Happy fathers day : ಪ್ರಪಂಚದಲ್ಲಿ ಅತೀ ಶ್ರೇಷ್ಠ,ಸುರಕ್ಷಿತ ಸ್ಢಳ ತಾಯಿಯ ಮಡಿಲು ಮತ್ತು ತಂದೆಯ ಹೆಗಲು..

ಡಾ.ಭಾಗ್ಯಜ್ಯೋತಿ ಕೋಟಿಮಠ

ಪ್ರಪಂಚದಲ್ಲಿ ಅತೀ ಶ್ರೇಷ್ಠ,ಸುರಕ್ಷಿತ ಸ್ಢಳವೆಂದರೆ ತಾಯಿಯ ಮಡಿಲು ಮತ್ತು ತಂದೆಯ ಹೆಗಲಂತೆ.

 

“The gretest gift I ever had came from God:I call him Dad”

ಅದನ್ನೇ William Wordsworth—“Father!-toGod  himself we cannot give a holier name”

ಹೀಗೆ ತಂದೆಯ ಬಗ್ಗೆ  ಹೇಳುತ್ತಾ ಹೋದಂತೆ ಮುಗಿಯುವದೇ ಇಲ್ಲ.

ಮೊನ್ನೆ ಒಂದು ತರಬೇತಿಯಲ್ಲಿ ಉಪನ್ಯಾಸ ಕೇಳುತ್ತಾ ಕುಳಿತಿದ್ದೆ. ಆಗ ನನ್ನ ಮಿತ್ರೆಯೊಬ್ಬಳಿಗೆ ಕರೆ ಬಂದಿತು.ಅದು ಅವಳ ಅಪ್ಪನ ಕರೆಯಾಗಿತ್ತು.ಅದರಲ್ಲಿ ಮೂಡಿ ಬರುತ್ತಿದ್ದ ಕರೆಯಲ್ಲಿ”Appa calling”ಎಂದು ಇತ್ತು.ಅದನ್ನು ನೋಡಿದ ಕೂಡಲೇ ನ್ನ ಕಣ್ಣಂಚಲ್ಲಿ ನನಗೇ ಅರಿವೇ ಇಲ್ಲದಂತೆ ಕಣ್ಣೀರು ತುಂಬಿತು.ಹೌದು, ಸಂಬಂಧಿಕರ ಸಾವನ್ನು ಕಂಡ ನಾನು ಅವರಿಗೇ ಸಮಾಧಾನ  ಸಾವನ್ನು ಕಂಡ ನಾನು ಅವರಿಗೇ ಸಮಾಧಾನ ಹೇಳುತ್ತಿದ್ದೆ..ಆದರೆ ನನ್ನ ಜೀವನದ ಅತ್ಯಮೂಲ್ಯ ವ್ಯಕ್ತಿ ನನ್ನಪ್ಪ ನನ್ನ ಬಿಟ್ಟು ಹೋದಾಗ,ತುಂಬಾ ಗಾಬರಿಯಲ್ಲಿದ್ದೆ. ನನಗೇ ಏನು ತಿಳಿಯದಂತ ಆಗಿತ್ತು.ಆದರೆ ಈಗೀಗ ನನ್ನಪ್ಪ ಒಮ್ಮಲೇ ಆಗಿ ಎದೆ ಝಲ್ಲೆಂದು ಕುಸಿಯುತ್ತದೆ.ನಾನು ನನ್ನಪ್ಪನ ಜೊತೆ ಮಾತನಾಡಬೇಕೆಂದರೆ  ಯಾರೊಂದಿಗೆ  ಮಾತನಾಡಲಿ, ಒಮ್ಮೆ ಕಳೆದು ಹೋದ ಜೀವ ಮತ್ತೇ ಬರಲಿಕ್ಕೆ ಸಾಧ್ಯವೇ ಇಲ್ಲ.ಇದೊಂದು ಅನಿವಾರ್ಯ ಸತ್ಯ. ಅಂತಹ ಪ್ರಸಂಗಗಳಲ್ಲೂ ನಿಜಕ್ಕೂ ಪ್ರತಿ ಮನುಷ್ಯನಲ್ಲೂ ಸಂಭವಿಸಿಯೇ ತೀರುತ್ತವೆ.ಆಆದರೆ ಅವರ ವಯಕ್ತಕ ನೋವನ್ನು ಯಾರು ಪಡೆಯಲು ಸಾಧ್ಯವಿಲ್ಲ.ಇನ್ನೂ ಯಾರೊಂದಿಗೆ ನಾನು ಚಾಷ್ಟಿ ಮಾಡಲಿ?ಯಾರೊಂದಿಗೆ ಜಗಳವಾಡಲಿ?ಯಾರ ಆರೋಗ್ಯ ವಿಚಾರಿಸಲಿ? ಅದೆಲ್ಲಾ ಒಂದು ಸಿನಿಮೀಯ ರೀತಿ ಎಂದೆನಿಸುತ್ತದೆ. ಅವರು ನಿಂತಿದ್ದು,ಊಟ ಮಾಡಿದ್ದು,ನಡೆದಾಡಿದ್ದು,ಎಲ್ಲವೂ ….ಎಲ್ಲವೂಉ ನೆನಪಷ್ಟೆ.

ಆರು ಮಕ್ಕಳ ನನ್ನ ತಂದೆ ಒಬ್ಬರನ್ನೂ ನಿರ್ಲಕ್ಷಿಇಸದೆ,ಎಲ್ಲರಿಗೂ ಉತ್ತಮ ವಿದ್ಯಾಭ್ಯಾಸ,ನೌಕರಿ,ಅವರೆಲ್ಲ ಇಷ್ಟ-ಕಷ್ಟಗಳಿಗೆ ಭಾಗಿಯಾದರಲ್ಲ,ಅವರ ಋಣ ತೀರಿಸಲಾಯಿತೇ? ನಮಗೆ ನಾವು ಮಕ್ಕಳು ನಮ್ಮ ಸಂಸಾರ ಭಾರ,ನಮ್ಮ ನೌಕರಿಯ ಒದ್ದಾಟದಲ್ಲಿ ಕ್ಷಣ-ಕ್ಷಣಕ್ಕೂಆ ಸಂಗತಿಯಿಂದ ದೂರವಾದಾಗಬಹುದು. ಆದರೆ, ಅಷ್ಟು ವರ್ಷಗಳ ಕಾಲ ದಾಂಪತ್ಯ ಅನುಭವಿಸಿ ನನ್ನ ತಂದೆಯ ಪ್ರತಿ ಹೆಜ್ಜೆಯೊಡನೆ ಹೆಜ್ಜೆ ಹಾಕಿದ ನನ್ನವ್ವ ತನ್ನ ಪತಿಯ ಅಗಲಿಕೆಯನ್ನು ಹೇಗೆ ಮರೆತಾಳು?ಹಿರಿಯ ಮುತ್ತೈದೆಯಾಗಿ ಮೆರೆದ ನನ್ನವ್ವನ ಮೂಖ ನೋಡಲು ಆಗದು. ಕಾಲ ಬದಲಾದರು ಅವಳು ಬದಲಾಗಿದೇ ಹಳೆಯ ಸಂಪ್ರದಾಯ ಮುಂದುವರಿಸಿದ್ದಾಳೆ.ನನ್ನಪ್ಪ ನನ್ನೊಂದಿಗಿಲ್ಲ,ಆದರೆ ನನ್ನಪ್ಪನ ಸಾಹಿತ್ಯವನ್ನೇ ರೂಡಿಸಿಕೊಂಡ ನಾನು   ಈ ಬರವಣಿಗೆಯಲ್ಲಿ,ಅವರ ರೀತಿಯಲ್ಲಿ ಶಿಕ್ಷಕಿಯಾದ ನಾನು ನನ್ನ ಕಲಿಸುವಿಕೆಯಲ್ಲಿ ಅವರನ್ನು ಕಾಣುತ್ತಿದ್ದೇನೆ.ಏನೇ ಇರಲೀ ರಾಜಾನಾಗಿ ಬಾಳಿ, ರಾಜನಾಗಿ ಇಹಲೋಕ ತೊರೆದ ರೀತಿ ಜನಪದ ಗೀತೆ ನೆನಪಿಸುತ್ತದೆ.

“ಉಂಡು ಕೂತಿಹ ನನ್ನ ದುಂಡು ಮೊರೆಯ ತಂದೆ/

ಬಿಂದುಲಿಯ ಬೇಡು ನನ ಕಂದ//

ಬಂದುಲಿಯ ಬೇಡು ನನ ಕಂದ

ನಿಮ್ಮಜ್ಜ ಬಿಂದಿಗೊನ್ನಿರುವ ದೊರೆ ಕಾಣೋ//

ನನಗೆ ಉಸಿರು ನೀಡಿ ನನ್ನು ಒಂದು ವ್ಯಕ್ತಿಯಾಗಿಸಿದ,ನನ್ನಪ್ಪನಿಗೆ ತಂದೆ ದಿನದಂದು ಧನ್ಯವಾದ.

ಹಿಂದೆ ತಂದೆ ಎಂದರೆ ಒಂದು ಭಯ,ಗೌರವದ ಭಾವನೆಯಿತ್ತು.ಆದರೆ ಈಗ ತಂದೆಯ ಕಲ್ಪನೆ ಪೂರ್ತಿಯಾಗಿ ಬದಲಾಗಿದೆ.ಮಕ್ಕಳ ಎಲ್ಲ ಕೆಲಸವನ್ನು ತಾಯಿಯಷ್ಟೇ ತಂದೆ ಮಾಡಬಹುದು.ಅದೇ ರೀತಿ ನನ್ನಪ್ಪ ನಾವು ವಯಸ್ಕರಾದಂತೆ ನಮಗೆ ಒಂದು ರೀತಿಯ “friend” ಆಗಿದ್ದರು.ಮೂಲತಃ ಶಿಕ್ಷಕರೂ,ಸಾಹಿತಿಯೂ ಆಗಿದ್ದ ಅವರು ನಮಗೆ ಮೌಲ್ಯವನ್ನೂ ಕಲಿಸಿಕೊಟ್ಟರು.ಹೀಗೆ ಈ ಭಾವಗಳಲ್ಲೇ ಅವರನ್ನು ಕಾಣುತ್ತಿದ್ದೇನೆ.

Leave a Reply

Your email address will not be published.

Social Media Auto Publish Powered By : XYZScripts.com