ತೀವ್ರ ಎದೆನೋವಿನಿಂದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು!

ತೀವ್ರ ಎದೆನೋವು ಕಾಣಿಸಿಕೊಂಡ ಪರಿಣಾಮ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭಾನುವಾರ ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೌದು… ಭಾನುವಾರ 9 ಗಂಟೆ ಸುಮಾರಿರಿಗೆ ಡಾ. ಮನಮೋಹನ್ ಸಿಂಗ್​​​ ಅವರಿಗೆ ಎದೆನೋವು ಕಾಣಸಿಕೊಂಡಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ ಎಂದು ಏಮ್ಸ್​​​ಮೂಲಗಳು ತಿಳಿಸಿವೆ. ಡಾ ನಿತೀಶ್ ನಾಯ್ಕ್ ನೇತೃತ್ವದ ವೈದ್ಯರ ತಂಡ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಡಾ. ಮನಮೋಹನ್​​ ಸಿಂಗ್​​ಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಮನಹೋಹನ್​​​ ಸಿಂಗ್​​​​ ಅನಾರೋಗ್ಯದಿಂದ ಏಮ್ಸ್​​ಗೆ ದಾಖಲಾಗಿದ್ದಾರೆ ಎಂದು ಉನ್ನತ ಮೂಲಗಳು ಹೇಳುತ್ತಿವೆ. ಹಾಗಾಗಿ ಅವರ ಶೀಘ್ರ ಚೇತರಿಕೆ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಲವು ಕಾಂಗ್ರೆಸ್​ ನಾಯಕರು ಟ್ವೀಟ್​ ಮಾಡಿದ್ದಾರೆ.

2009ರಲ್ಲಿ ಡಾ. ಸಿಂಗ್ ಅವರಿ​​ಗೆ ಏಮ್ಸ್​​ನಲ್ಲೇ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ವಿಪಕ್ಷ ಕಾಂಗ್ರೆಸ್​ನ ನಾಯಕ ಡಾ. ಮನಮೋಹನ್​​ ಸಿಂಗ್ ಈ ಹಿಂದೆ ಮೊದಲಿಗೆ​​ ರಾಜಸ್ತಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights