ಸೆಮಿಫೈನಲ್ ಪಂದ್ಯದಲ್ಲಿ ಧೋನಿ, 7ನೇ ಬ್ಯಾಟ್ಸ್ಮೆನ್ ಆಗಿ ಕಣಕ್ಕಿಳಿಸಿರುವುದಕ್ಕೆ ಕಾರಣ ಕೊಟ್ಟ ರವಿಶಾಸ್ತ್ರಿ

ಸೆಮಿಫೈನಲ್ ನಲ್ಲಿ ಸೋತ ಟೀಂ ಇಂಡಿಯಾ ವಿಶ್ವಕಪ್ ನಿಂದ ಹೊರ ಬಿದ್ದಿದೆ. ಆದ್ರೆ ಸೆಮಿಫೈನಲ್ ಪಂದ್ಯದ ಸೋಲಿನ ಬಗ್ಗೆ ಚರ್ಚೆ, ವಿಮರ್ಶೆಗಳು ನಡೆಯುತ್ತಲೇ ಇವೆ. ಸೆಮಿಫೈನಲ್ ಪಂದ್ಯದಲ್ಲಿ ಧೋನಿ, 7ನೇ ಬ್ಯಾಟ್ಸ್ಮೆನ್ ಆಗಿ ಕಣಕ್ಕಿಳಿದಿರುವುದು ಅನೇಕರ ಕೋಪಕ್ಕೆ ಕಾರಣವಾಗಿದೆ. ಈಗ ಈ ಬಗ್ಗೆ ಕೋಚ್ ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ.

ಧೋನಿಯನ್ನು 7ನೇ ಸ್ಥಾನದಲ್ಲಿ ಕಳಿಸಲು ಮಹತ್ವದ ಕಾರಣವಿದೆ. ಇಡೀ ತಂಡದ ನಿರ್ಧಾರ ಇದಾಗಿತ್ತು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಒಂದು ವೇಳೆ ಧೋನಿ ಮೊದಲೇ ಬ್ಯಾಟಿಂಗ್ ಗೆ ಬಂದು, ಔಟ್ ಆದ್ರೆ ತಂಡದ ಪರಿಸ್ಥಿತಿ ಇನ್ನಷ್ಟು ಕಷ್ಟವಾಗಲಿತ್ತು. ಕೊನೆಯಲ್ಲಿ ಅನುಭವಿ ಆಟಗಾರ ಅವಶ್ಯಕತೆಯಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.

ಧೋನಿ ಅತ್ಯುತ್ತಮ ಫಿನಿಶರ್. ಅವ್ರನ್ನು ಮೊದಲೇ ಕಳುಹಿಸುವುದು ನ್ಯಾಯವಾಗ್ತಿರಲಿಲ್ಲ. ತಂಡದ ಎಲ್ಲ ಸದಸ್ಯರ ಅಭಿಪ್ರಾಯ ಇದೇ ಆಗಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ. ಈ ಹಿಂದೆ ಕೊಹ್ಲಿ ಕೂಡ ಇದೇ ಮಾತನ್ನು ಹೇಳಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com