ಮಂಡ್ಯದಲ್ಲಿ ಜೋಡುತ್ತುಗಳಿಂದ ಗೋ ಶಾಲೆಗೆ ನೆರವು‌ : ಮಾನವೀಯತೆ ಮೆರೆದ ರಾಕೀಬಾಯ್, ದಾಸ

ಕಳೆದ ಲೋಕಸಭಾ ಚುನಾವಣೆ ವೇಳೆ ಸಕ್ಕರೆ ನಾಡು ಮಂಡ್ಯದಲ್ಲಿ ಜೋಡೆತ್ತು ಎನಿಸಿಕೊಂಡ ದರ್ಶನ್ ಹಾಗೂ ಯಶ್ ಹೆಸ್ರು ಸಖತ್ ಸದ್ದು ಮಾಡಿತ್ತು. ಚುನಾವಣೆ ಮುಗಿದ ಬಳಿಕ ನಾವು ಮಂಡ್ಯ ಮರೆಯಲ್ಲ ಮಂಡ್ಯ ಜನರ ಮಂಡ್ಯದ ಸೇವೆಗೆ ಸದಾ ಸಿದ್ದ ಎಂದಿದ್ರು.ಅದ್ರಂತೆ ಇದೀಗ ಈ ಇಬ್ಬರು ಮಂಡ್ಯ ಜಿಲ್ಲೆಯ ಗೋಶಾಲೆಗೆ ತಮ್ಮದೇ ಆದ ಕೊಡುಗೆಯ ಸೇವೆಯ ಮೂಲಕ ತಮ್ಮ ಪ್ರಾಣಿ ಪ್ರೇಮವನ್ನು ಮೆರೆದಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

   

ಹೌದು! ಇದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬ್ಯಾಡರಹಳ್ಳಿ ಬಳಿ ಇರೋ ಚೈತ್ರ ಗೋಶಾಲೆ. ಈ ಗೋ ಶಾಲೆಯಲ್ಲಿ ಸುಮಾರು ೬೦೦ಕ್ಕು ಹೆಚ್ಚು ದನಕರುಗಳು ಇವೆ. ಇತ್ತೀಚೆಗೆ ಈ ಗೋ ಶಾಲೆಗೆ ಕನ್ನಡ ಚಿತ್ರರಂಗದ ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಈ ಗೋಶಾಲೆಗೆ ತಮ್ಮ ಅಭಿಮಾನಿಗಳೊಂದಿಗೆ ಭೇಟಿ ನೀಡಿ ೩೦ ಟ್ರ್ಯಾಕ್ಟರ್ ಒಣಹುಲ್ಲು ನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಮೂಲಕ ತಮಗಿರೋ ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರಿಸಿ ಮಾನವೀಯತೆ ಮೆರೆದಿದ್ದಾರೆ. ಸಂಕ್ರಾಂತಿ‌ ಹಬ್ಬದ ಹಿನ್ನಲೆಯಲ್ಲಿ ಇಲ್ಲಿಗೆ ಬಂದು ಭೇಟಿ ನೀಡಿದ ದರ್ಶನ್. ಇಲ್ಲಿರೋ ದನಕರುಗಳ ವೀಕ್ಷಣೆ ಮಾಡಿ‌ ಬಳಿಕ ಅಭಿಮಾನಿಗಳ ಜೊತೆ ಬಂದು ಒಣಹುಲ್ಲು ನೀಡಿ ಹೋಗಿದ್ದಾರೆ. ಈ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿವೆ.ಜೊತೆಗೆ ದರ್ಶನ್ ಮತ್ತು ಅಂಬಿ ಅಭಿಮಾನಿಗಳು ದರ್ಶನ್ ರ ಕಾರ್ಯವನ್ನು ಕೊಂಡಾಡ್ತಿದ್ದಾರೆ.

ಇನ್ನು ಈ ಗೋ ಶಾಲೆಯನ್ನು ಖಾಸಗಿ ಸ್ವಯಂ ಸೇವಾ ಸಂಸ್ಥೆಯ ಚೈತ್ರ ಹಾಗೂ ಪೂರ್ಣಿಮ ಎಂಬುವರು ನಿರ್ವಹಣೆ ಮಾಡ್ತಿದ್ದಾರೆ‌.ಇಲ್ಲಿರೋ ಗೋಗಳಿಗೆ ಮೇವು, ನೀರು,ಆಹಾರ ಒದಗಿಸ್ತಾ ಇವುಗಳ ಪೋಷಣೆ ಮಾಡ್ತಾ ಗೋವುಗಳ ರಕ್ಷಣೆ ಮಾಡ್ತಿದ್ದಾರೆ. ಚುನಾವಣೆ ವೇಳೆ ಸುಮಲತಾ ಜೊತೆಗಿದ್ದ ಜೋಡೆತ್ತು ಎನಿಸಿಕೊಂಡಿದ್ದ ದರ್ಶನ್ ಹಾಗೂ ಯಶ್ ಚುನಾವಣೆಯಲ್ಲಿ ತಾವು ಜಿಲ್ಲೆಯ ಜನರ ಸಮಸ್ಯೆಗೆ ದನಿಯಾಗ್ತಿವಿ ಅಂದಿದ್ರು. ಅಂದ್ರಂತೆ ಇದೀಗ ಜಿಲ್ಲೆಯಲ್ಲಿರೋ ಅನಾಥ ಗೋವುಗಳ ಪಾಲಿಗೆ ಈ ಚಿತ್ರನಟರಿಬ್ಬರು ಕೂಡ ಸ್ಪಂದಿಸುತ್ತಿದ್ದಾರೆ. ದರ್ಶನ್ ಈ ರಾಸುಗಳಿಗಾಗಿ ಟ್ರ್ಯಾಕ್ಟರ್ ನಲ್ಲಿ‌ ಮೇವು ಕೊಡುಗೆಯಾಗಿ ಕೊಟ್ರೆ ರಾಕೀ ಬಾಯ್ ಈ ಗೋಶಾಲೆಯಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ಗೋಶಾಲೆ ನಿರ್ಮಿಸಿಕೊಟ್ಟು ಅನಾಥ ಗೋವುಗಳ ರಕ್ಷಣೆಗೆ ಮುಂದಾಗಿದ್ದು, ಗೋಶಾಲೆ ನಡೆಸ್ತಿರೋ ಚೈತ್ರ ಗೋಶಾಲೆಯ ಸ್ವಯಂಸೇವಕರ ಜೊತೆ ಕೈ ಜೋಡಿಸಿದ್ದಾರೆ. ಚಿತ್ರ‌ನಟರ ಈ ಮಾನವೀಯತೆಯ ಪ್ರಾಣಿಗಳ ಮೇಲಿನ ಪ್ರೀತಿ ಮಮತೆಯನ್ನು ಗೋಶಾಲೆತ ಸಂಸ್ಥಾಪಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ‌.

ಒಟ್ಟಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕೀಬಾಯ್ ಯಶ್ ರವರ ಈ ಸಾಮಾಜಿಕ ಸೇವೆ ಇದೀಗ ಅವ್ರ ಅಭಿಮಾನಿಗಳಿಗೂ ಸ್ಫೂರ್ತಿ ನೀಡ್ತಿದೆ. ಗೋವುಗಳ ಮೇಲಿನ ಪ್ರೀತಿ ಇರೋ ನಾಯಕರಿಗಾಗಿ ತಾವು ಗೋ ಪ್ರೇಮಿಗಳಾಗಲು ಸಿದ್ದರಿದ್ದು, ಗೋಶಾಲೆಯ ಸಹಾಯಕ್ಕೆ ನಿಲ್ಲುವ ನಿರ್ಧಾರಕ್ಕೆ ಬಂದಿದ್ದು ದಾಸ ಮತ್ತು ಯಶ್ ಅಭಿಮಾನಿಗಳು ಇತರರಿಗೆ ಮಾದರಿಯಾಗಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights