ಆರ್‌ಎಸ್‌ಎಸ್‌ನವರು ಧರಿಸುವಂಥ ಖಾಕಿ ಚಡ್ಡಿ ಹಾಕಿದ ನಟಿ ಪ್ರಿಯಾಂಕಾ ಚೋಪ್ರಾ..

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಆಗಾಗ ಚಿತ್ರ-ವಿಚಿತ್ರ ಉಡುಪಿನಲ್ಲಿ ಕಾಣಿಸಿಕೊಳ್ಳುವುದು ವಿಶೇಷವೇನಲ್ಲ. ಆದರೆ ಈ ಬಾರಿ ಅವರು ಚಡ್ಡಿಯಲ್ಲಿ ಕಾಣಿಸಿಕೊಂಡು ಟ್ರೋಲ್‌ ಗೆ ಒಳಗಾಗಿದ್ದಾರೆ.

ಅಷ್ಟಕ್ಕೂ ಅವರು ಆರ್‌ಎಸ್‌ಎಸ್‌ನವರು ಧರಿಸುವಂಥ ಖಾಕಿ ಚಡ್ಡಿಯಲ್ಲಿ ಕಾಣಿಸಿಕೊಂಡಿದ್ದೇ ಇಷ್ಟಕ್ಕೆಲ್ಲ ಕಾರಣ. ಎದ್ದು ಕಾಣಿಸುವ ಖಾಕಿ ಚಡ್ಡಿ, ಕಪ್ಪು ಟಾಪ್ ಹಾಗೂ ತೆರೆದ ಕಪ್ಪು ಗೌನ್ ಧರಿಸಿಕೊಂಡು ಅವರು ನ್ಯೂಯಾರ್ಕ್‌ನ ಅಪಾರ್ಟ್‌ಮೆಂಟ್‌ನಿಂದ ಹೊರಬರುತ್ತಿದ್ದ ಚಿತ್ರ ವೈರಲ್ ಆಗಿತ್ತು.

ಖಾಕಿ ಚಡ್ಡಿಯನ್ನೇ ಕೇಂದ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಲವರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. ‘ಪ್ರಿಯಾಂಕಾ ಆರ್‌ಎಸ್‌ಎಸ್‌ನ ಇಂಟರ್ನ್ಯಾಷನಲ್ ಅಂಬಾಸಡರ್’, ‘ಆರ್‌ಎಸ್‌ಎಸ್ ಸಭೆಯಿಂದ ಹೊರ ಬರುತ್ತಿರುವ ಪ್ರಿಯಾಂಕಾ’ ಎಂಬುದೂ ಸೇರಿ ಹಲವು ಕಮೆಂಟ್‌ಗಳು ಬಂದಿವೆ.

 

Leave a Reply

Your email address will not be published.

Social Media Auto Publish Powered By : XYZScripts.com