ಕೆಲಸದ ನಡುವೆ ವ್ಯಾಯಾಮಕ್ಕೆ ಸಮಯ ಸಿಗುತ್ತಿಲ್ಲವೇ…? ಹಾಗಾದ್ರೆ ಹೀಗೆ ಮಾಡಿ..

ಇವತ್ತು ಫಾಸ್ಟ್ ಜಮಾನಾದಲ್ಲಿ ನಾವು ನಮಗಾಗಿ ಕೊಂಚ ಸಮಯ ಕೊಡುವುದು ಕಷ್ಟವಾಗಿ ಹೋಗಿದೆ. ಹೆಚ್ಚಿನ ಮಂದಿ ಆರೋಗ್ಯ ಕಾಳಜಿ ಬಗ್ಗೆ  ಸಬೂಬು ನೀಡೋದು ಅಯ್ಯೋ ಟೈಮೇ ಇಲ್ಲಾ ಅನ್ನೋದು ಸಾಮನ್ಯವಾಗಿಬಿಟ್ಟಿದೆ. ಆದರೆ ನೀವುಗಳು ಆರೋಗ್ಯದ ವಿಚಾರದಲ್ಲಿ ಸಮಯವೇ ಇಲ್ಲ ಎಂದೇಳಬೇಡಿ. ಯಾಕಂದ್ರೆ ದಿನಕ್ಕೆ ಕನಿಷ್ಟ 30 ನಿಮಿಷ, ವಾರಕ್ಕೆ 150 ನಿಮಿಷಗಳ  ವ್ಯಾಯಾಮದ ಅಗತ್ಯವಿದೆ. ಹೀಗಾಗಿ ವ್ಯಾಯಾಮಕ್ಕಾಗಿ ನಿಗಧಿ ಸಮಯ ಇಡುವುದು ತುಂಬಾನೇ ಮುಖ್ಯ. ಹಾಗಾದ್ರೆ ವ್ಯಾಯಾಮಕ್ಕಾಗಿ ಸಮಯ ಮಾಡಿಕೊಳ್ಳುವುದು ಹೇಗೆ..?

ಊಟದ ಬಳಿಕ ಲಘು ನಡಿಗೆ – ಇದು ಅನಾರೋಗ್ಯಕರ ಅಭ್ಯಾಸ. 20 ನಿಮಿಷ ನಡಿಗೆ ಜೀರ್ಣಕ್ರಿಯೆಗೆ ಸಹಕಾರಿ. ಜೊತೆಗೆ ಆಹಾರದಲ್ಲಿರುವ ಕೊಬ್ಬು ನಡಿಗೆಗೆ ದೇಹ ಬಳಿಸಿಕೊಳ್ಳುತ್ತದೆ.

ಟಿವಿ ವೀಕ್ಷಣದಲ್ಲೇ ಭಾರ ಎತ್ತಿ – ಸ್ನಾಯುಗಳು ದೃಢಗೊಳ್ಳಲು ಡಂಬಲ್ ಎತ್ತಿ. ಇದರಿಂದ ಸ್ನಾಯುಗಳು ದೃಢಗೊಳ್ಳುತ್ತವೆ.

ಮೆಟ್ಟಿಲುಗಳನ್ನು ಬಳಕೆ ಮಾಡಿ – ಇದರಿಂದ ದೇಹಕ್ಕೆ ಪರಿಪೂರ್ಣ ವ್ಯಾಯಾಮ ದೊರೆಯುತ್ತದೆ. ಮೆಟ್ಟಿಲ ನಡಿಗೆ 35% ಕ್ಯಾಲರಿಗಳನ್ನು ಕಡಿಮೆ ಮಾಡುತ್ತದೆ.

ಬೆಳಿಗ್ಗೆ ನಡಿಗೆ : ಬೆಳಿಗ್ಗೆ ನಡಿಗೆಯಿಂದ ಎಳಿ ಬಿಸಿಲು, ತಾಜಾ ಗಾಳಿ, ಇಡೀ ದಿನ ಫ್ರೆಶ್ ಆಗಿರಲು ಸಾಧ್ಯವಾಗುತ್ತದೆ.

ಸಾಧ್ಯವಾದ ಆಟಗಳನ್ನು ಆಡಿ : ಸುಲಭ ಆಟಗಳನ್ನು ಆಡುವುದರಿಂದ ಒತ್ತಡಗಳು ನಿವಾರಣೆಯಾಗುತ್ತವೆ.

Leave a Reply

Your email address will not be published.

Social Media Auto Publish Powered By : XYZScripts.com