Small screen : ವಿಶ್ವ ದಾಖಲೆ ಬರೆದ ರಾಮಾಯಣ, ಒಂದೇ ದಿನ 7.7 ಕೋಟಿ ಜನರಿಂದ ವೀಕ್ಷಣೆ..

Lock down ನಲ್ಲಿ ಹಳೆಯ ಸೀರಿಯಲ್ ಗಳಿಗೆ ಬಾರಿ ಡಿಮ್ಯಾಂಡ್ ಬಂದಿದೆ.. ಯಾಕೆಂದರೆ ಹೊಸ ದಾರಾವಾಹಿಗಳು ನಿರ್ಮಾಣ ನಿಂತು ಹೊಗಿದೆ.. ಗೃಹ ಭಂದನದಲ್ಲಿರುವ ನಾಗರಿದ ಮನರಂಜನೆಯಿಂದ ವಂಚಿತನಾಗಿದ್ದಾನೆ, ಅದಕ್ಕಾಗಿ ಹಳೆಯ ಜನಪ್ರಿಯ ದಾರಾವಾಹಿಗಳಿಗೆ ಮೊರೆಹೊಗಿದ್ದಾನೆ.. ಅದರ ಸಂಪೂರ್ಣ ಲಾಭ ಪಡೆಯುತ್ತಿರುವ ಡಿಡಿ ವಾಹಿನಿ ರಾಮಾಯಣ ಮತ್ತು ಮಹಾಭಾರತ ಸೀರಿಯಲ್ ಗಳ ಪ್ರಸಾರ ಮಡುತ್ತಿದೆ.. ಇದರಲ್ಲಿ  ಮುರು ದಶಕಗಳ ಹಿಂದೆ ಪ್ರಸಾರವಾಗಿದ್ದ ರಮಾನಂದ ಸಾಗರರ ರಾಮಾಯಣ ಧಾರಾವಾಹಿ ತನ್ನ ಮರು ಪ್ರದರ್ಶನದಲ್ಲಿ ಹೊಸ ವಿಶ್ವ ದಾಖಲೆ ಸ್ಥಾಪಿಸಿದೆ ಅಚ್ಚರಿ ಮೂಡಿಸಿದೆ…

ಕಳೆದ ಏಪ್ರಿಲ್ 16ರಂದು ಸುಮಾರು 7.7 ಕೋಟಿ ವೀಕ್ಷಕರು ರಾಮಾಯಣ ಧಾರಾವಹಿಯನ್ನು ವೀಕ್ಷಿಸಿರುವುದು ಹೊಸ ವಿಶ್ವ ದಾಖಲೆಯಾಗಿದೆ. ಮುರು ದಶಕಗಳ ಹಿಂದೆ ಅಸಂಖ್ಯ ನೋಡುಗರನ್ನು ಮೋಡಿ ಮಾಡಿದ್ದ ರಾಮಾಯಣ ಧಾರಾವಹಿ ತನ್ನ ಮರು ಪ್ರದರ್ಶನದಲ್ಲಿ ಸಹ ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮರು ಪ್ರದರ್ಶನದಲ್ಲಿ ರಾಮಾಯಣ ಧಾರಾವಾಹಿ ಪ್ರಪಂಚದಲ್ಲಿಯೇ ಯಾವ ಎಪಿಸೋಡೂ ತಲುಪದಷ್ಟು ವೀಕ್ಷಕರನ್ನು ತಲುಪಿ ಹೊಸ ದಾಖಲೆ ಬರೆದಿದೆ ಎಂದು ದೂರದರ್ಶನ ಟ್ವೀಟ್ ತಿಳಿಸಿದ್ದಾರೆ. ಕೊರೋನಾ ವಿರುದ್ಧ ಹೋರಾಟದ ಅಂಗವಾಗಿ ಕಳೆದ ತಿಮಗಳ 25ರಿಂದ ದೇಶದಲ್ಲಿ ಹೇರಲಾದ ಲಾಕ್‌ಡೌನ್‌ ಸಂದರ್ಭದಲ್ಲಿ ಜನ ಭಲವಂತವಾಗಿ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ.

ಈ ಪರಿಸ್ಥಿತಿಯ ಲಾಭ ಪಡೆದ ದೂರದರ್ಶನ ತನ್ನ ಬತ್ತಳಿಕೆಯಲ್ಲಿದ್ದ ಹಳೆಯ ಜನಪ್ರಿಯ ಧಾರಾವಾಹಿಗಳ ಮರು ಪ್ರಸಾರಕ್ಕೆ ಮುಂದಾಯಿತು. ಈ ಮಾಲಿಕೆಯಲ್ಲಿ ಮೊದಲಿಗೆ ರಾಮಾಯಣದ ಮರು ಪ್ರಸಾರ ಆರಂಭವಾಗಿ ನಂತರ ಮಹಾಭಾರತ ಮುಂತಾದ ಧಾರಾವಾಹಿಗಳವರೆಗೆ ವಿಸ್ತರಿಸಿತು. ಇದೇ ದಾರಿಯಲ್ಲಿ ಸಾಗಿರುವ ಖಾಸಗಿ ವಾಹಿನಿಗಳು ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಸಾರಕ್ಕೆ ಮುಂದಾಗಿವೆ..

ರಾಮಾಯಣ ಧಾರಾವಾಹಿಯಲ್ಲಿ ಅರುಣ್ ಗೋವಿಲ್ ರಾಮನ ಪಾತ್ರ ಧರಿಸಿದರೇ ದೀಪಿಕಾ ಚಿಕ್ಲಿಯಾ ಸೀತೆಯಾಗಿ, ಸುನಿಲ್ ಲಹಿರಿ ಲಕ್ಷ್ಮಣನಾಗಿ, ದಾರಾ ಸಿಂಗ್ ಹನುಂತನಾಗಿ, ಲಲಿತಾ ಪವಾರ್‍ ಮಂಥರೆ ಮತ್ತು ಅರವಿಂದ್ ತ್ರಿವೇದಿ ರಾವಣನಾಗಿ ನಟಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights