ಬಾವಲಿಯಿಂದ ಬಂತಾ ಕೊರೊನಾ? : 1000 ವರ್ಷದ ಗುಟ್ಟು ರಟ್ಟು!

ಕೋವಿಡ್-19 ಇಡೀ ವಿಶ್ವಾದ್ಯಂತ ರೌದ್ರನರ್ತನವಾಡುತ್ತಿದೆ. ಇಷ್ಟೊಂದು ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಮೂಲ ಯಾವುದು ಅನ್ನೋ ಮಾತ್ರ ಇಲ್ಲಿವರೆಗೆ ಯಕ್ಷ ಪ್ರಶ್ನೆಯಾಗೇ ಉಳಿದಿದೆ.  ಕೊರೊನಾದ ಮೂಲ ಸ್ಥಳ ಚೀನಾವೇ ಆದರೂ ಕೂಡ ಯಾವುದರಿಂದ ಬಂತು ಅನ್ನೋ ಪ್ರಶ್ನೆಯಾಗೇ ಉಳಿದಿದೆ. ಕೊರೊನಾ ಮಾನವ ನಿರ್ಮಿತಾನಾ? ಅಥವಾ ಬಾವಲಿಯಿಂದ ಬಂದ ವೈರಸ್ಸಾ..? ಏನಿದು 1000 ವರ್ಷದ ಗುಟ್ಟು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಕೊರೊನಾ ವೈಸರ್ ಮೂಲ ಯಾವುದು ಅನ್ನೋದು ಇದುವರೆಗೂ ತಿಳಿದು ಬಂದಿಲ್ಲ. ಕೆಲವು ಸಂಶೋಧನೆಗಳ ಪ್ರಕಾರ ಬಾವಲಿಯಿಂದ ಹರಡಿದೆ ಎಂದು ಹೇಳಲಾಗುತ್ತದೆ. ಆದರೆ ಇದು ಚೀನಾ ಹೂಡಿದ ಯುದ್ಧ ಅಸ್ತ್ರ ಎನ್ನುವುದು ಮತ್ತೊಂದು ಅನುಮಾನ. ಗಿಡದಿಂದ ಗಿಡಕ್ಕೆ ಹಾರುವ ಬಾವಲಿಯಲ್ಲಿ 586 ವೈರಸ್ ಅಡಗಿದೆ ಎಂದು ಹೇಳಲಾಗುತ್ತದೆ. ಭೂಂಕಪ ಅಥವ ಪ್ರಕೃತಿ ವಿಕೋಪಗಳು ಆದರೆ ಆಯಾ ಪ್ರದೇಶಗಳು ನಾಶವಾಗುತ್ತವೆ. ಆದರೆ ಬಾವಲಿಯಲ್ಲಿರುವ ವೈರಸ್ ಗಳು ಮನುಷ್ಯನ ದೇಹ ಹರಡಿದರೆ ಲಕ್ಷಾಂತರ ಜನ ಸಾಯೋದಲ್ದೆ ದೇಶ ದೇಶಗಳೇ ಉರುಳಿ ಹೋಗುತ್ತವೆ.

ಇಂತಹ ವೈರಸ್ ಹೊತ್ತು ಕೊಂಡು ಬಾವಲಿಗಳು 40 ವರ್ಷ ಬದುಕುತ್ತವೆ. ಇಂತಹ ಬಾವಲಿಯಿಂದ 1000 ವರ್ಷಕ್ಕೊಮ್ಮೆ ಸಾಂಕ್ರಾಮಿಕ ರೋಗಾಣು ಹರಡುವ ವೈರಸ್ ಮನುಷ್ಯನ ದೇಹ ಸೇರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಹೌದು… ಬಾವಲಿ ಪುಟ್ಟದಾದರೂ ತನ್ನ ದೇಹದಲ್ಲಿ ನೂರಾರು ವೈರಸ್ ಹೊತ್ತು ತಿರುಗುತ್ತದೆ. ಬಾವಲಿಯಿಂದ ಮನುಷ್ಯನಿಗೆ ವೈರಸ್ ಹರಡುತ್ತೆ ನಿಜ. ಆದ್ರೆ ಅದು ಸುಮಾರು 1000 ವರ್ಷಕ್ಕೊಮ್ಮೆ ಹರಡುತ್ತೆ ಎಂದು ಐಸಿಎಂ ಆರ್ ಹೇಳಿದೆ. ಇಲ್ಲಿ ಎರಡು ತೀರಿಯಲ್ಲಿ ವೈರಸ್ ಹರಡಿರಬಹುದು ಎಂದು ಡಾಕ್ಟರ್ ರಮಣ್ ಹೇಳುತ್ತಾರೆ. ಒಂದು ಬಾವುಲಿಯಿಂದ ಪ್ಯಾಂಗೋಲಿನ್ ಗೆ ಹರಡುವ ವೈರಾಣು ನಂತರ ಮನುಷ್ಯನ ದೇಹ ಸೇರುತ್ತಂತೆ. ಅಥವಾ ಬಾವಲಿ ತಿನ್ನುವ ಆಹಾರ ಹಾಗೂ ಕುಳಿತುಕೊಳ್ಳುವ ಸ್ಥಳ ಅಥವಾ ನೇರವಾಗಿ ಮನುಷ್ಯನಿಗೆ ವೈರಾಣು ಹರಡುವ ಸಾಧ್ಯತೆ ಇದೆ ಎಂದಿದ್ದಾರೆ.

ಈ ಹಿಂದೆ ನಿಫಾ ಎನ್ನುವ ಸಾಂಕ್ರಾಮಿಕ ರೋಗವೂ ಬಾವುಲಿಯಿಂದ ಹರಡಿದೆ. ಆಗಲಿಂದಲೇ ಐಸಿಎಂ ಆರ್ ಬಾವಲಿ ಹಿಂದೆ ಬಿದ್ದು ಸಂಶೋಧನೆ ಆರಂಭಿಸಿದೆ. ದೇಶದ ತಮಿಳುನಾಡು, ಕರ್ನಾಟಕ, ಕೇರಳ, ಪದುಚೇರಿ ರಾಜ್ಯಗಳ ಬಾವಲಿಗಳನ್ನು ಪರೀಕ್ಷೆಗೆ ಒಳಪಡಿಸಿದ ಐಸಿಎಂ ಆರ್ ರೋಚಕ ಸತ್ಯ ಬಿಚ್ಚಿಟ್ಟಿದೆ. ಹಾಗಾದ್ರೆ ಸಂಶೋಧನೆ ಬಳಿಕ ಸಿಕ್ಕ ಉತ್ತರವೇನು?

ಭಾರತದ ಬಾವುಲಿಗಳ ಎರಡು ತಳಿಗಳಲ್ಲಿ ಕೊರೊನಾ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇವು ಮಾನವನ ಮೇಲೆ ಪ್ರತಿಕುಲ ಪರಿಣಾಮ ಬೀರಲಿವೆ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದೆ. ಇದು ಮನುಷ್ಯನಲ್ಲಿ ಹರಡಲ್ಲ ಎಂದು ಹೇಳಲಾಗಿದೆ. ಸಾರ್ಸ್ ಎನ್ನುವ ಸಾಂಕ್ರಾಮಿಕ ರೋಗ ಕೂಡ ಬಾವುಲಿಗಳಿಂದಲೇ ಬಂದಿದೆ. ಆದರೆ ಇವು ನೇರವಾಗಿ ಬಾವಲಿಗಳಿಂದಲೇ ಮನುಷ್ಯನಿಗೆ ಹರಡಿದೆ ಎಂದೇಳಲು ಸಾಧ್ಯವಿಲ್ಲ. ಹಾಗಾದ್ರೆ ಮನುಷ್ಯನ ದೇಹದಲ್ಲಿ ಪರಿಣಾಮವನ್ನುಂಟು ಮಾಡುವ ಬಾವಲಿಗಳಿಗೆ ವೈರಸ್ ಏನೂ ಮಾಡುವುದಿಲ್ಲವೇ..? ಇಂಥಹದ್ದೊಂದು ಪ್ರಶ್ನೆ ಮೂಡೇ ಮೂಡುತ್ತದೆ.

ಬಾವಲಿಯಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿದೆ.  ಅದು ಆಯಾ ಕಾಲಕ್ಕೆ ತಕ್ಕಂತೆ ದೇಹದ ಉಷ್ಣಾಂಶವನ್ನು ವೃದ್ಧಿಸಿಕೊಳ್ಳುತ್ತದೆ. ಹೀಗಾಗಿ ವೈರಸ್ ಗಳು ಇದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ದೇಶಗಳು ಇದರಿಂದ ವೈರಸ್ ಹರಡಿ ನಂತರ ತಾವೇ ಚಿಕಿತ್ಸೆ ಕಂಡು ಹಿಡಿಯುವ ಕೃತ್ಯ ಕೂಡ ಮಾಡುತ್ತಿವೆ. ಇದಕ್ಕೆ ಡ್ರ್ಯಾಗನ್ ರಾಷ್ಟ್ರ ಚೀನಾ ಹೊರತಾಗಿಲ್ಲ ಎಂದೇಳಲಾಗುತ್ತಿದೆ.

ಡ್ರ್ಯಾಗನ್ ರಾಷ್ಟ್ರದ ಲ್ಯಾಬ್ ನಲ್ಲಿ ಇಂತಹದ್ದೊಂದು ಎವಟ್ಟು ನಡಿತಾ ಅನ್ನೋ ಅನುಮಾನ ಶುರುವಾಗಿದೆ. ಬಾವಲಿಯಲ್ಲಿ ಡಿಎನ್ ಎ ಸಿಸ್ಟಮ್ ಉತ್ತಮ ವಾಗಿದೆ. ಹೀಗಾಗಿ ಇದರಲ್ಲಿರುವ ವೈರಸ್ ಗಳು ವಿಜ್ಞಾನಿಗಳ ತರ್ಕಕ್ಕೆ ನಿಲುಕುತ್ತಿಲ್ಲ. ತನ್ನ ದೇಹದಲ್ಲಿ ಇಷ್ಟೇಲ್ಲಾ ವೈರಸ್ ಇಟ್ಟುಕೊಂಡು ಬಾವಲಿ ತಿರುತ್ತದೆ ಎಂದು ವಿಜ್ಞಾನಿಗಳಿಗೂ ತಿಳಿದಿಲ್ಲ. ಇದರಲ್ಲಿ 300 ಜಾತಿಯ ವೈರಸ್ ಇವೆ. ಆ ಮೂಲಕ ಸಾಂಕ್ರಾಮಿಕ ರೋಗ ಹರಡುವುದೇ ಬಾವಲಿ. ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತದೆ. ವೈರಾಣು ಮನುಷ್ಯನ ದೇಹ ಅದು ಹೇಗೆ ತಲುಪುತ್ತದೆ ಅನ್ನೋದು ಇನ್ನೂ ಕೂಡ ಬಾವಲಿ ಹಿಸ್ಟರಿಯಲ್ಲಿ ನಿಲುಕುತ್ತಿಲ್ಲ.

ಕೊರೊನಾ ವೈರಸ್ ಮಾನವ ನಿರ್ಮಿತನಾ? ಇದಕ್ಕೆ ಚೀನಾದ ಮೇಲೆನೇ ದಟ್ಟವಾದ ಅನುಮಾನ ಮೂಡುತ್ತದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಕಿಲ್ಲರ್ ಕೊರೊನಾ ಹರಡಿದೆ. ಆದರೆ ಈ ಬಗ್ಗೆ ಜಗತ್ತಿಗೆ ಚೀನಾ ಸರಿಯಾದ ಮಾಹಿತಿ ನೀಡಿಲ್ಲ. ಆರಂಭದಲ್ಲೇ ಚೀನಾ ಸುಳ್ಳಿನ ಕಂತೆಯನ್ನು ಬಿಚ್ಚಿಟ್ಟಿದೆ.  ಈ ಬಗ್ಗೆ ತಿಳಿದುಕೊಳ್ಳೋದಕ್ಕೂ ಚೀನಾದಲ್ಲಿ ವಾಟ್ಸಪ್ , ಪೇಸ್ ಬುಕ್ ಯಾವುದೇ ಆಪ್ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇದೊಂದು ರೋಗ ಭಯ ಪಡುವ ಅವಶ್ಯತೆ ಇಲ್ಲ ಎಂದು ತನ್ನ ತಪ್ಪನ್ನು ಮುಚ್ಚಿಕೊಳ್ಳುತ್ತಾ ಬಂತು.

ಚೀನಾದಲ್ಲಿ ವೈರಸ್, ಸಾವಿನ ಸಂಖ್ಯೆ ಎಲ್ಲಾವೂ ಮುಚ್ಚಿಡುತ್ತಲೇ ಬಂತು. ಗೊತ್ತಾಗುವ ಹೊತ್ತಿಗೆ ವೈರಸ ವಿಶ್ವವ್ಯಾಪಿ ಹರಡಿದೆ. ಇದರಿಂದಾಗಿ ಚೀನಾದ ವೈರಾಲಜಿ ಸೆಂಟರ್ ಕೂಡ ವೈರಸ್ ಜನ್ಮ ಸ್ಥಳ ಎಂದೇಳಲಾಗುತ್ತದೆ. ನಿಗೂಢ ವೈರಾಣುವಿನ ಜನ್ಮಸ್ಥಳ ಚೀನಾದ ವುಹಾನ್ ಗುಹೆಗಳಿಂದ ತಂದ ಬಾವಲಿಯಿಂದ ಬಂದವು ಎನ್ನಲಾಗುತ್ತದೆ. ವೈರಾಲಜಿ ಸೆಂಟರ್ ನಲ್ಲಿ ಚೀನಾದ ವುಹಾನ್ ಗುಹೆಗಳಿಂದ ತಂದ ಬಾವಲಿಗಳಲ್ಲಿ ಇರುವ ಹೊಸ ವೈರಾಣುಗಳ ಬಗ್ಗೆ  ಪ್ರಯೋಗಾಲಯದ ತಜ್ಞರು ಅಧ್ಯನ ನಡೆಸಿದ್ದಾರೆ. ಈ ವೇಳೆ ಹಂದಿಗಳ ಮೇಲೆ ಪ್ರಯೋಗ ಮಾಡಿದ್ದಾರೆ. ನಂತರ ಹಂದಿ ಹಾಗೂ ಬಾವುಲಿಗಳನ್ನು ಮಾರುಕಟ್ಟೆಗೆ ರವಾನೆ ಮಾಡಿ ಅಸಡ್ಡೆ ತೋರಿದ್ದಾರೆ. ಇಲ್ಲಿಂದಲೇ ವೈರಸ್ ಹಬ್ಬಿದೆ ಎಂದೇಳಲಾಗುತ್ತದೆ.

ಒಟ್ಟಿನಲ್ಲಿ ಬಾವಲಿಯಿಂದ ಕೊರೊನಾ ಬಂತು ಎಂದೇಳಲಾಗುತ್ತಿದೆ ಅನ್ನೋದನ್ನ ಗಮನ ಹರಿಸಿ ಬಾವಲಿಗಳ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಬೇಡಿ. ಪ್ರಕೃತಿಯಲ್ಲಿ ಎಲ್ಲಾ ಜೀವ ರಾಶಿಗಳಿಗೂ ಮನುಷ್ಯರಷ್ಟೇ ಬದುಕುವ ಹಕ್ಕಿದೆ. ಹೀಗೊಂದು ಕೆಟ್ಟ ಗಳಿಗೆ ಆವರಿಸಿದೆ ಎಂದರೆ ಇದರ ಹಿಂದೆ ಒಳ್ಳೆ ದಿನಗಳು ನಮಗಾಗಿ ಕಾದಿವೆ ಅನ್ನೋದನ್ನ ನಾವ್ಯಾರು ಮರೆಯೋಹಾಗಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights