ಬಂಗಾಳಕ್ಕೆ ಅಪ್ಪಳಿಸಿದ ಅಂಫಾನ್ ಮಾರುತ – ಭಾರೀ ಮಳೆ, ಬಿರುಗಾಳಿ, ಜನರ ಸ್ಥಳಾಂತರ…

ಬಂಗಾಳಕ್ಕೆ ಅಪ್ಪಳಿಸಿದ ಅಂಫಾನ್ಚಂಡಮಾರುತ ಅಪ್ಪಳಿಸಿದೆ, ಭಾರೀ ಮಳೆ, ಬಿರುಗಾಳಿಯನ್ನು ಹೊತ್ತು ತಂದಿದೆ, ಇದರಿಂದಾಗಿ ಕೋಲ್ಕೊತಾ ಏರ್‍ಪೋರ್ಟ್ ಬಂದ್ ಮತ್ತು  ರೈಲು ಸೇವೆ ಸ್ಐಗಿತಗೊಂಡಿವೆ.  ಬಂಗಾಲದಲ್ಲಿ  6.5 ಲಕ್ಷ ಜನರ ಸ್ಥಳಾಂತರ ಮಾಡಲಾಗಿದೆ..

ನಿರೀಕ್ಷೆಯಂತೆಯೇ ಅಂಫಾನ್ ಚಂಡಮಾರುತವು ಬಂಗಾಳಕ್ಕೆ ಅಪ್ಪಳಿಸಿದ್ದು ಬಿರುಗಾಳಿ ಸಹಿತ ಭಾರೀ ಮಳೆಯನ್ನು ಹೊತ್ತುತಂದಿದೆ. ಬಂಗಾಳದ ಡಿಘಾ ಬಳಿ ಚಂಡಮಾರುತವು ನೀರಿಗಪ್ಪಳಿಸಿದ್ದು ಭಾರೀ ಪ್ರಮಾಣದಲ್ಲಿ ಹವಾಮಾನ ಏರುಪೇರಿಗೆ ಕಾರಣವಾಗಿದೆ.

ಚಂಡಮಾರುತದ ಹಿಡಿತದಿಂದ ತಪ್ಪಿಸಲು ಸುಮಾರು 6.5 ಲಕ್ಷ ಜನರನ್ನು ಸುತ್ತಮುತ್ತಲ ಪ್ರದೇಶಗಳಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಚಂಡ ಮಾರುತದ ತೀವ್ರತೆಯ ಹಿನ್ನೆಲೆಯಲ್ಲಿ ಕೋಲ್ಕೊತಾ ವಿಮಾನ ನಿಲ್ದಾಣವನ್ನು ಕೆಲವು ಗಂಟೆಗಳ ಮಟ್ಟಿಗೆ ಮುಚ್ಚಲಾಗಿದ್ದು, ಹಲವಾರು ರೈಲುಗಳ ಸಂಚಾರವನ್ನು ಸಹ ಮುಂದೂಡಲಾಗಿದೆ.

ಚಂಡ ಮಾರುತದ ಪ್ರಭಾವದಿಂದಾಗಿ ನೀರಿನ ಮಟ್ಟ ಸುಮಾರು ಐದರಿಂದ ಆರು ಅಡಿಗಳಷ್ಟು ಉಬ್ಬರ ಕಂಡಿದ್ದು, ತಳ ಮಟ್ಟದ ಅನೇಕ ಪ್ರದೇಶಗಳನ್ನು ಮುಳುಗಿಸಿದೆ. ಅಂಫಾನ್ ತೀವ್ರತೆಯ ಅರಿವಿದ್ದ ಕಾರಣ ಕಳೆದೆರಡು ದಿನಗಳಿಂದಲೇ ಜನರ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಹೀಗಾಗಿ ಸಾವು-ನೋವಿನ ಬಗ್ಗೆ ಯಾವುದೇ ಆತಂಕವಿಲ್ಲದಂತಾಗಿದೆ.

ಇದರ ಪ್ರಭಾವದಿಮದಾಗಿ ಮೇಘಾಲಯಾ, ಅಸ್ಸಾಂ ಮತ್ತು ಒಡಿಶಾದಲ್ಲಿ ಮುಂದಿನ ಒಂದೆರಡು ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಕರ್ನಾಟಕದ ಕರಾವಳಿ ತಿರದಲ್ಲು ಬಾರಿ ಮಳೆಯಾಗುವ ನಿರೀಕ್ಷೆ ಇದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights