ಮುಂಬೈ 26-11 ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಹೀದ್ ಅಂದರ್…?

ಮುಂಬೈ 26-11 ರ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಹೀದ್ ಮತ್ತು ಆತನ ಸಹಚರರನ್ನು ಶೀಘ್ರದಲ್ಲಿ ಬಂಧಿಸಲಾಗುತ್ತದೆ ಅಂಥ ಪಾಕಿಸ್ತಾನ ಸರ್ಕಾರ ತಿಳಿಸಿದೆ.

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಹಫೀಜ್ ಸಹೀದ್ ಮತ್ತು ಇತರೆ 12 ಮಂದಿಯ ಮೇಲೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ದಳ ಪ್ರಕರಣ ದಾಖಲಿಸಿದ್ದು, ಶೀಘ್ರದಲ್ಲಿ ಬಂಧಿಸುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಹಫೀಜ್ ಸಹೀದ್ ಮೇಲೆ ಈತನಕ ಒಟ್ಟು 23 ಪ್ರಕರಣ ದಾಖಲಾಗಿವೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ಇಂಥ ಕ್ರಮಗಳನ್ನು ಈ ಹಿಂದೆ ಎಷ್ಟು ನೋಡಿಲ್ಲ ಅಂದಿದೆ.

ಇಮ್ರಾನ್ ಖಾನ್ ಸರ್ಕಾರದ ಮೂಲಗಳು ಹೇಳುವಂತೆ ಹಫೀಜ್ ಸಹೀದ್ ಬಂಧನದ ಸೂಚನೆಗೆ ಪೊಲೀಸರು ಎದುರು ನೋಡುತ್ತಿದ್ದಾರೆ. ಹಫೀಜ್ ಪ್ರಸ್ತುತ ಲಾಹೋರ್ ಮನೆಯಲ್ಲಿದ್ದಾನೆ ಎನ್ನಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com