Cricket world cup : ಅದೇ ಹಾಡು, ಅದೇ ರಾಗ ಮತ್ತೆ ಪಾಕ್ ಮೇಲೆ ಗೆದ್ದ Team India…

ವಿಶ್ವದ ಗಮನವನ್ನು ತನ್ನತ್ತ ತಿರುಗಿಸಿಕೊಂಡಿರುವ ವಿಶ್ವ ಕಪ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಭಾರತದ ದಾಂಡಿಗರು ಪಾಕಿ ದಾಳಕೋರರ ಹುಟ್ಟಡಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ವರುಣನ ಕಣ್ಣುಮುಚ್ಚಾಲೆಯ ಮಧ್ಯಯೂ ಶ್ರೇಟ್ಠ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಸುಲಭ ಗೆಲವು ತನ್ನದಾಗಿಸಿಕೊಂಡಿತು…

ಮಳೆಯ ಭೀತಿ ಮಾಯವಾಗಿ ಸಮಯಕ್ಕೆ ಸರಿಯಾಗ ಆರಂಭವಾದ ಪಂದ್ಯದ ಮೊದಲಾರ್ಧದಲ್ಲಿ ಭಾರತದ ಅಗ್ರ ಕ್ರಮಾಂಕದ ದಾಂಡಿಗರು ಪಾಕಿಸ್ತಾನದ ಬೌಲರುಗಳನ್ನು ಮನಬಂದಂತೆ ಚಚ್ಚಿದರು.

ಫಲವಾಗಿ ಕೊಹ್ಲಿ ಬಾಯ್ಡ್ ನಿಗದಿತ 50 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 336 ರನ್ ದಾಖಲಿಸಿದರು. 77 ರನ್ ಮಾಡಿದ ಕೊಹ್ಲಿ ಅತಿ ವೇಗದ 11 ಸಾವಿರ ರನ್ ಸರದಾರನೆನಿಸಿದ್ದೇ ಅಲ್ಲದೇ ಈ ಹಾದಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಮುರಿದರು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಭಾರತಕ್ಕೆ ಸಿಕ್ಕಿತು. ಧವನ್ ಗಾಯಾಳುವಾದ ಪರಿಣಾಮ ಎಂದಿನ ಆರಂಭಿಕ ಜೋಡಿ ಬದಲಾಗಿ ರೋಹಿತ್ ಶರ್ಮಾ ಜೊತೆ ಕೆಎಲ್ ರಾಹುಲ್ ಕಣಕ್ಕಿಳಿದರು.

ರಾಹುಲ್ ಎಚ್ಚರಿಕೆ ಮಿಶ್ರಿತ ಆಟಕ್ಕೆ ಮುಂದಾದರೇ ರೋಹಿತ್ ಶರ್ಮಾ ಆರಂಭದಿಂದಲೇ ಆಕ್ಷಮಣಕಾರಿ ಆಟಕ್ಕಿಳಿದರು. ಇದು ಪಾಕ್ ಬೌಲರುಗಳನ್ನಿ ವಿಚಲಿತಗೊಳಿಸಿತು.ಈ ಜೋಡಿ ಮೊದಲ ವಿಕೆಟ್‌ಗೆ 136 ರನ್ ಗಳಿಸಿತು. ಆರಂಭಿಕನಾಗಿ ಕಣಕ್ಕಿಳಿದ ಕನ್ನಡಿಗ ಕೆ ಎಲ್ ರಾಹುಲ್ 58 ರನ್ ಗಳಿಸಿ ವಹಾಬ್ ರಿಯಾಜ್ ಬೌಲಿಂಗ್ ನಲ್ಲಿ ಔಟಾದರು.

ಈ ಮಧ್ಯೆ ರೋಹಿತ್ ಶರ್ಮಾ ಈ ಪಂದ್ಯಾವಳಿಯ ಎರಡನೇ ಹಾಗೂ ವೃತ್ತಿಜೀವನದ 24ನೇ ಶತಕ ಬಾರಿಸಿದರು. 85 ಎಸೆತಗಳಲ್ಲಿ 9 ಬೌಂಡರಿಗಳ 3 ಸಿಕ್ಸರ್ ಸಹಾಯದಿಂದ ರೋಹಿತ್ ಶರ್ಮಾ ಶತಕ ದಾಖಲಿಸಿದರು. ದಕ್ಷಿಣ ಆಫ್ರಿಕ ವಿರುದ್ಧ ಅಜೇಯ 122 ರನ್ ಮಾಡಿದ್ದರು.

ಅಂತಿಮವಾಗಿ ರೋಹಿತ್ ಶರ್ಮಾ 140 (140 ಎಸೆತ, 14 ಬೌಂಡರಿ ಹಾಗೂ 3 ಸಿಕ್ಸರ್) ರನ್ ಗಳಿಸಿ ನಿರ್ಗಮಿಸಿದರು. ಬಳಿಕ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಸುಭದ್ರತೆಯೆಡೆಗೆ ಸಾಗಿಸುವ ಕಾಯಕವನ್ನು ಸಮರ್ಥವಾಗಿ ಮಾಡಿದರು.

ಇದಕ್ಕೆ ಉತ್ತರವಾಗಿ  ಪಾಕಿಸ್ತಾನದ ಪರ ಆರಂಭಿಕ ಆಟಗಾರ ಫಕರ್‍ ಜಮಾನ್ 62, ಬಾಬರ್‍ ಅಜಂ 48 ಹಾಗೂ ಇಮಾದ್ ವಾಸೀಂ 46 ರನ್ ಗಳಿಸಿದ್ದು ಬಿಟ್ಟರೇ ಉಳಿದವರು ವಿಫಲರಾದರು. ಭಾರತದ ಪರ ಶಂಕರ್‍, ಪಾಂಡ್ಯ ಹಾಗೂ ಯಾದವ್ ತಲಾ ಎರಡು ವಿಕೆಟ್ ಹಂಚಿಕೊಂಡರು.

ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಭಜ್‌ಋಇ ಬ್ಯಾಟಿಂಗ್ ಮತ್ತು ಮೊನಚಾದ ದಾಳಿ ನೆರವಿನಿಂದ ಭಾರತ ತಂಡವು ಡಕ್‌ವರ್ತ್‌ ಲೂಯಿಸ್ ನಿಯಮದಡಿ 89 ರನ್ನುಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದು 1992ರಿಂದ ಆರಂಭವಾದ ಜಯದ ಪರಂಪರೆಯನ್ನು ಮುಂದುವರಿಸಿತು.

ಇದು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸತತ ಏಳನೇ ಗೆಲುವಾಗಿದ್ದು, ಪಾಕಿಗರು ಒಂದೂ ಪಂದ್ಯ ಗೆದ್ದಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com