5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ ಪಧಾನಿ ನರೇಂದ್ರ ಮೋದಿ..

5ನೇ ಅಂತರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾದ್ಯಂತ ಎಲ್ಲರಿಗೂ ಶುಭ ಕೋರಿದ್ದಾರೆ. ಅಲ್ಲದೆ ರಾಂಚಿಯ ಮೈದಾನದಲ್ಲಿ ಯೋಗ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದ್ದಾರೆ.

ಯೋಗ ಮಾಡಲು ಮೋದಿ ಅವರು ಗುರುವಾರ ರಾಂಚಿಗೆ ತಲುಪಿದ್ದರು. ಮೋದಿ ಅವರ ಜೊತೆ ಯೋಗ ಮಾಡಲು ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಹೆಸರನ್ನು ನೊಂದಾಯಿಸಿದ್ದರು. ಆದರೆ ಜನ ಹೆಚ್ಚಾದ ಕಾರಣ ಅವರಿಗೆ ಹತ್ತಿರದ ಬೇರೆ ಮೈದಾನದಲ್ಲಿ ಯೋಗದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಾರಿ ‘ಯೋಗ್ ಫಾರ್ ಹಾರ್ಟ್’ ಥೀಮ್‍ನಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಪ್ರಭಾತ್ ತಾರಾ ಮೈದಾನದಲ್ಲಿ ಮಾತನಾಡಿದ ಅವರು, ಯೋಗವು ಶಿಸ್ತು, ಸಮರ್ಪಣೆ ಹಾಗೂ ನಾವು ಅದನ್ನು ಜೀವನದುದ್ದಕ್ಕೂ ಪಾಲಿಸಬೇಕು. ಯೋಗವು ವಯಸ್ಸು, ಬಣ್ಣ, ಜಾತಿ, ಪಂಥ, ಸಿರಿತನ- ಬಡತನ, ಪ್ರಾಂತ್ಯ ಮತ್ತು ಗಡಿಯ ಭೇದವನ್ನು ಮೀರಿದೆ. ಯೋಗ ಎಲ್ಲರದ್ದು ಹಾಗೂ ಎಲ್ಲರೂ ಯೋಗಕ್ಕಾಗಿ ಇದ್ದಾರೆ ಎಂದು ಹೇಳಿದ್ದಾರೆ.

ಡ್ರಾಯಿಂಗ್ ರೂಮಿನಿಂದ ಬೋರ್ಡ್ ರೂಮಿನವರೆಗೆ, ನಗರದ ಉದ್ಯಾನವನಗಳಿಂದ ಹಿಡಿದು ಕ್ರೀಡಾ ಸಂಕೀರ್ಣದವರೆಗೆ ಇಂದು ಯೋಗ ಮಾಡಲಾಗುತ್ತಿದೆ. ಇಂದಿನ ಬದಲಾಗುತ್ತಿರುವ ಕಾಲದಲ್ಲಿ ನಾವು ಆರೋಗ್ಯದ ಮೇಲೆ ಗಮನಹರಿಸಬೇಕು. ಯೋಗದಿಂದ ಮಾತ್ರ ನಮಗೆ ಈ ಶಕ್ತಿ ಸಿಗಲು ಸಾಧ್ಯ ಎಂದರು.

28 ಶಾಲೆಯಿಂದ 2,600ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ಕ್ರೀನ್‍ಗಳನ್ನು ಹಾಕಲಾಗಿತ್ತು. ಸುರಕ್ಷಿತೆಗಾಗಿ 100ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿತ್ತು. ಅಲ್ಲದೆ 4 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕೂಡ ನೇಮಿಸಲಾಗಿತ್ತು.

ಈ ಬಾರಿ 5ನೇ ಅಂತರಾಷ್ಟ್ರೀಯ ಯೋಗ ದಿನವಾಗಿದ್ದು, ಮೊದಲು ಅಂದರೆ 2015ರಲ್ಲಿ ದೆಹಲಿಯಲ್ಲಿ ಯೋಗ ಆಚರಿಸಲಾಗಿತ್ತು. ಬಳಿಕ ಚಂಡಿಗಢ್, ಲಕ್ನೋ, ದೆಹರದೂನ್‍ನಲ್ಲಿ ಆಚರಿಸಲಾಗಿತ್ತು. ಈ ಬಾರಿ ಮೋದಿಯವರು ರಾಂಚಿಯಲ್ಲಿ ಯೋಗ ದಿನವನ್ನು ಆಚರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com