ಎಎಫ್ಎಚ್ ಸೀರಿಸ್ ಫೈನಲ್ ಟೂರ್ನಿ : ಸೆಮಿಫೈನಲ್ಸ್ ಗೆದ್ದ ಭಾರತಕ್ಕೆ ಒಲಿಂಪಿಕ್ಸ್ ಟಿಕೆಟ್

ಭುವನೇಶ್ವರ್ ದಲ್ಲಿ ನಡೆದಿರುವ ಎಎಫ್ಎಚ್ ಸೀರಿಸ್ ಫೈನಲ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿ 9-2 ಗೋಲಗಳಿಂದ ಜಪಾನ್ ತಂಡವನ್ನು ಮಣಿಸಿ, 2020 ರಲ್ಲಿ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ಪರ ನೂರನೇ ಪಂದ್ಯವನ್ನು ಆಡಿದ ಹರ್ಮನ್ ಪ್ರೀತ್ ಸಿಂಗ್ (7ನೇ ನಿಮಿಷ), ವರುಣ್ ಕುಮಾರ್ (14ನೇ ನಿಮಿಷ), ರಮಣ್ ದೀಪ್ ಸಿಂಗ್ (23, 27ನೇ ನಿಮಿಷ), ಹಾರ್ದಿಕ್ ಸಿಂಗ್ (25ನೇ ನಿಮಿಷ), ಗುರ್ಸಹಿಬಿಜತ್ ಸಿಂಗ್ (43ನೇ ನಿಮಿಷ), ವಿವೇಕ್ ಸಾಗರ್ (47ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು. ಜಪಾನ್ ಪರ 2 ಹಾಗೂ 20ನೇ ನಿಮಿಷದಲ್ಲಿ ಗೋಲು ಬಾರಿಸಿತು.
ಮೊದಲಾವಧಿಯಲ್ಲಿ 1-1 ರಿಂದ ಸಮಬಲದಲ್ಲಿ ಸಾಗಿದ್ದ ಪಂದ್ಯ, ಎರಡನೇ ಅವಧಿಗೆ ರೋಚಕತೆ ಹುಟ್ಟಿಸಿತ್ತು. ಎರಡನೇ ಅವಧಿಯ ಆರಂಭದಲ್ಲಿ ಜಪಾನ್ ಮತ್ತೊಂದು ಗೋಲು ದಾಖಲಿಸಿ ಅಂತರವನ್ನು 2-2ಕ್ಕೆ ಸಮನಾಗಿಸಿತು.
ಎರಡನೇ ಅವಧಿಯಲ್ಲಿ ರಮಣ್ ದೀಪ್ ಹಾಗೂ ಹಾರ್ದಿಕ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿದರು. ಮೂರನೇ ಅವಧಿಯಲ್ಲೂ ಭಾರತ ತಂಡ ರಡು ಗೋಲು ಬಾರಿಸಿತು. ಅಲ್ಲದೆ ಕೊನೆಯ ಅವಧಿಯಲ್ಲಿ ವಿವೇಕ್ ಪ್ರಸಾದ್ 47ನೇ ನಿಮಿಷದಲ್ಲಿ ಗೋಲು ದಾಖಲಿಸಿ ಆರ್ಭಟಿಸಿದರು. ಕೊನೆಯ ವರೆಗೂ ಗೋಲು ಬಾರಿಸುವ ಜಪಾನ್ ಆಸೆ ಫಲಿಸಲಿಲ್ಲ.
ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 2-1 ರಿಂದ ಅಮೆರಿಕ ವಿರುದ್ಧ ಜಯ ಸಾಧಿಸಿ, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯುವದರೊಂದಿಗೆ ಓಲಿಂಪಿಕ್ಸ್ ಟಿಕೆಟ್ ಪಡೆಯಿತು.

Leave a Reply

Your email address will not be published.

Social Media Auto Publish Powered By : XYZScripts.com