ರಾಜೀನಾಮೆ ನೀಡಿದ್ದ ಮೂವರು ಶಾಸಕರು ಇಂದು ಸ್ಪೀಕರ್ ಮುಂದೆ ಗೈರು…

ರಾಜೀನಾಮೆ ನೀಡಿದ್ದ ಮೂವರು ಶಾಸಕರು ಇಂದು ಸ್ಪೀಕರ್ ಮುಂದೆ ಗೈರಾಗಿದ್ದಾರೆ. ವಿಚಾರಣೆಗಾಗಿ ಸ್ಪೀಕರ್ ಇಂದು ಮಧ್ಯಾಹ್ನ 3 ಮತ್ತು  ಸಂಜೆ 4 ಗಂಟೆಗೆ ತಮ್ಮ ಮುಂದೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದ್ರೆ ಮೂವರು ಶಾಸಕರು ವಿಚಾರಣೆಗೆ ಹಾಜರಾಗಿಲ್ಲ.

ಶಾಸಕರು ಗೈರಾದ ಕಾರಣ ಸ್ಪೀಕರ್ ಕಲಾಪ ಸಲಹಾ ಸಮಿತಿಗೆ ತೆರಳಿದ್ದಾರೆ. ಇಂದು ಸ್ಪೀಕರ್ ಮುಂದೆ ನಾರಾಯಣ ಗೌಡ, ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಹಾಜರಾಗಬೇಕಿತ್ತು.

ಈ ಮಧ್ಯೆ, ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುತ್ತೇನೆಂದು ಹೇಳಿದ್ದಾರೆ. ಇಲ್ಲಿ ಹೇಳಲು ಏನೂ ಇಲ್ಲ. ಸದನದಲ್ಲಿ ಎಲ್ಲವನ್ನೂ ಹೇಳುತ್ತೇನೆ. ಏನು ಬಂದ್ರೂ ಸದನದಲ್ಲಿ ಎದುರಿಸುತ್ತೇನೆಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com