Sports : ಕೊರೊನಾ ಬಿಕ್ಕಟ್ಟಿಗೆ ಮಿಡಿದ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಹೃದಯ…

ಅರ್ಜೆಂಟೀನಾದ ಸೂಪರ್‌ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕೊರೊನಾದ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ದೇಶದ ಆಸ್ಪತ್ರೆಗಳಿಗೆ 5.540 ಮಿಲಿಯನ್ ಯುರೋಗಳನ್ನು ದೇಣಿಗೆ ನೀಡಿದ್ದಾರೆ.

ಆರೋಗ್ಯ ವೃತ್ತಿಪರರಿಗೆ ಸುರಕ್ಷತಾ ಸಾಧನಗಳನ್ನು ಖರೀದಿಸಲು ಈ ದೇಣಿಗೆಯನ್ನು ಬಳಸಲಾಗುತ್ತದೆ ಎಂದು ಬ್ಯೂನಾ ಐರಿಸ್ ಮೂಲದ ಫೌಂಡೇಶನ್ ಕೈಸಾ ಗೈರಾಹನ್ ಹೇಳಿದೆ.

ಇದಕ್ಕೂ ಮೊದಲು ಏಪ್ರೀಲ್ ನಲ್ಲಿ, ಮೆಸ್ಸಿ ಮತ್ತು ಅವರ ಬಾರ್ಸಿಲೋನಾ ತಂಡದ ಸದಸ್ಯರು ತಮ್ಮ ಸಂಬಳವನ್ನು ಶೇಕಡಾ 70 ರಷ್ಟು ಕಡಿತಗೊಳಿಸಿದರು.

ಈ  ಮಧ್ಯೆ  ಕೊರೊನಾದಿಂದ ಉದ್ಭವಿಸುವ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ಕ್ರೀಡೆಗಳನ್ನು ಪ್ರೇಕ್ಷಕರಿಲ್ಲದೆ ಆಟವಾಡುವುದೇ ಏಕೈಕ ಮಾರ್ಗವಾಗಿದೆ ಎಂದು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.

ದೆಹಲಿ ಕ್ಯಾಪಿಟಲ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್‌ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕ್ಯಾರಿ, ಪ್ರೇಕ್ಷಕರಿಲ್ಲದೆ ಆಡುವ ಸಾಧ್ಯತೆಯ ಬಗ್ಗೆ ಅಭಿಮಾನಿಗಳಿಲ್ಲದೆ ಆಟವಾಡುವುದು ವಿಚಿತ್ರವೆನಿಸುತ್ತದೆ. ಆದರೆ ಅದೇ ನಾವು ಕ್ರಮಿಸಬೇಕಾದ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.

“ನಾವೆಲ್ಲರೂ ಟಿ-20 ವಿಶ್ವಕಪ್ ಮತ್ತು ಐಪಿಎಲ್ ಆಡಲು ಬಯಸುತ್ತೇವೆ. ಆದರೆ ಅಭಿಮಾನಿಗಳಿಲ್ಲದೆ ಏನನ್ನೂ ಊಹಿಸಿಕೊಳ್ಳುವುದು ಕಷ್ಟ. ಅಭಿಮಾನಿಗಳು ಟಿವಿಯಲ್ಲಿ ಕ್ರಿಕೆಟ್ ಅನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಶೀಘ್ರ ಕ್ರಿಕೆಟ್ ಆರಂಭವಾಬಹುದು ಎಂದು ನಾನು ಭರವಸೆ ನೀಡುತ್ತೇನೆ” ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights