Cricket world cup : ವಿರಾಟ್ ಪಡೆಗೆ ಸೋಲುಣಿಸಿದ ಇಂಗ್ಲೆಂಡ್, ಪಾಕ್ ಅಭಿಮಾನಿಗಳ ಆಕ್ರೋಶ

ವಿಶ್ವಕಪ್ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ ಸೋಲು ಕಂಡಿರುವುದಕ್ಕೆ ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊನೆಯ 10 ಓವರ್ ನಲ್ಲಿ ಭಾರತದ ಆಟಗಾರರು ತೋರಿದ ನಿರಾಶಾದಾಯಕ ಪ್ರದರ್ಶನದ ವಿರುದ್ಧ ಪಾಕಿಸ್ತಾನಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಬಾಕಿಯಿದೆ. ಆ ಪಂದ್ಯದಲ್ಲಿ ಪಾಕ್ ಗೆಲುವು ಸಾಧಿಸಬೇಕು. ಜೊತೆಗೆ ಇತರ ತಂಡಗಳ ಪ್ರದರ್ಶನವನ್ನು ಆಧರಿಸಿ ಅದರ ಸೆಮಿಫೈನಲ್ ದಾರಿ ನಿರ್ಧಾರವಾಗಲಿದೆ.

ಒಂದು ವೇಳೆ ಭಾರತ ನಿನ್ನೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದರೆ ಪಾಕ್ ದಾರಿ ಸುಲಭವಾಗಿತ್ತು. ಇದೇ ಕಾರಣಕ್ಕೆ ಪಾಕಿಸ್ತಾನಿಗಳು, ಇಂಗ್ಲೆಂಡ್ ವಿರುದ್ಧ ಭಾರತದ ಗೆಲುವಿಗೆ ಹಾರೈಸುತ್ತಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com