ವೀಕೆಂಡ್ ವಿಥ್ ರಮೇಶ್ : ಸಾಧಕರ ಸೀಟ್ ನಲ್ಲಿ ಶಂಕರ್ ಮಹಾದೇವ್ ಬಿದರಿ ಮತ್ತು ಬಿ.ಬಿ ಅಶೋಕ್ ಕುಮಾರ್

ವೀಕೆಂಡ್ ವಿಥ್ ರಮೇಶ್ 4ನೇ ಋತುವಿನಲ್ಲಿ ಸಾಧಕರ ಸೀಟಿಗೆ ಈ ವೀಕೆಂಡ್‍ನಲ್ಲಿ ಖ್ಯಾತ ಐಪಿಎಸ್ ಅಧಿಕಾರಿಗಳಾದ ಶಂಕರ್ ಮಹಾದೇವ್ ಬಿದರಿ ಮತ್ತು ಬಿ.ಬಿ.ಅಶೋಕ್ ಕುಮಾರ್ ಅವರ ಜೀವನದ ಯಶೋಗಾಥೆಗಳನ್ನು ಕೇಳುವ ಅವಕಾಶ ಕಲ್ಪಿಸಲಿದೆ. ಕನ್ನಡಿಗರ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿದ ಈ ಐಪಿಎಸ್ ಅಧಿಕಾರಿಗಳ ಜೀವನದ ಏರಿಳಿತಗಳನ್ನು ಕಾಣಲು ವೀಕೆಂಡ್ ವಿಥ್ ರಮೇಶ್‍ಗೆ ಜೂನ್ 29 ಮತ್ತು ಜೂನ್ 30ರಂದು ರಾತ್ರಿ 9.30ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್.ಡಿ.ಗೆ ಟ್ಯೂನ್ ಆಗಿರಿ.

ಶಂಕರ್ ಮಹಾದೇವ್ ಬಿದರಿ ಮತ್ತು ಅವರ ಇಡೀ ಕುಟುಂಬ ಉನ್ನತ ಶಿಕ್ಷಣ ಪಡೆದ ಸುಶಿಕ್ಷಿತರಾಗಿದ್ದು. ಅವರು ಐಪಿಎಸ್ ಆಗಿದ್ದರೆ, ಅವರ ಪತ್ನಿ ವೈದ್ಯೆ, ಅವರ ಮಗಳು ಐಎಸ್‍ಎಸ್ ಅಧಿಕಾರಿ ಮತ್ತು ಇತಿಹಾಸದಲ್ಲಿಯೇ
ಐಎಎಸ್‍ನಲ್ಲಿ ಮೊದಲ ರ್ಯಾಂಕ್ ಪಡೆದ ಮೊದಲ ಕರ್ನಾಟಕದ ಅಭ್ಯರ್ಥಿ, ಅವರ ಪುತ್ರ ಹಾಗೂ ಅಳಿಯ ಇಬ್ಬರೂ ಐಪಿಎಸ್ ಅಧಿಕಾರಿಗಳು ಅವರು ರಮೇಶ್ ಅವರೊಂದಿಗೆ ಮಾತನಾಡುವಾಗ ನೆನಪುಗಳ ಪ್ರಯಾಣದಲ್ಲಿ ಮುಳುಗಿಹೋಗುತ್ತಾರೆ. ಅವರು ಚೆನ್ನಾಗಿ ಶಿಕ್ಷಣ ಪಡೆಯುವ ಬಯಕೆ ಹೊಂದಿದ್ದರೂ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಫೋನ್ ಆಪರೇಟರ್ ಆಗಿ ವೃತ್ತಿ ಪ್ರಾರಂಭಿಸುತ್ತಾರೆ. ಹಲವು ವರ್ಷಗಳ ಕಠಿಣ ಪರಿಶ್ರಮ ಮತ್ತು ಹೋರಾಟದಿಂದ ಶಂಕರ್ ಮಹಾದೇವ್ ಬಿದರಿ ಕರ್ನಾಟಕ ಪೊಲೀಸ್ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ)ರ ಅತ್ಯುನ್ನತ ಹುದ್ದೆಗೆ ಏರಿ
ನಿವೃತ್ತರಾಗುತ್ತಾರೆ.

ಪೊಲೀಸ್ ವೃತ್ತಿಯಲ್ಲಿ ಅವರ ಜೀವನ ಹಲವು ಮೈಲಿಗಲ್ಲುಗಳನ್ನು ಹೊಂದಿದೆ. ಅದರಲ್ಲಿ ಒಂದು ಅವರು 1993ರಲ್ಲಿ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಸುವ ಸ್ಪೆಷಲ್ ಟಾಸ್ಕ್ ಫೋರ್ಸ್ ಸೇರಿದ್ದುಮುಖ್ಯವಾಗಿದೆ. ಈ 3 ವರ್ಷಗಳ ಅವಧಿಯಲ್ಲಿ ಶಂಕರ್ ಬಿದರಿ ಅವರ ದಕ್ಷ ತಂಡ ಮತ್ತು ಕಾರ್ಯತಂತ್ರ ನಿರ್ವಹಣೆಯಿಂದ ವೀರಪ್ಪನ್‍ನ 200 ಜನರ ತಂಡವನ್ನು 5-6 ಜನರಿಗೆ ಕುಗ್ಗಿಸಲು ಶಕ್ತವಾಗುತ್ತಾರೆ.

ಅವರು 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಂಟಾದ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಬೆಂಗಳೂರು ಕಮಿಷನರ್ ಆಗಿ ಅವರು ವಹಿಸಿದ ಪಾತ್ರಕ್ಕಾಗಿ ಸದಾ ಸ್ಮರಣೀಯರಾಗಿರುತ್ತಾರೆ ಅಲ್ಲಿ ಅವರು ಜನರು ಆಘಾತಕ್ಕೆ
ಒಳಗಾಗಿದ್ದರೂ ಶಾಂತವಾಗಿರುವಂತೆ ನೋಡಿಕೊಂಡು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ.  ವೀಕೆಂಡ್ ವಿಥ್ ರಮೇಶ್ ತಂಡವು ಶಂಕರ್ ಮಹಾದೇವ್ ಬಿದರಿ ಅವರನ್ನು ಅವರು ಸಾಧಕರ ಸೀಟಿಗೆ
ನಡೆಯುತ್ತಿದ್ದಂತೆ ಸಿರಿಂಜ್ ಒಳಗೊಂಡ ಹೃದಯದೊಂದಿಗೆ ಸ್ವಾಗತಿಸುತ್ತದೆ, ಇದು ಅವರ ಪತ್ನಿ ಉಮಾದೇವಿ ಅವರೊಂದಿಗಿನ ಸ್ಮರಣೀಯ ಪ್ರೇಮಕಥೆಗೆ ಗೌರವವನ್ನು ವಿಶಿಷ್ಟ ರೀತಿಯಲ್ಲಿ ಅಭಿವ್ಯಕ್ತಿಸಿದೆ.

ಟೈಗರ್ ಅಶೋಕ್  ಕುಮಾರ್ ಎಂದೇ ಖ್ಯಾತಿ ಪಡೆದಿರುವ ಬಿ.ಬಿ.ಅಶೋಕ್ ಕುಮಾರ್, ತಮ್ಮ ಹಿಂದಿನ ಜೀವನಕ್ಕೆ ಸಂಚರಿಸಿ ರಮೇಶ್ ಅವರೊಂದಿಗೆ ಅವರ ಶಾಲಾ ದಿನಗಳು, ಪೊಲೀಸ್ ಅಧಿಕಾರಿಯಾಗುವ ನಿರ್ಧಾರದ ಹಿಂದಿನ ಕಥೆ ಮುಂತಾದವುಗಳನ್ನು ಅನಾವರಣಗೊಳಿಸುತ್ತಾರೆ. ಆಶ್ಚರ್ಯವೆಂದರೆ ಅಶೋಕ್ ಕುಮಾರ್ ಅವರು ಎಂದಿಗೂ ಪೊಲೀಸ್ ಪಡೆಯನ್ನು ಸೇರುವ ಉದ್ದೇಶದಲ್ಲಿರಲಿಲ್ಲ. ಅವರ ಉದ್ದೇಶ ಭಾರತೀಯ ಸೇನೆ ಸೇರುವುದಾಗಿದ್ದು.

ಅವರ ಆಪ್ತಮಿತ್ರನೊಬ್ಬನಿಗೆ ದುರಾದೃಷ್ಟಕರ ಘಟನೆ ಅವರ ನಿರ್ಧಾರ ಬದಲಿಸಿತು. ಅವರ ಕಾಲೇಜು ದಿನಗಳಲ್ಲಿ ಅವರ ಮಿತ್ರನೊಬ್ಬನನ್ನು ಕ್ರಿಮಿನಲ್ ಎಂದು ತಪ್ಪಾಗಿ ಗುರುತಿಸಿದ್ದಕ್ಕಾಗಿ ಜೈಲುಸೇರಿ ಲಾಕಪ್‍ನಲ್ಲಿಯೇ ಮರಣಿಸಿದ್ದ, ಇದು ಅಶೋಕ್ ಅವರಿಗೆ ಪೊಲೀಸರ ಮೇಲೆ ನಂಬಿಕೆ ದೂರ ಮಾಡಿತು.

ಇದರ ಫಲಿತಾಂಶದಿಂದ ಅವರು ತಮ್ಮ ಪದವಿಯನ್ನೂ ಪೂರ್ಣಗೊಳಿಸಲಿಲ್ಲ, ಆದರೆ ಯೂನಿವರ್ಸಿಟಿಯ ಎನ್‍ಸಿಸಿ ಆಫೀಸರ್, “ನೀನು ಹುಟ್ಟಿರುವುದೇ ಸಮವಸ್ತ್ರದಲ್ಲಿ, ಎಂದಿಗೂ ಬಿಡಬೇಡ” ಎಂದು ಉತ್ತೇಜಿಸಿದ್ದು ಅವರನ್ನು ಕಾಲೇಜಿಗೆ ಹಿಂದಿರುಗಿ ತಮ್ಮ ಕೋರ್ಸ್ ಪೂರ್ಣಗೊಳಿಸಲು ನೆರವಾಯಿತು.

ಪೊಲೀಸ್ ಪಡೆಗೆ ಅವರ ವೃತ್ತಿಯ ಪ್ರಯಾಣ ಅವರು ಬೆಂಗಳೂರಿನಲ್ಲಿ ಕಾನೂನು ಕೋರ್ಸ್‍ಗೆ ಸೇರಿದಾಗ ಪ್ರಾರಂಭವಾಯಿತು ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‍ಪಿಎಫ್) ವಿಷಯ ಓದಿದಾಗ
ಮನವರಿಕೆಯಾಯಿತು. ಇದು ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ನೆರವಾಯಿತು ಮತ್ತು ದೇಶದಲ್ಲಿ ಪೊಲೀಸ್ ಅಧಿಕಾರಿಗಳು ಹೊಂದಿರುವ ಅಧಿಕಾರ ಕುರಿತು ತಿಳಿಯಿತು. ಅಲ್ಲದೆ ಅವರು ಅಮಿತಾಭ್ ಬಚ್ಚನ್‍ನ

ಜಂಜೀರ್ ಚಲನಚಿತ್ರ ಪದೇ ಪದೇ ವೀಕ್ಷಿಸಿದರು ಇದು ಅವರಿಗೆ ಘನತೆಯ ಅಧಿಕಾರಿಯಾಗಿ ವ್ಯವಸ್ಥೆಯನ್ನು  ಬದಲಾಯಿಸಬಹುದು ಎಂಬ ಸ್ಫೂರ್ತಿ ನೀಡಿತು. ಕಾರ್ಯಕ್ರಮದಲ್ಲಿ ಅವರಿಗೆ `ಟೈಗರ್ ಅಶೋಕ್ ಕುಮಾರ್’ ಎಂಬ ಅಡ್ಡ ಹೆಸರು ಬಂದ ಹಿನ್ನೆಲೆಯನ್ನೂ ಚರ್ಚೆ ಮಾಡಲಾಗಿದೆ.

ಅವರು ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿದ್ದಾಗ ತಮ್ಮ ಮೊದಲ ಕ್ರಿಮಿನಲ್ ಪ್ರಕರಣ `ಆಪರೇಷನ್ ಟೈಗರ್’ ಪೂರ್ಣಗೊಳಿಸಿದಾಗ ಅವರಿಗೆ ಈ ಹೆಸರು ಪ್ರಾಪ್ತವಾಯಿತು. ಟೈಗರ್ ಅಶೋಕ್ ತಮ್ಮ ವೀಕ್ಷಕರೊಂದಿಗೆ ತಾವು ನಡೆಸಿದ ಮೊದಲ ಎನ್‍ಕೌಂಟರ್ ಪ್ರಕರಣದ ಕಥೆಯನ್ನೂ ಹಂಚಿಕೊಂಡರು, ಅದು ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಎನ್‍ಕೌಂಟರ್ ಆಗಿದೆ.

ಅದರಲ್ಲಿ ಸಂತೋಷ್ ಹೆಗ್ಡೆ ಪೂರಕ ಸಾಕ್ಷಿಗಳ ಮೂಲಕ ಅವರಿಗೆ ಈ ಪ್ರಕರಣದಲ್ಲಿ ನೆರವಾದರು ಎಂದೂ ಹೇಳಿದರು. ಅವರ ಜೀವನದ ಮತ್ತೊಂದು ಮೈಲಿಗಲ್ಲು ಎಂದರೆ ವೀರಪ್ಪನ್ ವಿರುದ್ಧ ಸ್ಪೆಷಲ್ ಟಾಸ್ಕ್ ಫೋರ್ಸ್‍ಗೆ ನೇಮಕ. ಈ ಹೊಸ ಅಧ್ಯಾಯ ಪ್ರಾರಂಭವಾಗುವ ಮುನ್ನ ಟೈಗರ್ ಅಶೋಕ್ ವೀರಪ್ಪನ್ ದಾಳಿಗಳಿಂದ ಕಳೆದುಕೊಂಡಿದ್ದ ಹಲವು ಜೀವಗಳನ್ನು ಗಮನಿಸಿದ್ದರು, ಅದರಿಂದ ಆಯಾ ಪೊಲೀಸ್ ಅಧಿಕಾರಿಗಳ ಪತ್ನಿಯರ ಅಪಾರ ಸಂಕಟವನ್ನೂ ನೋಡಿದ್ದರು.

ಟೈಗರ್ ಅಶೋಕ್ ಈ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ತಮ್ಮ ಪತ್ನಿಗೆ ಸ್ವತಂತ್ರವಾಗಿರಲು ನೆರವಾದರು. ಈ ಪ್ರಕ್ರಿಯೆಯಲ್ಲಿ ಅವರ ಪತ್ನಿ ನಂಬಬಹುದಾದ ವ್ಯಕ್ತಿಗಳ ಪಟ್ಟಿ ಮಾಡಿಕೊಂಡರು, ಅವರ ರಾಯಲ್
ಎನ್‍ಫೀಲ್ಡ್ ಬುಲೆಟ್ ಮಾರಾಟ ಮಾಡಿ 4-ಚಕ್ರ ವಾಹನ ಕೊಂಡು ಆಕೆಗೆ ವಾಹನಚಾಲನೆ ಹೇಳಿಕೊಟ್ಟರು, ಅವರ ಗೈರುಹಾಜರಿಯಲ್ಲೂ ಸ್ವತಂತ್ರವಾಗಿ ಜೀವನ ಮಾಡಲು ರೂಪಿಸಿದರು.

ಬಿ.ಬಿ.ಅಶೋಕ್ ಕುಮಾರ್ ಭಾರತದ ಯುವಜನರಲ್ಲಿ ದೇಶಭಕ್ತಿ ತುಂಬಬೇಕಾದರೆ ಎನ್.ಸಿ.ಸಿ. ಸೇರುವುದು ಬಹಳ ಮುಖ್ಯ ಎನ್ನುತ್ತಾರೆ, ಶಾಲೆಯಲ್ಲಿ ಎನ್‍ಸಿಸಿ ಕಡ್ಡಾಯ ಮಾಡುವುದು ಶಿಸ್ತು ಹಾಗೂ ದೇಶಭಕ್ತಿ ಮೂಡಿಸಲು
ನೆರವಾಗುತ್ತದೆ ಎನ್ನುತ್ತಾರೆ.

ಶಂಕರ್ ಮಹಾದೇವ್ ಬಿದರಿ ಮತ್ತು ಬಿ.ಬಿ.ಅಶೋಕ್ ಕುಮಾರ್ ಅವರ ಮಹತ್ತರ ಸಾಧನೆಗಳನ್ನು ಕ್ರಮವಾಗಿ ಜೂನ್ 29 ಮತ್ತು ಜೂನ್ 30ರಂದು ರಾತ್ರಿ 9.30ಕ್ಕೆ ಜೀó ಕನ್ನಡ ಮತ್ತು ಜೀó ಕನ್ನಡ ಎಚ್.ಡಿ.ಯಲ್ಲಿ ಮಾತ್ರ
ವೀಕ್ಷಿಸಲು ತಪ್ಪಿಸಿಕೊಳ್ಳಬೇಡಿ.

Leave a Reply

Your email address will not be published.

Social Media Auto Publish Powered By : XYZScripts.com