ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಚಿತ್ರದ ಟ್ರೈಲರ್ ಅಭಿಮಾನಿಯಿಂದಲೇ ಬಿಡುಗಡೆ

ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರೆದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಕುರುಕ್ಷೇತ್ರ ಚಿತ್ರದ ಟ್ರೈಲರ್ ಅನ್ನು ಅಭಿಮಾನಿಯೊಬ್ಬರ ಕೈಯಲ್ಲಿ ಬಿಡುಗಡೆ ಮಾಡಿಸುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.‌

ಭಾನುವಾರದಂದು ಕೋರಮಂಗಲದ ಹೊರಾಂಗಣ ಕ್ರೀಡಾಂಗಣದಲ್ಲಿ ಆಡಿಯೋ ಬಿಡುಗಡೆ ಸಮಾರಂಭ ನಡೆದಿದ್ದು, ಇದೇ ಸಂದರ್ಭದಲ್ಲಿ ದೂರದಲ್ಲಿ ನಿಂತಿದ್ದ ಅಭಿಮಾನಿಯನ್ನು ಕರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಬಿಡುಗಡೆ ಮಾಡಿಸಿದರು.

ಬಳಿಕ ಮಾತನಾಡಿದ ಅವರು, ಅಭಿಮಾನಿಗಳ ಋಣವನ್ನು ಇನ್ನೂ ಏಳು ಜನ್ಮ ಹುಟ್ಟಿದರು ತೀರಿಸಲು ಸಾಧ್ಯವಿಲ್ಲ. ಅವರುಗಳಿಂದಲೇ ನಾವು ಎಂದು ಹೇಳಿದ್ದಾರೆ. ಜೊತೆಗೆ ಕುರುಕ್ಷೇತ್ರ ಚಿತ್ರದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಆನೆ ಸಾಕಲು ಪರವಾನಗಿ ಸಿಕ್ಕರೆ ಸಿನಿಮಾದಲ್ಲಿರುವ ಆನೆಯನ್ನು ಸಾಕುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com