ತ ಮುಖಮಾಡಿದ್ದಾರೆ. ಇನ್ನೂ ಕೆಲವರು ಟ್ರಕ್ ಲಾರಿ ಸಿಗುತ್ತದೆಯೋ ಎಂಬ ಆಶಾಭಾವನೆಯಿಂದ ಕಾಲ್ನಡುಗೆಯಲ್ಲೇ ಸಾಗಿದ್ದಾರೆ. ಹಾಗಾಗಿ ಈ ಲಾಕ್ ಡೌನ್ ಪರಿಣಾಮವಾಗಿ ಬಡತನದ ಪ್ರಮಾಣ ಹೆಚ್ಚಾಗಿದ್ದು ನಿರುದ್ಯೋಗವು ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights