ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ : ಬದಲಾಯ್ತು ಇಂಡಿಯಾ ಆಟಗಾರರ ಹೇರ್ ಸ್ಟೈಲ್

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ 89 ರನ್‍ಗಳ ಜಯಗಳಿಸಿರುವ ಭಾರತ ತಂಡ ಈಗ ಜಾಲಿ ಮೂಡ್‍ನಲ್ಲಿದೆ. ಪಾಕ್ ವಿರುದ್ಧದ ಗೆಲುವಿನ ನಂತರ ಇಂಡಿಯಾ ಆಟಗಾರರು ಕೂಲ್ ಹೇರ್ ಸ್ಟೈಲ್ ಮಾಡಿಸಿ ಮಿಂಚುತ್ತಿದ್ದಾರೆ.

ವಿಶ್ವಕಪ್‍ನಲ್ಲಿ ಬಿಡುವಿಲ್ಲದ 11 ದಿನಗಳಲ್ಲಿ 4 ಪಂದ್ಯಗಳನ್ನು ಆಡಿದ ಭಾರತ ತಂಡ, ಬದ್ಧ ವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಐದು ದಿನಗಳ ವಿರಾಮವನ್ನು ಸಂಪೂರ್ಣವಾಗಿ ಬಳಸಿಕೊಂಡು ಶನಿವಾರ ಅಫ್ಘಾನಿಸ್ತಾನದ ವಿರುದ್ಧ ಪಂದ್ಯಕ್ಕೂ ಮುನ್ನ ಲಂಡನ್‍ನಲ್ಲಿ ಬಗೆ ಬಗೆಯ ಹೇರ್ ಸ್ಟೈಲ್ ಮಾಡಿಸಿಕೊಳ್ಳುತ್ತಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್ ಧೋನಿ, ಹಾರ್ದಿಕ್ ಪಾಂಡ್ಯ ಮತ್ತು ಯುಜ್ವೇಂದ್ರ ಚಾಹಲ್ ಅವರು ತಮ್ಮ ಕೇಶವಿನ್ಯಾಸವನ್ನು ಬದಲಿಸಿದ್ದಾರೆ. ಇನ್ನೂ ಹಾರ್ದಿಕ್ ಪಾಂಡ್ಯ ಮತ್ತು ಧೋನಿ ಅವರು ಹೇರ್ ಸ್ಟೈಲ್ ಮಾಡಿರುವ ಪ್ರಸಿದ್ಧ ಕೇಶವಿನ್ಯಾಸಗಾರ ಅಲಿಮ್ ಹಕೀಮ್ ಅವರು ಬುಧವಾರ ಈ ಫೋಟೊವನ್ನು ಟ್ವಿಟ್ಟರ್‍ ನಲ್ಲಿ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಚಾಹಲ್ ಅವರು ಕೂಡ ತಮ್ಮ ಹೊಸ ಹೇರ್ ಸ್ಟೈಲ್‍ನನ್ನು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಶಾರ್ಟ್ ಹೇರ್‍ನೊಂದಿಗೆ ಸ್ಪೋರ್ಟ್ಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೇರ್ ಸ್ಟೈಲ್ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದೆ.

ಭಾನುವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್‍ನಲ್ಲಿ ಆಡಿದ 4 ಪಂದ್ಯದಲ್ಲಿ 3 ರಲ್ಲಿ ಜಯಗಳಿಸಿ ಒಂದು ಪಂದ್ಯ ಮಳೆಯಿಂದ ರದ್ದು ಆಗಿದೆ. ಇನ್ನೂ ಸೆಮಿ ಫೈನಲ್ ತಲುಪುವ ಹಾದಿಯಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನದ ವಿರುದ್ಧ ಸೌಥಾಂಪ್ಟನ್‍ನಲ್ಲಿ ಶನಿವಾರ ಆಡಲಿದೆ.

https://www.instagram.com/indiancricketteam/?utm_source=ig_embed

Leave a Reply

Your email address will not be published.

Social Media Auto Publish Powered By : XYZScripts.com