ಎಲ್ಲಿಲ್ಲ ಲಾಕ್ ಡೌನ್ ಸಡಿಲಿಕೆ? : ರೆಡ್, ಆರೆಂಜ್, ಗ್ರೀನ್ ಜೋನ್ ಜಿಲ್ಲೆಗಳ ಪಟ್ಟಿ ಇಲ್ಲಿದೆ…

ಲಾಕ್ ಡೌನ್ ಜಾರಿಯಲ್ಲಿದ್ದರೂ ಕೊರೊನಾ ವೈರಸ್ ಹರಡುವಿಕೆ ಕಡಿಮೆಯಾಗುವ ಲಕ್ಷಣಗಳೇ ಕಾಣ ಸಿಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೋಂಕು ಹರಡುವುದರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೂ ದೇಶದಲ್ಲಿ ಸೋಂಕಿತರ ಸಂಖ್ಯೆ 35 ಸಾವಿರ ಗಡಿ ದಾಟಿದೆ. ಸಾವಿನ ಸಂಖ್ಯೆ 1,147ಕ್ಕೆ ಏರಿದೆ. ಈ ಅಪಾಯಕಾರಿ ಮಟ್ಟದಲ್ಲಿರುವ ಸ್ಥಳಗಳನ್ನು ಗುರುತಿಸಿ ರೆಡ್, ಆರೆಂಜ್, ಗ್ರೀನ್ ಜೋನ್ ಪಟ್ಟಿ ಮಾಡಲಾಗಿದೆ. ಮೇ 3ರ ನಂತರವೂ ಕೆಲವೆಡೆ ಲಾಕ್​ಡೌನ್ ನಿಯಮಗಳು ಮುಂದುವರಿಯುವ ಸಾಧ್ಯತೆ ಇದೆ.

ದೇಶದಲ್ಲಿ ವೈರಸ್ ಸೋಂಕಿನ ತೀವ್ರತೆಯ ಆಧಾರದ ಮೇಲೆ ಮೂರು ಪಟ್ಟಿ ಮಾಡಲಾಗಿದೆ. ರೆಡ್ ಜೋನ್, ಆರೆಂಜ್ ಜೋನ್ ಮತ್ತು ಗ್ರೀನ್ ಜೋನ್. ರೆಡ್​ ಜೋನ್​ನಲ್ಲಿ ಸೋಂಕಿನ ತೀವ್ರತೆ ಅಪಾಯಕಾರಿ ಮಟ್ಟದಲ್ಲಿರುತ್ತದೆ. ಬೆರಳೆಣಿಕೆ ಪ್ರಕರಣಗಳಿರುವುವು ಆರೆಂಜ್ ಪಟ್ಟಿಯಲ್ಲಿವೆ. ಕಳೆದ 15 ದಿನಗಳಿಂದ ಒಂದೂ ಪ್ರಕರಣ ದಾಖಲಾಗದೇ ಇರುವವನ್ನು ಗ್ರೀನ್ ಜೋನ್​ಗೆ ಸೇರಿಸಲಾಗಿದೆ. ಒಟ್ಟು 733 ಜಿಲ್ಲೆಗಳನ್ನ ಈ 3 ಪಟ್ಟಿಗೆ ವಿಭಾಗಿಸಲಾಗಿದೆ.

ರೆಡ್ ಜೋನ್ ಪಟ್ಟಿಯಲ್ಲಿ ದೇಶಾದ್ಯಂತ 130 ಜಿಲ್ಲೆಗಳಿವೆ. ಅದರಲ್ಲಿ ಕರ್ನಾಟಕ ಮೂರು ಜಿಲ್ಲೆಗಳಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ಕೆಂಪು ವಲಯದಲ್ಲಿವೆ.ಬಹುತೇಕ ಮೆಟ್ರೊಪೊಲಿಟನ್ ನಗರಗಳು ಕೆಂಪು ವಲಯದಲ್ಲಿವೆ. ಬೆಂಗಳೂರು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್, ಅಹ್ಮದಾಬಾದ್ ನಗರಗಳು ಈ ಪಟ್ಟಿಯಲ್ಲಿವೆ. ಉತ್ತರ ಪ್ರದೇಶದ 19 ಜಿಲ್ಲೆಗಳು ಈ ಪಟ್ಟಿಯಲ್ಲಿವೆ. ಹಾಗೆಯೇ, ಮಹಾರಾಷ್ಟ್ರ, ತಮಿಳುನಾಡು ಮತ್ತು ದೆಹಲಿ ರಾಜ್ಯಗಳ 10ಕ್ಕೂ ಹೆಚ್ಚು ಜಿಲ್ಲೆಗಳು ಕೆಂಪು ವಲಯದಲ್ಲಿವೆ.

ಇನ್ನು ಆರೆಂಜ್ ಪಟ್ಟಿಯಲ್ಲಿ ರಾಜ್ಯದ್ 13 ಜಿಲ್ಲೆಗಳಿವೆ. ಕಲಬುರ್ಗಿ, ಬೆಳಗಾವಿ, ವಿಜಯಪುರ ಮೊದಲಾದವು ಈ ಪಟ್ಟಿಯಲ್ಲಿವೆ. ರಾಮನಗರ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳು ಹಸಿರು ವಲಯದಲ್ಲಿವೆ. ರೆಡ್ ಜೋನ್:ಬೆಂಗಳೂರು ನಗರ,, ಬೆಂಗಳೂರು ಗ್ರಾಮಾಂತರ, ಮೈಸೂರು. ಆರೆಂಜ್ ಜೋನ್: ಬೆಳಗಾವಿ, ವಿಜಯಪುರ, ಕಲಬುರ್ಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ, ಉತ್ತರ ಕನ್ನಡ, ತುಮಕೂರು.

ಈ ಎರಡು ಪಟ್ಟಿಗಳಲ್ಲಿ ಇಲ್ಲದ ರಾಜ್ಯದ ಇತರೆ ಜಿಲ್ಲೆಗಳೆಲ್ಲವೂ ಹಸಿರು ವಲಯದ ಪಟ್ಟಿಯಲ್ಲಿವೆ. ಮೇ 3ರ ನಂತರ ಈ ಮೂರು ಪಟ್ಟಿಗಳಿಗೆ ಪ್ರತ್ಯೆಕ ಲಾಕ್​ಡೌನ್ ನಿಯಮಗಳು ಅನ್ವಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights