Cricket : ಅಮಿತ್ ಶಾ ಭೇಟಿ ನಂತರ final ಆಯ್ತು ಸೌರವ್ ಗಂಗೂಲಿಗೆ BCCI ಅಧ್ಯಕ್ಷ ಪಟ್ಟ..

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚುಕ್ಕಾಣಿ ಈಗ ಸೌರವ್ ಗಂಗೂಲಿ ಕೈಗೆ ಬರುವುದು ಕೇವಲ ಔಪಚಾರಿಕ ಕ್ರಿಯೆಯಾಗಿದ್ದು, ಇದರ ತೆರೆಮರೆಯ ಚಟುವಟಿಕೆಗಳು ಬಯಲಿಗೆ ಬರುತ್ತಿವೆ.
ಭಾನುವಾರ ರಾತ್ರಿ 9.30ರವರೆಗೂ ಬಿಸಿಸಿಐ ಅಧ್ಯಕ್ಷಗಿರಿಗೆ ಮುಂಚೂಣಿಯ ಅಭ್ಯರ್ಥಿಯಾಗಿದ್ದ ಕರ್ನಾಟಕದ ಬ್ರಿಜೆಶ್ ಪಟೇಲ್ ಕೇವಲ ಒಂದು ತಾಸಿನ ನಾಟಕದಲ್ಲಿ ಸೌರವ್‌ಗೆ ತಲೆಬಾಗಬೇಕಾಯಿತು ಎಂದು ಹೇಳಲಾಗಿದೆ.

ಆರಂಭದಲ್ಲಿ ಸೌರವ್‌ಗೆ ಅಧ್ಯಕ್ಷ ಪಟ್ಟಕ್ಕೇರುವ ಉತ್ಸಾಹ ಇರಲಿಲ್ಲವಾದರೂ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ ಅವರ ಹೆಸರು ಪ್ರಬಲಾಗಿ ಚಾಲ್ತಿಗೆ ಬಂದಿತ್ತು. ಆದರೆ ಸೂಕ್ತ ಸಮಯದಲ್ಲಿ ಈ ದಾಳ ಉರುಳಿಸಲು ಅವರ ಬೆಂಬಲಿಗರ ಬಣ ಕಾಯುತ್ತಿತ್ತು.

ಈ ಮಧ್ಯೆ ಬಿಸಿಸಿಐಗೆ ಕಪ್ಪು ಚುಕ್ಕೆಯಾಗಿದ್ದ ಶ್ರೀನಿವಾನ್ ಬೆಂಬಲಿತ ಅಭ್ಯರ್ಥಿ (ಬ್ರಿಜೇಶ್) ಪರ ನಲ್ಲುವ ಮೂಲಕ ಮತ್ತೆ ಮಂಡಳಿ ಶ್ರೀನಿ ಹಿಡಿತಕ್ಕೆ ಸಿಲುಕಲಿದೆ ಎಂದು ಕೆಲವರು ದನಿ ಎತ್ತಿದ್ದೇ ತಡ ಈಗ ಖಜಾಂಚಿಯಾಗಲಿರುವ ಅನುರಾಗ್ ಠಾಕೂರ್‍ ಅವರು ಸೌರ್‍ ಹೆಸರನ್ನು ತೇಲಿಬಿಟ್ಟರು.

ಈಶಾನ್ಯ ಹಾಗೂ ಪೂರ್ವ ವಲಯದ ರಾಜ್ಯಗಳು ಸೌರವ್ ಬೆಂಬಲಕ್ಕೆ ನಿಂತವು. ಅದಾದ ಬಳಿಕ ಸೌರವ್‌ ಅವರ ಅವಿರೋಧ ಆಯ್ಕೆಗೆ ಹಾದಿ ಸುಗಮವಾಯಿತು ಎಂದು ಬಿಸಿಸಿಐನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights