ಕನ್ನಡಿಗರಿಗಾಗಿಯೇ ಆರಂಭವಾಗುತ್ತಿದೆ OK (ಓನ್ಲೀ ಕನ್ನಡ) ಓಟಿಟಿ ಸಿನಿಮಾ ಫ್ಲಾಟ್‌ಫ್ಲಾಮ್‌

ಇತ್ತೀಚೆಗಿನ ಡಿಜಿಟಲ್‌ ಜಗತ್ತಿನಲ್ಲಿ ಎಲ್ಲವೂ ಡಿಜಿಟಲ್‌ ಮಯವೇ ಆಗುತ್ತಿದೆ. ಇದು ಒಂದು ರೀತಿಯ ಅಂಗೈ ಒಳಗಿಳ ಜಗತ್ತಾಗಿ ಬದಲಾಗುತ್ತಿದೆ. ಸಿನಿಮಾ ಕ್ಷೇತ್ರವೂ ಕಂಪ್ಯೂಟರ್‌ ಸಿಸ್ಟಮ್‌ ಒಳಗೇ ಮುಳುಗುವಷ್ಟು ಬೆಳೆದಿದೆ. ಈ ಮಧ್ಯೆ ಮನೆಯಲ್ಲೇ ಹೊಸ-ಹೊಸ ಸಿನಿಮಾಗಳನ್ನು ಮೊಬೈಲ್‌, ಟಿವಿಗಳಲ್ಲಿಯೇ ವಿಕ್ಷಿಸುವಂತಹ ಓಟಿಟಿ (ಓವರ್‌ ದ ಟಾಪ್‌)ಗಳು ಅಬ್ಬರಿಸುತ್ತಿವೆ.

ಇಂತಹ ಓಟಿಟಿಗಳಲ್ಲಿ ಕಡಿಮೆ ಸ್ಥಾನ ಗಿಟ್ಟಿಸಿಕೊಂಡಿರುವುದು ಸ್ಯಾಂಡಲ್‌ವುಡ್ ಕನ್ನಡ ಚಿತ್ರರಂಗ. ಅದರ ಕೊರತೆಯನ್ನು ನೀಗಿಸಲು ಆರಂಭವಾಗುತ್ತಿದೆ, ಓನ್ಲಿ ಕನ್ನಡ (OK).

ಕನ್ನಡ ಸಿನಿ ಪ್ರೇಕ್ಷಕರಿಗೆ ಕನ್ನಡ ಚಿತ್ರಗಳನ್ನು ಓಟಿಟಿಯಲ್ಲಿ ನೀಡುವ ಉದ್ಧೇಶದಿಂದ ಕನ್ನಡಿಗರೇ ಆರಂಭಿಸುತ್ತಿರುವ ನೂತನ ಆನ್‌ಲೈನ್‌ ಸಿನಿಮಾ ಫ್ಲಾಟ್‌ಫ್ಲಾಂ ಈ ಓಕೆ (ಓನ್ಲೀ ಕನ್ನಡ).

ಲಾಕ್‌ಡೌನ್‌ ಸಂದರ್ಭದಲ್ಲಿ ಥಿಯೇಟರ್‌ಗಳು, ಮಾಲ್‌ಗಳು, ಮಲ್ಟಿಫ್ಲೆಕ್ಸ್‌ ಮುಚ್ಚಿದ್ದರಿಂದಾಗಿ ಹಲವಾರು ಸಿನಿಮಾಗಳು ತೆರೆಕಾಣುವುದು ರದ್ದಾಯಿತು. ಆದರೆ, ಹಲವಾರು ಭಾಷೆಯ ನಾನಾ ಸಿನಿಮಾಗಳು ಓಟಿಟಿ ಫ್ಲಾಟ್‌ಫ್ಲಾಂನಲ್ಲಿ ರಿಲೀಸ್‌ ಆದವು. ಆದರೆ, ಇದರಿಂದ ದೂರ ಉಳಿದದ್ದು ಮಾತ್ರ ಕನ್ನಡ ಚಿತ್ರಗಳು.

ಕನ್ನಡ ಚಿತ್ರಗಳಿಗೆ ಓಟಿಟಿ ಇನ್ನೂ ಹೆಚ್ಚಾಗಿ ತೆರೆದುಕೊಂಡಿಲ್ಲ. ಇದೂವರೆಗೂ ಓಟಿಟಿಯಲ್ಲಿಯೇ ರಿಲೀಸ್‌ ಆಗಿರುವ ಏಕೈಕ ಕನ್ನಡ ಚಿತ್ರವೆಂದರೆ, ಜುಲೈ 17 ರಂದು ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಯಾದ “ಲಾ” ಸಿನಿಮಾ ಒಂದೇ.

ಹಾಗಾಗಿ ಕನ್ನಡ ಸಿನಿಮಾಗಳಿಗಾಗಿ, ಸಿನಿಮಾಗಳ ಬಿಡುಗಡೆಗಾಗಿಯೇ ಕನ್ನಡ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಆರಂಭಿಸುತ್ತಿರುವ ಈ ಓಕೆ ಓಟಿಟಿ ಫ್ಲಾಟ್‌ಫ್ಲಾಂನಲ್ಲಿ ಕನ್ನಡದ ಯುವ ಕ್ರಿಯಾಶೀಲ ಪ್ರತಿಭೆಗಳಿಗೆ ನಿರ್ಮಾಣದ ಹಂತದಿಂದ ಹಿಡಿದು ಪ್ರದರ್ಶನ ಹಾಗೂ ಆದಾಯ ಸೃಷ್ಟಿಸುವಲ್ಲಿ ಕನ್ನಡದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತದೆ. ವಿಶೇಷವೆಂದರೆ ಈ ಆನ್ ಲೈನ್ ವೇದಿಕೆಯಲ್ಲಿ ಕೇವಲ ಕನ್ನಡ ಭಾಷೆಯ ಚಿತ್ರಗಳು ಮಾತ್ರ ಇರುತ್ತದೆ.

ಕನ್ನಡದ ಪ್ರಯೋಗ್ ಸ್ಟುಡಿಯೋ ಹಾಗೂ ಮಯೂರ ಮೋಷನ್ ಪಿಕ್ಚರ್ಸ್ ರವರ ಸಹಭಾಗಿತ್ವದಲ್ಲಿ ಆರಂಭವಾಗುತ್ತಿರುವ ಓಕೆ ಓಟಿಟಿ ಫ್ಲಾಟ್‌ಫಾಮ್‌ ನಾಟಕ, ಸಂಗೀತ, ಸಿನಿಮಾ ಹಾಗೂ ಕಿರುಚಿತ್ರ ಹಾಗೂ ಇನ್ನಿತರ ಕಲಾ ಪ್ರಕಾರಗಳಿಗೆ ಅವಕಾಶದ ಜೊತೆಗೆ ಆದಾಯವನ್ನೂ ಗಳಿಸುವ ವೇದಿಕೆಯೂ ಆಗಲಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿರಾಜ್ಯದಲ್ಲಿ 150 ಚಿತ್ರಮಂದಿರಗಳಿಗೆ ಬೀಳಲಿದೆಯೇ ಬೀಗ? ಯಾಕೆಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights