ದಾವಣಗೆರೆ ಮಹಾನಗರ ಪಾಲಿಕೆಗೆ ಇಂದು ಚುನಾವಣೆ : 208 ಅಭ್ಯರ್ಥಿಗಳ ಹಣೆಬರಹ ನಿರ್ಧಾರ

ದಾವಣಗೆರೆ ಮಹಾನಗರ ಪಾಲಿಕೆಗೆ ಇಂದು ಚುನಾವಣೆ ನಡೆಯಲಿದೆ. 3.79 ಲಕ್ಷ ಮತದಾರರಿಂದ 208 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ಪಾಲಿಕೆಯ 45 ವಾರ್ಡಗಳಿಗೆ ನಡೆಯಲಿರುವ ಮತದಾನ ಮಾಡುವವರಲ್ಲಿ 1.89.794 ಪುರುಷ ಹಾಗೂ 1.89.526 ಮಹಿಳಾ ಮತದಾರರು ಸೇರಿದಂತೆ ಒಟ್ಟು 3.79.386 ಜನ ಇದ್ದಾರೆ.

ಮತದಾನ ಪ್ರಕ್ರಿಯೆಗೆ 45 ವಾರ್ಡಗಳ 377 ಮತಗಟ್ಟೆಗಳಲ್ಲಿ 1855 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಪಾಲಿಕೆ ಚುನಾವಣೆಯಲ್ಲಿ ಇವಿಎಂ ಯಂತ್ರ ಬಳಕೆ ಮಾಡಲಾಗಿದೆ. ಕಾಂಗ್ರೆಸ್44, ಬಿಜೆಪಿ 45, ಜೆಡಿಎಸ್ 23, ಪಕ್ಷೇತರರು 84 ಸೇರಿದಂತೆ ಒಟ್ಟು 208 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

28 ಅತಿ ಸೂಕ್ಷ್ಮ ಹಾಗೂ 65 ಸೂಕ್ಷ್ಮ ಮತಗಟ್ಟೆಗಳಲ್ಲಿ ವಿಡಿಯೋಗ್ರಾಫ್ ಮಾಡಲಾಗುತ್ತಿದೆ. ನಗರದ ಡಿ ಆರ್ ಆರ್ ಶಾಲೆಯಲ್ಲಿ 9 ಸ್ಟ್ರಾಂಗ್ ರೂಂ ಹಾಗೂ 13 ರೂಂಗಳಲ್ಲಿ ಮತ ಏಣಿಕೆ ನವಂಬರ್14 ರಂದು ನಡೆಯಲಿದೆ. 2007 ರಲ್ಲಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ, ಬಿಜೆಪಿ ಮೊದಲ ಬಾರಿಗೆ ಪಾಲಿಕೆಯ ಗದ್ದುಗೆ ಏರಿತ್ತು.

2013 ರಲ್ಲಿ ಕಾಂಗ್ರೆಸ್ ಪಾಲಿಕೆಯಲ್ಲಿ ಆಡಳಿತ ನಡೆಸಿತ್ತು. 2019 ಮೂರನೇ ಭಾರಿಗೆ ಎರಡು ಪಕ್ಷಗಳಿಂದ ಪಾಲಿಕೆಯ ಅಧಿಕಾರಕ್ಕೆ ಟೊಂಕ ಕಟ್ಟಿ ನಿಂತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights