Videos: ಮೋದಿ ಸರ್ಕಾರ ನೋಡಲೇಬೇಕಾದ 12 ವಿಡಿಯೋಗಳು

ಒಂದು ಕುಟುಂಬ ಹರಿಯಾಣದ ಅಂಬಾಲಾದಿಂದ ಮಧ್ಯಪ್ರದೇಶದ ಛತ್ತರ್‌ಪುರಕ್ಕೆ 800 ಕಿ.ಮೀ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಸೂರ್ಯನ ಬಿಸಿಲ ಬೇಗೆಯಲ್ಲಿ ನಡೆಯುತ್ತಿದ್ದ ಆ ಕುಟುಂಬ ದೆಹಲಿಯ ಬಿಬಿಸಿ ಪತ್ರಕರ್ತರೊಂದಿಗೆ ಮಾತನಾಡಲು ನಿಂತರು.

ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುತ್ತ, “ನಾವು ನಮ್ಮ ಹಸಿವನ್ನು ನಿರ್ವಹಿಸುತ್ತೇವೆ. ಆದರೆ ಅವರು ಆರಾಮವಾಗಿ ಕುಳಿತಿದ್ದಾರೆ. ಅವರು ಬಡವರಿಗಾಗಿ ಏನೂ ಮಾಡಲಾರರು.ನಾವು ನಮ್ಮ ಮಕ್ಕಳೊಂದಿಗೆ ನಡೆಯುತ್ತೇವೆ. ನಾವು ಬಹಳ ತೊಂದರೆಯನ್ನು ಎದುರಿಸುತ್ತಿದ್ದೇವೆ. ಬಳಲಿಕೆಯಿಂದ ನಾವು ಸಾಯುತ್ತೇವೆ” ಎಂದು ಉಸಿರುಕಟ್ಟಿದ ಧ್ವನಿಯಲ್ಲಿ ಹೇಳಿದರು.

ಭಾರತವು, ದೇಶಾದ್ಯಂತ ಒಂದು ಮಿಲಿಯನ್ ಜನರ ವಲಸೆಗೆ ಸಾಕ್ಷಿಯಾಗಿದೆ. ದುಡಿಯುವ ವರ್ಗದ ವಲಸಿಗರು ನಡೆದು, ಸೈಕಲ್‌ನಲ್ಲಿ ಸವಾರಿ ಮಾಡುತ್ತಾ ದೂರದ ತಮ್ಮೂರಿಗೆ ಹೋಗುತ್ತಿದ್ದಾರೆ.

ಕೇವಲ ನಾಲ್ಕು ಗಂಟೆಗಳ ಅವಕಾಶ ಮಿತಿಯೊಂದಿಗೆ ಕೊರೊನಾ ವೈರಸ್‌ ನಿಯಂತ್ರಣಕ್ಕೆ ದೇಶವ್ಯಾಪಿ ಥಟ್ಟನೆ ಲಾಕ್‌ಡೌನ್ ಘೋಷಿಸಿದ ನಂತರವೂ ಜನರು ಬೀದಿ ಪಾಲಾಗಿದ್ದಾರೆ.

ಅವರು ವೇತನ ಮತ್ತು ಆಹಾರವಿಲ್ಲದೆ ಹೋರಟಿದ್ದಾರೆ.  ಅವರು ತಾಳ್ಮೆ ಮತ್ತು ಭರವಸೆಯನ್ನು ಕಳೆದುಕೊಂಡಿದ್ದಾರೆ.

https://twitter.com/lateefbabla/status/1260498621121867776

ಅವರಿಗೆ ರೈಲುಗಳನ್ನು ಮರುಪ್ರಾರಂಭಿಸಲು ಸರ್ಕಾರಕ್ಕೆ ಸುಮಾರು 40 ದಿನಗಳು ಬೇಕಾದವು – ಆದರೆ, ಆವೇಳೆಗೆ ವಲಸಿಗರ ನಡೆದು ಹೊರಟಿದ್ದರು ಮತ್ತು ಪ್ರಯಾಣದರಗಳು ವಲಸಿಗರ ಆಲೋಚನೆಗೂ ಮೀರಿದೆ.

https://twitter.com/serish/status/1260916927603421185

ಈಗ, 50 ದಿನಗಳ ನಂತರ, ಸರ್ಕಾರವು ವಲಸಿಗರಿಗೆ ಆಹಾರ ಬೆಂಬಲವನ್ನು ಘೋಷಿಸಿದೆ. ಇದು ಕ್ರೂರ ತಮಾಷೆ ಎಂದು ಅವರು ಹೇಳುತ್ತಾರೆ. ಈ ಅಮಾನವೀಯ ಬಿಕ್ಕಟ್ಟು ತೆರೆದುಕೊಳ್ಳುತ್ತಿದ್ದಂತೆ, ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಪ್ರಧಾನಿ ಮುಂದಾಗಿದ್ದಾರೆ:

ಈ ವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು ವಲಸೆ ಕಾರ್ಮಿಕರ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ.

ಮೋದಿ ಮತ್ತವರ ಸರ್ಕಾರ ಸಮಯ ತೆಗೆದುಕೊಂಡು ಈ ವೀಡಿಯೊಗಳನ್ನು ನೋಡಬಾರದೇಕೆ?

ಸುದೀರ್ಘ ಪ್ರಯಾಣವನ್ನು ಮಾಡುತ್ತಿರುವವರು ಪುರುಷರು ಮಾತ್ರವಲ್ಲ, ಮಹಿಳೆಯರೂ, ಮಕ್ಕಳೂ ಇದ್ದಾರೆ.

https://twitter.com/rohanrgupta/status/1260486025970941952

ನಡೆದು ಊರು ಸಾಗುತ್ತಿದ್ದ ಒಬ್ಬ ಗರ್ಭಿಣಿ ಮಹಿಳೆ ಮಹಾರಾಷ್ಟ್ರದ ನಾಸಿಕ್‌ನಿಂದ ಮಧ್ಯಪ್ರದೇಶದ ಸತ್ನಾಗೆ 1,100 ಕಿ.ಮೀ ಪ್ರಯಾಣ ಹೊರಟಿದ್ದಾರೆ. ದಾರಿಯ ಮಧ್ಯದಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆ ತನ್ನ ನವಜಾತ ಶಿಶುವಿನೊಂದಿಗೆ ನಡೆಯುತ್ತಲೇ ಇದ್ದಳು.

ಒಬ್ಬ ತಾಯಿ ಎಳೆದುಕೊಂಡು ಸಾಗುತ್ತಿದ್ದ ಸೂಟ್‌ಕೇಸ್‌ ಮೇಲೆ ಮಗು ಮಲಗಿದೆ. ಆ ಕುಟುಂಬವು ಪಂಜಾಬ್‌ನಿಂದ 800 ಕಿ.ಮೀ ದೂರದಲ್ಲಿರುವ ಝಾನ್ಸಿಗೆ ನಡೆದುಕೊಂಡು ಹೋಗುತ್ತಿದ್ದಾರೆ.

ಹೆದ್ದಾರಿಗಳು ವಿಶ್ವಾಸಘಾತುಕವಾಗಿ ಪರಿಣಮಿಸಿವೆ. ರಸ್ತೆ ಅಪಘಾತಗಳಲ್ಲಿ 120 ಕ್ಕೂ ಹೆಚ್ಚು ವಲಸಿಗರು ಸಾವನ್ನಪ್ಪಿದ್ದಾರೆ.

ಪ್ರಯಾಣಗಳು ಅವರನ್ನು ಮತ್ತಷ್ಟು ಬಡತನಕ್ಕೆ ದೂಡುತ್ತಿವೆ.

ಮತ್ತು ಆಹಾರದ ತೊಂದರೆ ತುಂಬಾ ತೀವ್ರವಾಗಿದೆ. ತಮ್ಮ ರೈಲು ಬಿಹಾರದ ಮೂಲಕ ಹಾದುಹೋಗುವಾಗ ಕಾರ್ಮಿಕರ ಗುಂಪು ಬಿಸ್ಕತ್‌ಗಳಿಗಾಗಿ ಹೋರಾಡುತ್ತಿದೆ.

ಹೆಚ್ಚುತ್ತಿರುವ ಕಷ್ಟಗಳ ಹೊರತಾಗಿಯೂ, ಮಾನವ ದುರಂತವನ್ನು ಅಗೋಚರವಾಗಿ ಪ್ರದರ್ಶಿಸಿರುವ ಮುಖ್ಯವಾಹಿನಿಯ ಸುದ್ದಿ ಮಾಧ್ಯಮಗಳಲ್ಲಿ ಈ ಘಟನೆಗಳು ಕಾಣಿಸುತ್ತಿಲ್ಲ.

 

https://twitter.com/RanaAyyub/status/1260889125730816000

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights