‘ಭಾರತವೇ ವಿಶ್ವಕಪ್ ಗೆಲ್ಲಬೇಕು’ ಪಾಕ್ ತಂಡದ ಮಾಜಿ ಆಟಗಾರ ಶೋಯೆಬ್‌ ಅಖ್ತರ್

ಇಂಗ್ಲೆಂಡ್‌ನಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ವಿಶ್ವಕಪ್ ಟ್ರೋಫಿ‌ ಅಂತಿಮ ಹಂತ ತಲುಪಿದ್ದು, ಇದೀಗ ಭಾರತವೇ ವಿಶ್ವಕಪ್ ಗೆಲ್ಲಬೇಕೆಂದು ಪಾಕ್ ತಂಡದ ಮಾಜಿ ಆಟಗಾರ ಶೋಯೆಬ್‌ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾ ಖಂಡದಿಂದ ವಿಶ್ವಕಪ್‌ಗಾಗಿ ಕಾದಾಡಿದ್ದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನ ತಂಡದ ಪೈಕಿ ಭಾರತ ಮಾತ್ರ ಸೆಮೀಸ್ ಕಾದಾಟದಲ್ಲಿ ಉಳಿದಿವೆ. ವಿಶ್ವಕಪ್ ಏಷ್ಯಾ ಉಪಖಂಡದಲ್ಲಿಯೇ ಉಳಿಯಬೇಕೆಂಬ ಆಶಯ ವ್ಯಕ್ತಪಡಿಸಿರುವ ಅಖ್ತರ್, ಭಾರತವನ್ನು ಬೆಂಬಲಿಸಿದ್ದಾರೆ.

ಈ‌ ಬಗ್ಗೆ ಮಾತನಾಡಿರುವ ಅವರು, ಸದ್ಯದ ಪರಿಸ್ಥಿತಿಯಲ್ಲಿ ಭಾರತ ತಂಡ ಬಲಿಷ್ಠವಾಗಿದೆ. ಭಾರತವನ್ನು ಎದುರಿಸಲಿರುವ ನ್ಯೂಜಿಲೆಂಡ್ ಒತ್ತಡವನ್ನು ತಡೆಯುವುದಿಲ್ಲ‌. ಆದ್ದರಿಂದ ಫೈನಲ್ ಗೆ ಭಾರತ ಹೋಗಲಿದೆ ಎಂದಿದ್ದಾರೆ.

ಭಾರತದ ಆರಂಭಿಕರಾದ ರೋಹಿತ್ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದ್ದು, ಉತ್ತಮ ಶಾಟ್‌ಗಳ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಕೆ.ಎಲ್. ರಾಹುಲ್ ಸಹ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರ ಆಟ ತಂಡದ ಉತ್ಸಾಹವನ್ನು ಹೆಚ್ಚಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com