Cricket world cup : ಹೊಸ ದಾಖಲೆ ಬರೆದ ವಿರಾಟ್ ಪಡೆ, 50ನೇ ಜಯ ಗಳಿಸಿದ ಭಾರತ..

ರೋಸ್ ಬೌಲ್ ಅಂಗಳದಲ್ಲಿ ಅಫ್ಘಾನಿಸ್ತಾನ್ ವಿರುದ್ಧ 11 ರನ್ ಗಳ  ಜಯ ಸಾಧಿಸಿರುವ ಭಾರತ, ವಿಶ್ವಕಪ್ ಕ್ರಿಕೆಟ್ ನಲ್ಲಿ 50ನೇ ಜಯದ ನಗೆ ಬೀರಿದ್ದು, ಈ ಮೂಲಕ  ಈ ಸಾಧನೆ ಮಾಡಿದ ವಿಶ್ವದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಮೊಹಮ್ಮದ್ ಶಮಿ(4/40), ಜಸ್ಪ್ರಿತ್ ಬೂಮ್ರಾ, ಯಜುವೇಂದ್ರ ಚಹಾಲ್, ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಕಬಳಿಸಿದರು.
ಅಫ್ಘಾನ್  ಗೆಲುವಿಗೆ ಕೊನೆಯ ಓವರ್ ನಲ್ಲಿ 16 ರನ್ ಅವಶ್ಯಕತೆ ಇತ್ತು. ರನ್ ನೀಡದಂತೆ ತಡೆದ ಶಮಿ  ಹ್ಯಾಟ್ರಿಕ್ ಸಾಧನೆ ಮಾಡಿ ಬೀಗಿದರು. ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ  ವಿಶ್ವಕಪ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಕೀರ್ತಿಗೆ  ಭಾಜನರಾಗಿದ್ದಾರೆ. ಈ ಮೊದಲು 1987ರಲ್ಲಿ ನ್ಯೂಜಿಲೆಂಡ್ ವಿರುದ್ಧ ಚೇತನ್ ಶರ್ಮಾ ಅವರು  ಮೊದಲು ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
ಶಮಿ ಅವರು ಕೊನೆಯ ಓವರ್  ನಲ್ಲಿ ಮೊಹಮ್ಮದ್ ನಬಿ, ಅಫ್ತಾಬ್ ಆಲಮ್, ಮುಜೀಬ್ ಉರ್ ರಹಮಾನ್ ಅವರನ್ನು ಬಲಿಗೆ ಕೆಡವಿ  ಸಾಧನೆ ಮಾಡಿದರು. ಈ ವರೆಗೆ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟಾರೆ ಎಂಟು ಬಾರಿ ಹ್ಯಾಟ್ರಿಕ್  ಸಾಧನೆ ದಾಖಲಾಗಿದೆ.
ಐದು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ವಿಶ್ವಕಪ್  ನ 90  ಪಂದ್ಯಗಳಲ್ಲಿ 67 ಜಯ ಸಾಧಿಸಿದೆ. 21 ಸೋಲು ಕಂಡಿರುವ ಕಾಂಗರೂ ಪಡೆ, ಒಂದು ಪಂದ್ಯ ಟೈ  ಸಾಧಿಸಿದ್ದು, ಒಂದು ಪಂದ್ಯ ಫಲಿತಾಂಶ ಹೀನವಾಗಿದೆ. ನ್ಯೂಜಿಲೆಂಡ್ 84 ಪಂದ್ಯಗಳಲ್ಲಿ 53  ಗೆಲುವು, 30 ಸೋಲು, ಕಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com