Hockey FIH series : ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ಚಾಂಪಿಯನ್.

ಭಾರತ ಎಫ್ಐಎಚ್ ಸೀರಿಸ್ ಚಾಂಪಿಯನ್
ವರುಣ್ ಕುಮಾರ್ ಹಾಗೂ ಹರ್ಮನ್ ಪ್ರೀತ್ ಸಿಂಗ್  ಅವರು ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಎಫ್ಐಎಚ್ ಪುರುಷರ ಹಾಕಿ ಸೀರಿಸ್ ಫೈನಲ್ ನಲ್ಲಿ 5-1 ರಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಭಾರತ ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿತು. ಆರಂಭದಲ್ಲೇ ವರುಣ್ ಕುಮಾರ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಿದರು. ಇದೇ ಅವಧಿಯಲ್ಲಿ ಸಿಕ್ಕ ಮತ್ತೊಂದು ಪೆನಾಲ್ಟಿ ಕರ್ನಾರ್ ಅವಕಾಶದಲ್ಲಿ ಹರ್ಮನ್ ಎದುರಾಳಿ ಗೋಲಿಯನ್ನು ವಂಚಿಸಿ, ಅಂತರವನ್ನು ಹಿಗ್ಗಿಸಿದರು.
ಆರಂಭದಲ್ಲಿ ಹಿಡಿತ ಸಾಧಿಸಿದ್ದ ಭಾರತ ಎರಡನೇ ಅವಧಿಯಲ್ಲೂ ಭರ್ಜರಿ ಪ್ರದರ್ಶನ ಮುಂದುವರೆಸಿತು. 25ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಪೆನಾಲ್ಟಿ ಶಾಟ್ ಅವಕಶದಲ್ಲಿ ತಂಡದ ಗೋಲಿನ ಅಂತರ ಹೆಚ್ಚಿಸುವಲ್ಲಿ ಸಫಲರಾದರು.
3-0 ಮುನ್ನಡೆ ಸಾಧಿಸಿದ್ದ ಆತಿಥೇಯ ತಂಡ ದ.ಆಫ್ರಿಕಾ ತಂಡದ ಸವಾಲನ್ನು ಮೆಟ್ಟಿ ನಿಂತಿತು. ಮೂರನೇ ಅವಧಿ ಹಾಗೂ ನಾಲ್ಕನೇ ಅವಧಿಯಲ್ಲಿ ತಲಾ ಒಂದು ಗೋಲು ಬಾರಿಸಿದ ಭಾರತ ಅಬ್ಬರಿಸಿತು. ಕೊನೆಯ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಒಂದು ಗೋಲು ದಾಖಲಿಸಿ ಅಂತರವನ್ನು ಕಡಿಮೆಯಾಗಿಸಿತು.

Leave a Reply

Your email address will not be published.

Social Media Auto Publish Powered By : XYZScripts.com