88 ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ ಭಾರತಕ್ಕೆ ಚಿಯರ್ಸ್….

ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ ಸೆಮೀಸ್‌ಗೆ ಸ್ಥಾನ ಖಚಿತಪಡಿಸಿಕೊಂಡಿದೆ. ಇದೇ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಸೂಪರ್ ಫ್ಯಾನ್ ಚಾರುಲತಾ ಅವರ ಆರ್ಶೀವಾದ ಪಡೆದಿದ್ದಾರೆ.

ಹೌದು, ಪಂದ್ಯ ಆರಂಭವಾದಾಗಿನಿಂದ ಭಾರತ‌ ತಂಡಕ್ಕೆ ಭಾರಿ‌ ಬೆಂಬಲ ನೀಡುತ್ತಿದ್ದ ವೃದ್ಧೆ ಭಾರಿ ವೈರಲ್ ಆಗಿದ್ದರು. ಈಕೆಯ ಹೆಸರು ಚಾರುಲತಾ ಎಂದು ಹೇಳಲಾಗಿದ್ದು, 88 ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ ಭಾರತಕ್ಕೆ ಚಿಯರ್ಸ್ ಮಾಡಿದ್ದರು.

ಪಂದ್ಯದ ಬಳಿಕ ಈ‌ ಅಭಿಮಾನಿ ಬಳಿ‌ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತೆರಳಿ ಆರ್ಶೀವಾದ ಪಡೆದರು. ಈ‌ ವೇಳೆ ಕೆಲಹೊತ್ತು ಅಜ್ಜಿಯೊಂದಿಗೆ ಮಾತನಾಡಿರುವ ಇಬ್ಬರು ಆಟಗಾರರು,‌ ಅಜ್ಜಿಯ ಉತ್ಸಾಹಕ್ಕೆ ಬೆರಗಾಗಿದ್ದಾರೆ. ಇಬ್ಬರು ಆಟಗಾರರು‌ ತೆರಳುವ ಮೊದಲು, ಅಜ್ಜಿ ಇಬ್ಬರಿಗೂ ಅಭಿಮಾನದ ಮುತ್ತು ನೀಡಿ ಆರ್ಶೀವಾದ ಮಾಡಿದ್ದು, ಇದೀಗ ಈ‌ ವಿಡಿಯೊ‌‌‌ ವೈರಲ್ ಆಗಿದೆ.

https://twitter.com/cricketworldcup/status/1146122885217574913

Leave a Reply

Your email address will not be published.

Social Media Auto Publish Powered By : XYZScripts.com