ಪ್ರಶಾಂತ್ ಭೂಷಣ್ ಅಪರಾಧಿ ಎಂದ ಸುಪ್ರೀಂ: ಪ್ರಜಾಪ್ರಭುತ್ವದ ಕರಾಳದಿನ ಎಂದ ರಾಮಚಂದ್ರ ಗುಹಾ!

ಹಿರಿಯ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು ಮಾಡಿದ ಎರಡು ಟ್ವೀಟ್‌ಗಳ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅವರನ್ನು ಅಪರಾಧಿ ಎಂದು ಸುಪ್ರೀಂ ಕೊರ್ಟ್ ತೀರ್ಪು ನೀಡಿದೆ. ಪ್ರಶಾಂತ್‌ ಭೂಷಣ್ ಗಂಭೀರವಾದ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠವು ಅವರನ್ನು ತಪ್ಪಿತಸ್ಥ ಎಂದು ಹೇಳಿದ್ದು, ಶಿಕ್ಷೆಯ ಪ್ರಮಾಣವನ್ನು ಆಗಸ್ಟ್‌ 20 ರಂದು ಘೋಷಿಸುವುದಾಗಿ ತಿಳಿಸಿದೆ.

ಪ್ರಶಾಂತ್ ನ್ಯಾಯಾಂಗದ ವಿರುದ್ಧ ಯಾವುದೇ ದುರುದ್ದೇಶವಿಲ್ಲದೆ ಕೇವಲ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಅವರ ಪರವಾಗಿ ವಾದಿಸಿದ್ದ ದುಶ್ಯಂತ್ ದವೆ ಹೇಳಿದ್ದರು.

ಪ್ರಶಾಂತ್ ಅವರು ನ್ಯಾಯಾಂಗ ನಿಂದನೆ ನೋಟಿಸ್‌ಗೆ ವಿವರವಾದ ಉತ್ತರದ ಅಫಿಡವಿಟ್ ಸಲ್ಲಿಸಿದ್ದು, ನ್ಯಾಯಾಲಯದ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸುವುದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಹೇಳಿದ್ದರು.

ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಇತಿಹಾಸಕಾರ ರಾಮಚಂದ್ರ ಗುಹಾ, “ಭಾರತೀಯ ಪ್ರಜಾಪ್ರಭುತ್ವಕ್ಕೆ ಕರಾಳ ದಿನ” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಜೂನ್ 27ರಂದು ಸುಪ್ರೀಕೋರ್ಟ್ ಕುರಿತು ಹಾಗೂ ಜೂನ್ 29ರಂದು ಸಿಜೆಐ ಎಸ್‌ಎ ಬೋಬ್ಡೆ ಕುರಿತಂತೆ ಟ್ವೀಟ್‌ ಮಾಡಿದ್ದರು. ಇದನ್ನು ಗಮನಿಸಿದ ನ್ಯಾಯಾಲಯ ಜುಲೈ 22ರಂದು ಪ್ರಶಾಂತ್‌ಗೆ ನೋಟಿಸ್ ಜಾರಿ ಮಾಡಿತ್ತು.


ಇದನ್ನೂ ಓದಿ:  ಒಂದು ಟ್ವೀಟ್‌ಗಷ್ಟೇ ಕ್ಷಮೆಯಾಚಿಸಿದ ಪ್ರಶಾಂತ್ ಭೂಷಣ್‌; ಲೋಯಾ ಸಾವು, ಸಿಎಎ ಟ್ವೀಟ್‌ ಸಮರ್ಥನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights