ಜೆಡಿಎಸ್‌ನಿಂದಲೂ ದೂರ, ಬಿಜೆಪಿಗೂ ಬೇಡವಾದ ಜಿಟಿಡಿ

ಮೈತ್ರಿ ಸರಕಾರ ಪತನದ ಬೆನ್ನಲ್ಲಿಯೇ ಜೆಡಿಎಸ್‌ನಿಂದ ದೂರವಶದ ಮಾಜಿ ಸಚಿವ ಜಿಟಿ ದೇವೇಗೌಡರು ಈಗ ರಾಜಕೀಯವಾಗಿ ಅನಾಥರಾಗಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಬಿಜೆಪಿ ಪರ ವಾಳಿದ ದೇವೇಗೌಡರು ಕ್ರಮೇಣ ಜೆಡಿಎಸ್‌ನಿಂದ ದೂರವಾಗಿದ್ದರು. ಆದರೆ ಈಗ ಬಿಜೆಪಯೂ ಅವರನ್ನು ದೂರ ಇಟ್ಟಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಜಿಟಿಡಿಗೆ ಮುಂದೇನು ಎಂಬ ಪ್ರಶ್ನೆ ಖಾಡುತ್ತಿದೆ.

ಹುಣಸೂರಿನ ಉಪಚ ಉನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ನೀಡಿದರೇ ಶಾಸಕ ಸ್ಥಾನ ಬಿಟ್ಟು ಬಿಜೆಪಿ ಸೇರುವುದಾಗಿ ಜಿಟಿಡಿ ಯಡಿಯೂರಪ್ಪನವರಲ್ಲಿ ಹೇಳಿಕೊಂಡಿದ್ದರು. ಅಲ್ಲದೇ ವಿಶ್ವನಾಥ್ ಅವರು ಗೆಲ್ಲುವ ಬಗ್ಗೆ ಗುಪ್ತಚರ ವರದಿ ವ್ಯತಿರಿಕ್ತವಾಗಿದ್ದ ಕಾರಣ ತಮ್ಮ ಪುತ್ರನಿಗೆ ಟಿಕೆಟ್‌ಗಾಗಿ ಜಿಟಿಡಿ ಬೇಡಿಕೆ ಇಟ್ಟಿದ್ದರು.

ಕಡೆಯ ಕ್ಷಣದವರೆಗೂ ಜಿಟಿಡಿಗೆ ತಮ್ಮ ಬೇಡಿಕೆ ಈಡೇರುವ ನಂಬಿಕೆ ಇತ್ತು. ಆದರೆ ಸ್ಪ್ರೀಂ ಕೋರ್ಟಿನ ತೀರ್ಪು ಪ್ರಕಟವಾದ ಬಳಿಕ ಎಲ್ಲ ಅನರ್ಹರಿಗೆ ಬಿಜೆಪಿ ಟಿಕೆಟ್ ಘೋಷಿಸಿದ ನಂತರ ಜಿಟಿಡಿ ಭ್ರಮನಿರಸನಗೊಂಡರು. ಇತ್ತ ಜೆಡಿಎಸ್‌ನಲ್ಲೂ ಇರಲಾಗದೇ ಅತ್ತ ಬಿಜೆಪಿಯಿಂದಲೂ ನೆರವು ಬಾರದ ಜಿಟಿಡಿ ಅತಂತ್ರಗೊಂಡರು.

ರಾಜಕೀಯವಾಗಿ ಕತ್ತಲ ಕೂಪದಲ್ಲಿ ಕಾಲಿಟ್ಟಿರುವ ಜಿಟಿ ದೇವೇಗೌಡರು ಇತ್ತ ಜೆಡಿಎಸ್‌ನೊಂದಿಗೆ ಬೆಸುಗೆ ಮಾಡಿಕೊಳ್ಳಲು ಆಗದೇ ಅತ್ತ ಬಿಜೆಪಿ ಸೇರಲೂ ಆಗದಂತಹ ಪರಿಸ್ಥಿತಿಯಲ್ಲಿದ್ದು, ಎರಡೂ ಪಕ್ಷಗಳಿಂದಲೂ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಂಯ್ಯ ಅವರನ್ನು ಪರಾಭವಗೊಳಿಸಿ ವರ್ಷದ ಹಿಂದಷ್ಟೇ ಮೆರೆದಿದ್ದ ಜಿಟಿ ದೇವೇಗೌಡರಿಗೆ ಇಂದು ಇಂತಹ ಸ್ಥಿತಿ ಬರಲು ಅವರ ತಪ್ಪು ರಾಜಕೀಯ ಲೆಕ್ಕಾಚಾರಗಳೇ ಕಾರಣ ಎಂದು ಅವರನ್ನು ಹತ್ತಿರದಿಂ ಬಲ್ಲವರು ಹೇಳುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights