ಹುಟ್ಟುಹಬ್ಬಕ್ಕೆ ಸರ್ಕಾರಿ ಶಾಲೆಯನ್ನು ದತ್ತು ಪಡೆದ ಡೈನಾಮಿಕ್ ಪ್ರಿನ್ಸ್ : ಮೆಚ್ಚುಗೆ ವ್ಯಕ್ತಪಡಿಸಿದ ದಚ್ಚು

ಸರ್ಕಾರಿ ಶಾಲೆಯನ್ನು ದತ್ತು ಪಡೆಯುವ ಮೂಲಕ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಇಂದು ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರಜ್ವಲ್ ಅವರ ಈ ಕಾರ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿ, “ನಮ್ಮ ಹುಡ್ಗ ಪ್ರಜ್ಜು ಒಂದು ಕನ್ನಡ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಸುದ್ದಿ ಕೇಳಿ ತುಂಬಾನೇ ಖುಷಿಯಾಯ್ತು. ಇಂಥ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಹೀಗೆ ಸದಾ ಮುಂಚೂಣಿಯಲ್ಲಿರಲಿ ಎಂದು ಹಾರೈಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಪ್ರಜ್ವಲ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕಿದ್ದರು. “ಈ ಬಾರಿಯ ಹುಟ್ಟು ಹಬ್ಬದಂದು ನಾನು ಸರ್ಕಾರಿ ಶಾಲೆ ಉಳಿಸಿ ಎಂಬ ಸಂಸ್ಥೆಯ ಜೊತೆ ಕೈ ಜೋಡಿಸಿದ್ದೇನೆ. ಅಲ್ಲದೆ ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಗಿಫ್ಟ್ ಗೆ ಹಣ ಖರ್ಚು ಮಾಡುವ ಬದಲಾಗಿ ಹತ್ತಿರದಲ್ಲಿರುವ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ಸ್, ಜಾಮೆಟ್ರಿ ಬಾಕ್ಸ್ ನೀಡಿ” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

https://www.instagram.com/prajwaldevaraj/?utm_source=ig_embed

ಪ್ರಜ್ವಲ್ ಅವರ ಹುಟ್ಟುಹಬ್ಬಕ್ಕೆ ಕುಟುಂಬದವರು ಸುಮಾರು 90 ಲಕ್ಷ ರೂ. ಬೆಲೆ ಬಾಳುವ ಕೆಂಪು ಬಣ್ಣದ ವೋಲ್ವೋ ಎಕ್ಸ್ ಸಿ – 90 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಮುಂದೆ ಪ್ರಜ್ವಲ್ ಅವರ ತಂದೆ, ನಟ ದೇವರಾಜ್, ತಾಯಿ, ಪತ್ನಿ ರಾಗಿಣಿ ಹಾಗೂ ಸಹೋದರ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com